Loading..!

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಲೊಕೊ ಪೈಲಟ ಹುದ್ದೆಗಳ ನೇಮಕಾತಿಗಾಗಿ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: PUC SSLC
Published by: Yallamma G | Date:9 ಫೆಬ್ರುವರಿ 2024
not found

ಭಾರತ ಸರ್ಕಾರ ರೈಲ್ವೆ ಸಚಿವಾಲಯ, ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ 2860 ಫೈಟರ್, ವೆಲ್ಡರ್, ಮೆಕ್ಯಾನಿಕಲ್, ಎಲೆಕ್ಟ್ರಿಷನ್, ಪೇಂಟರ್, ಕಾರ್ಪೆಂಟರ್ ಮತ್ತು COPA ಸೇರಿದಂತೆ ವಿವಿಧ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 28- ಫೆಬ್ರುವರಿ- 2024 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಭಾರತದ ಪ್ರಜೆಯಾಗಿರಬೇಕು. 

No. of posts:  2860
Application Start Date:  9 ಫೆಬ್ರುವರಿ 2024
Application End Date:  28 ಫೆಬ್ರುವರಿ 2024
Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಮೆರಿಸ್ಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ, ಮೆರಿಸ್ಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು SSLC ಮತ್ತು PUC ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಹೊಂದಿರಬೇಕು. ವಿದ್ಯಾರ್ಹತೆಯನ್ನು ಕನಿಷ್ಠ 50% ಅಂಕಗಳೊಂದಿಗೆ ಪಾಸಾಗಿರಬೇಕು.
Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದ ಅಭ್ಯರ್ಥಿಗಳು ಎಸ್‍ಸಿ/ ಎಸ್‍ಟಿ/ ಮಾಜಿ ಸೈನಿಕ/ ಮಹಿಳೆಯರು ಮತ್ತು ಆರ್ಥಿಕ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿಯನ್ನು ನೀಡಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : ರೂ.100/- ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
Age Limit:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ಹಾಗು ಗರಿಷ್ಠ 24 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
SC/ ST ಅಭ್ಯರ್ಥಿಗಳಿಗೆ 5 ವರ್ಷ 
OBC ಅಭ್ಯರ್ಥಿಗಳಿಗೆ 3 ವರ್ಷ 
PWD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನಿಗದಿಪಡಿಸಲಾಗಿದೆ.

Employment Type: FULL_TIME
Hiring Organization: KPSC Vaani https://www.kpscvaani.com
Work Location: ಭಾರತದಾದ್ಯಂತ, KA,
To Download Official Notification
Related Tags: PUC SSLC

Comments