ಭಾರತೀಯ ತೈಲ ನಿಗಮ ನಿಯಮಿತದಲ್ಲಿ ಖಾಲಿ ಇರುವ 493 ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ
Published by: Hanamant Katteppanavar | Date:12 ಡಿಸೆಂಬರ್ 2020

ಭಾರತೀಯ ತೈಲ ನಿಗಮ ಅಥವಾ ಇಂಡಿಯನ್ ಆಯಿಲ್ (IOCL) ಎನ್ನುವುದು ಭಾರತದ ಸರ್ಕಾರಿ-ಮಾಲೀಕತ್ವದ ತೈಲ ಮತ್ತು ಅನಿಲ ಕಂಪನಿಯಾಗಿದ್ದು, ಇದು ಭಾರತದ ಅತೀ ದೊಡ್ಡ ವಾಣಿಜ್ಯಿಕ ಸಂಸ್ಥೆಯಾಗಿದೆ. ಪ್ರಸ್ತುತ ಕಂಪನಿಯಲ್ಲಿ ಖಾಲಿ ಇರುವ ಒಟ್ಟು 493 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 12,2020 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
* ಪ್ರಮುಖ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27-11-2020
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-12-2020
- ಲಿಖಿತ ಪರೀಕ್ಷೆಯ ದಿನಾಂಕ: 03-01-2021
* ಹುದ್ದೆಗಳ ವಿವರಗಳು:
- ತಮಿಳುನಾಡು ಮತ್ತು ಪುದುಚೇರಿ- 199 ಹುದ್ದೆಗಳು
- ಕರ್ನಾಟಕ- 100 ಹುದ್ದೆಗಳು
- ಕೇರಳ- 67 ಹುದ್ದೆಗಳು
- ಆಂಧ್ರಪ್ರದೇಶ- 66 ಹುದ್ದೆಗಳು
- ತೆಲಂಗಾಣ- 61 ಹುದ್ದೆಗಳು
ಒಟ್ಟು 493 ಹುದ್ದೆಗಳು
No. of posts: 493
Application Start Date: 27 ನವೆಂಬರ್ 2020
Application End Date: 23 ಡಿಸೆಂಬರ್ 2020
Selection Procedure:
- ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
Qualification: - ಹುದ್ದೆಗೆ ಅನುಗುಣವಾಗಿ ಅಭ್ಯರ್ಥಿಗಳು SSLC, ಪಿಯುಸಿ(10+2), ಐಟಿಐ ಮತ್ತು ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
Age Limit:
- ದಿನಾಂಕ ಅಕ್ಟೋಬರ್ 31, 2020 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳು ಕನಿಷ್ಠ-18 ವರ್ಷ ವಯೋಮಿತಿಯನ್ನು ಪೂರ್ಣಗೊಳಿಸಿರಬೇಕು ಹಾಗೂ ಗರಿಷ್ಠ- 24 ವರ್ಷ ವಯೋಮಿತಿ ಯೊಳಗಿನವರಾಗಿರಬೇಕು.
- ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ- 10 ವರ್ಷ ಮತ್ತು ಅಂಗವಿಕಲ (ಪ.ಜಾ/ಪ.ಪಂ) ಅಭ್ಯರ್ಥಿಗಳಿಗೆ- 15 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.





Comments