Loading..!

ಭಾರತೀಯ ಕರಾವಳಿ ಸೇನಾ ಪಡೆಯಲ್ಲಿ ಖಾಲಿ ಇರುವ 358 ನಾವಿಕ್ ಮತ್ತು ಯಾಂತ್ರಿಕ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಣೆ
Published by: Hanamant Katteppanavar | Date:5 ಜನವರಿ 2021
not found

ಭಾರತೀಯ ಕರಾವಳಿ ಸೇನಾ ಪಡೆಯಲ್ಲಿ ಖಾಲಿ ಇರುವ 02/2021 ಬ್ಯಾಚ್‌ನ 358 ನಾವಿಕ್ (ದೇಶೀಯ ಶಾಖೆ, ಜನರಲ್ ಡ್ಯೂಟಿ) ಮತ್ತು ಯಾಂತ್ರಿಕ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಮಾಹಿತಿಯನ್ನು ಓದಿಕೊಂಡು ಆನ್‌ಲೈನ್‌ನಲ್ಲಿ ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ ಜನವರಿ 05, 2021 ರಿಂದ ಪ್ರಾರಂಭಗೊಂಡು ಜನವರಿ 19 2021 ರಂದು ಮುಕ್ತಾಯಗೊಳ್ಳುವುದು.

 

* ಪ್ರಮುಖ ದಿನಾಂಕಗಳು:

- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05-01-2021

- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-01-2021

- ಪ್ರವೇಶ ಪತ್ರ ಮುದ್ರಿಸಲು ದಿನಾಂಕ: ಹಂತ -1 ಪರೀಕ್ಷೆಗೆ 10 ದಿನಗಳ ಮೊದಲು

- ನಾವಿಕ್ (ಜಿಡಿ, ಡಿಬಿ) ಮತ್ತು ಯಂತ್ರಿಕ್‌ಗಾಗಿ ತಾತ್ಕಾಲಿಕ ಹಂತ -1 ಪರೀಕ್ಷೆಯ ದಿನಾಂಕಗಳು: ಮಾರ್ಚ್ 2021

- ನಾವಿಕ್ (ಜಿಡಿ, ಡಿಬಿ) ಮತ್ತು ಯಂತ್ರಿಕ್‌ಗಾಗಿ ತಾತ್ಕಾಲಿಕ ಹಂತ- II ಪರೀಕ್ಷೆಯ ದಿನಾಂಕಗಳು: ಮೇ 2021

- ನಾವಿಕ್ (ಜಿಡಿ) ಮತ್ತು ಯಂತ್ರಿಕ್‌ಗಾಗಿ ತಾತ್ಕಾಲಿಕ ಹಂತ -3 ಮತ್ತು IV ಪರೀಕ್ಷೆಯ ದಿನಾಂಕಗಳು: ಆಗಸ್ಟ್ 2021

- ನಾವಿಕ್ (ಡಿಬಿ) ಗಾಗಿ ತಾತ್ಕಾಲಿಕ ಹಂತ -3 ಮತ್ತು IV ಪರೀಕ್ಷೆಯ ದಿನಾಂಕಗಳು: ಅಕ್ಟೋಬರ್ 2021

- ನಾವಿಕ್ (ಜಿಡಿ) ಮತ್ತು ಯಂತ್ರಿಕ್ ತರಬೇತಿ ದಿನಾಂಕ: ಆಗಸ್ಟ್ 2021

- ನಾವಿಕ್ (ಜಿಡಿ) ಗಾಗಿ ತರಬೇತಿ ದಿನಾಂಕ: ಅಕ್ಟೋಬರ್ 2021

No. of posts:  358
Application Start Date:  5 ಜನವರಿ 2021
Application End Date:  19 ಜನವರಿ 2021
Selection Procedure:
- ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ, ದೈಹಿಕ ಪರೀಕ್ಷೆ, ಮತ್ತು ಮೂಲ ದಾಖಲೆಗಳ ಪರಿಶೀಲನೆಯ ಮುಖಾಂತರ ಆಯ್ಕೆ ಮಾಡಲಾಗುವುದು.
Qualification:

- ನಾವಿಕ (ಜನರಲ್ ಡ್ಯೂಟಿ ) : ಪಿಯುಸಿ (ಗಣಿತ ಮತ್ತು ಭೌತಶಾಸ್ತ್ರ)

- ನಾವಿಕ (ಡೊಮೆಸ್ಟಿಕ್ ಬ್ರಾಂಚ್ ) : 10 ನೇ ತರಗತಿಯನ್ನು ಅಂಗೀಕೃತ ಸಂಸ್ಥೆ ಅಥವಾ ಬೋರ್ಡ್ ನಿಂದ ಉತ್ತೀರ್ಣರಾಗಿರಬೇಕು. 

- ಯಾಂತ್ರಿಕ್ ಹುದ್ದೆ : 10 ನೇ ತರಗತಿ ವಿದ್ಯಾರ್ಹತೆಯೊಂದಿಗೆ ಡಿಪ್ಲೊಮಾ (ಎಲೆಕ್ಟ್ರಿಕಲ್ / ಮೆಕ್ಯಾನಿಕಲ್ / ಎಲೆಕ್ಟ್ರಾನಿಕ್ಸ್ & ದೂರಸಂಪರ್ಕ (ರೇಡಿಯೋ / ಪವರ್) ಇಂಜಿನೀರಿಂಗ್) 

ಈ ಮೇಲಿನ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

Fee:
- ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು ರೂಪಾಯಿ 250/- ಅರ್ಜಿಶುಲ್ಕವನ್ನು ಭರಿಸಬೇಕು, ಮತ್ತು ಪ.ಜಾ ಮತ್ತು ಪ.ಪಂ ದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
Age Limit:

- ಹುದ್ದೆಗೆ ಅನುಗುಣವಾಗಿ ಅಭ್ಯರ್ಥಿಗಳು ಕನಿಷ್ಠ- 18  ವರ್ಷಗಳನ್ನು ಪೂರ್ಣಗೊಳಿಸಿರಬೇಕು ಮತ್ತು ಗರಿಷ್ಠ- 22 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.

- ನಾವಿಕ್ (ಜನರಲ್ ಡ್ಯೂಟಿ) ಮತ್ತು ಯಂತ್ರಿಕ್ ಅಭ್ಯರ್ಥಿಗಳು 01-08-1999 ರಿಂದ 31-07-2003ರ ನಡುವೆ ಜನಿಸಿರಬೇಕು.

- ನಾವಿಕ್ (ಡೊಮೆಸ್ಟಿಕ್ ಬ್ರಾಂಚ್) ಅಭ್ಯರ್ಥಿಗಳು 01-10-1999 ರಿಂದ 30-09-2003ರ ನಡುವೆ ಜನಿಸಿರಬೇಕು.

Pay Scale:

- ನಾವಿಕ್ (GD) ಮತ್ತು ನಾವಿಕ್ (DB) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ - 21,700/- ರೂ ಗಳ ವೇತನವನ್ನು ನೀಡಲಾಗುವುದು. ಮತ್ತು 

- ಯಾಂತ್ರಿಕ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ - 29,200/- ರೂ ಗಳ ವೇತನವನ್ನು ನೀಡಲಾಗುವುದು.

* ಆನ್ಲೈನ್ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ದಿನಾಂಕ 05 ಜನವರಿ 2021 ರಂದು ಸೇರಿಸಲಾಗುವದು ನಿರೀಕ್ಷಿಸಿ

To Download the official notification

Comments