ಭಾರತೀಯ ಮರ್ಚೆಂಟ್ ನೌಕಾಪಡೆಯಲ್ಲಿ ಖಾಲಿ ಇರುವ ಒಟ್ಟು 3571 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ l ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ನೌಕಾದಳ ಅಧೀನದಲ್ಲಿರುವ ಇಂಡಿಯನ್ ಮರ್ಚೆಂಟ್ ನೇವಿಯಲ್ಲಿ ಖಾಲಿ ಇರುವ3,571 ಡೆಕರೇಟಿಂಗ್, ಎಂಜಿನ್ ರೇಟಿಂಗ್, ಕುಕ್ ಮತ್ತು ಮೆಸ್ ಬಾಯ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 30-ನವೆಂಬರ್-2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ.
ಹುದ್ದೆಗಳ ವಿವರ : 3,571
ಡೆಕರೇಟಿಂಗ್ : 429
ಎಂಜಿನ್ ರೇಟಿಂಗ್ : 762
ಸೀ ಮನ್ : 302
ಕುಕ್ : 1,105
ಮೆಸ್ ಬಾಯ್ : 657
ಎಲೆಕ್ಟ್ರಿಷಿಯನ್ : 316
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ನೇರ ಕೌನ್ಸಲಿಂಗ್ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
* ಹುದ್ದೆಗಳ ಆಯ್ಕೆ ಪ್ರಕ್ರಿಯೆಯ ಸವಿವರಣೆಗಾಗಿ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು SSLC/ PUC ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಹುದ್ದೆಗಳಿಗೆ ಅನುಗುಣವಾಗುವಂತೆ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು 100 ರೂ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ಮೀರಿರಬಾರದು.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 18,000/- ರೂ 30,000/- ರೂ ಗಳ ವರೆಗೆ ಮಾಸಿಕ ವೇತನ ನಿಗದಿ ಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments