Loading..!

ಭಾರತೀಯ ತೈಲ ನಿಗಮ ನಿಯಮಿತ(IOCL)ದಲ್ಲಿ ಖಾಲಿ ಇರುವ 838 ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ | ಕೂಡಲೇ ಅರ್ಜಿ ಸಲ್ಲಿಸಿ
Tags: Degree SSLC
Published by: Yallamma G | Date:27 ಜನವರಿ 2025
ಭಾರತೀಯ ತೈಲ ನಿಗಮ ನಿಯಮಿತ(IOCL)ದಲ್ಲಿ ಖಾಲಿ ಇರುವ 838 ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ | ಕೂಡಲೇ ಅರ್ಜಿ ಸಲ್ಲಿಸಿ

ದೇಶದ ಪ್ರತಿಷ್ಠಿತ ತೈಲ ಸಂಸ್ಥೆಗಳಲ್ಲಿ ಒಂದಾಗಿರುವ, ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ತೈಲ ನಿಗಮ ನಿಯಮಿತ (IOCL)ದಲ್ಲಿ ಖಾಲಿ ಇರುವ838  ತಂತ್ರಜ್ಞ ಅಪ್ರೆಂಟಿಸ್, ಟ್ರೇಡ್ ಅಪ್ರೆಂಟಿಸ್, ಟೆಕ್ನಿಕಲ್ ಅಪ್ರೆಂಟಿಸ್ ಮತ್ತು ಗ್ರಾಜುವೇಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಅರ್ಜಿ ಸಲಿಸಬಹುದಾಗಿದೆ. ಈ ಹುದ್ದೆಗಳು ಭಾರತದೆಲ್ಲೆಡೆ ಮಾನ್ಯವಾಗಿರುತ್ತವೆ.  

ಹುದ್ದೆಗಳ ವಿವರ : 838 
- ತಂತ್ರಜ್ಞ ಅಪ್ರೆಂಟಿಸ್ : 354  
- ಟ್ರೇಡ್ ಅಪ್ರೆಂಟಿಸ್ : 175  
- ಪದವೀಧರ ಅಪ್ರೆಂಟಿಸ್ : 242  
- ಟ್ರೇಡ್ ಅಪ್ರೆಂಟಿಸ್-ಡಿಇಒ : 67  

ವಿದ್ಯಾರ್ಹತೆ : 
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, 12ನೇ ತರಗತಿ, ಐಟಿಐ, ಡಿಪ್ಲೊಮಾ, ಪದವಿ (BA, B.Com, BBA, B.Sc) ಪೂರ್ಣಗೊಳಿಸಿರಬೇಕು.  

ವಯೋಮಿತಿ : 
ಕನಿಷ್ಠ ವಯಸ್ಸು : 18 ವರ್ಷ  
ಗರಿಷ್ಠ ವಯಸ್ಸು : 24 ವರ್ಷ (31-01-2025ರಂತೆ)  
ವಯೋಮಿತಿ ಸಡಿಲಿಕೆ:
- OBC: 3 ವರ್ಷ  
- SC/ST: 5 ವರ್ಷ  
- PwBD (ಸಾಮಾನ್ಯ): 10 ವರ್ಷ  
- PwBD (OBC): 13 ವರ್ಷ  
- PwBD (SC/ST): 15 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.   

ಅರ್ಜಿಶುಲ್ಕ : 
ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.  

ವೇತನ ಶ್ರೇಣಿ :
ಅಧಿಸೂಚನೆಯ ಪ್ರಕಾರ, ನಿಗದಿತ ಮಾಸಿಕ ವೇತನ ನೀಡಲಾಗುತ್ತದೆ.  

ಆಯ್ಕೆ ವಿಧಾನ :
ಮೆರಿಟ್ ಪಟ್ಟಿ ಆಧಾರಿತವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.  

ಅರ್ಜಿಸಲ್ಲಿಸುವ ಕ್ರಮಗಳು :
1. ಅಧಿಕೃತ ವೆಬ್‌ಸೈಟ್ [https://iocl.com/](https://iocl.com/) ಗೆ ಭೇಟಿ ನೀಡಿ.  
2. "ಅಪ್ರೆಂಟಿಸ್" ಹುದ್ದೆಗಳ ಅಧಿಸೂಚನೆಯನ್ನು ತೆರೆಯಿರಿ.  
3. ಅರ್ಹತೆಯನ್ನು ಪರಿಶೀಲಿಸಿ.  
4. ಅರ್ಜಿಯನ್ನು ತುಂಬಿ, ಅಗತ್ಯ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿ.  
5. ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.  

ಪ್ರಮುಖ ದಿನಾಂಕಗಳು :
- ಅರ್ಜಿಯನ್ನು ಆರಂಭಿಸುವ ದಿನಾಂಕ : 24-01-2025  
- ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ : 14-02-2025  

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.  

Application End Date:  14 ಫೆಬ್ರುವರಿ 2025
Employment Type: FULL_TIME
Hiring Organization: KPSC Vaani https://www.kpscvaani.com
To Download Official Notification
Related Tags: Degree SSLC

Comments