Loading..!

ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ
Published by: Hanamant Katteppanavar | Date:26 ಜನವರಿ 2021
not found

ಭಾರತ ಸರ್ಕಾರದ ಸೇನಾ ಪಡೆಯ ಒಂದು ಭಾಗವಾಗಿರುವ ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಕೆಡೆಟ್ ಎಂಟ್ರಿ ಸ್ಕೀಮ್ (ಶಾಶ್ವತ ಆಯೋಗ) - ಜುಲೈ 2021 ರ ಹುದ್ದೆಗಳಿಗೆ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಜನವರಿ 29, 2021 ರಿಂದ ಪ್ರಾರಂಭಗೊಂಡು ಮತ್ತು ಫೆಬ್ರವರಿ 09, 2021 ರೊಳಗಾಗಿ ಸಲ್ಲಿಸಬಹುದು.

* ಹುದ್ದೆಗಳ ವಿವರ :

- ಶಿಕ್ಷಣ ಶಾಖೆಯಲ್ಲಿ - 05 ಹುದ್ದೆಗಳು

- ಕಾರ್ಯನಿರ್ವಾಹಕ ಮತ್ತು ತಾಂತ್ರಿಕ ಶಾಖೆಯಲ್ಲಿ - 21 ಹುದ್ದೆಗಳು

No. of posts:  26
Application Start Date:  29 ಜನವರಿ 2021
Application End Date:  9 ಫೆಬ್ರುವರಿ 2021
Selection Procedure: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಹತೆಯ ಆಧಾರದ ಮೇಲೆ ಆಯ್ಕೆ ಪಟ್ಟಿ ರಚಿಸಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು, ಹಾಗು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವದು.
Qualification:
- ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು PUC (10+2) ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ (PCM) ನಲ್ಲಿ ಕನಿಷ್ಠ 70% ಅಂಕಗಳೊಂದಿಗೆ ಮತ್ತು ಇಂಗ್ಲಿಷ್‌ನಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. 
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಈ ದಿನಾಂಕಗಳ ಮಧ್ಯ ಜನಿಸಿರಬೇಕು, 

- ದಿನಾಂಕ 02-01-2002 ಮತ್ತು 01-07-2004 ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Pay Scale: ಈ ನೇಮಕಾತಿಯ ಕುರಿತು ಸವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ
To Download the official notification

Comments