Loading..!

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ (HESCOM) 388 ಹುದ್ದೆಗಳಿಗೆ ಅರ್ಜಿ ಆಹ್ವಾನ | ಐಟಿಐ (ITI) ಪಾಸಾದವರಿಗೆ ಅವಕಾಶ, ಸಂಪೂರ್ಣ ವಿವರ ಇಲ್ಲಿದೆ
Tags: ITI
Published by: Yallamma G | Date:13 ಫೆಬ್ರುವರಿ 2026
not found
ನಮಸ್ಕಾರ KPSCVaani ಓದುಗರಿಗೆ! ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ-ಯುವತಿಯರಿಗೆ ಭರ್ಜರಿ ಸಿಹಿಸುದ್ದಿ ಇಲ್ಲಿದೆ. ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತವು (HESCOM) 2026-27 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಹುದ್ದೆಗಳು HESCOM ನಲ್ಲಿ ಉತ್ತಮ ವೃತ್ತಿಪರ ಅನುಭವ ಮತ್ತು ಸ್ಥಿರ ಉದ್ಯೋಗ ದೊರಕಿಸಿಕೊಳ್ಳಲು ಅವಕಾಶ ನೀಡುತ್ತದೆ. 

ಐಟಿಐ (ITI) ಮುಗಿಸಿ ಉತ್ತಮ ಅವಕಾಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬಹುದು. ಈ ನೇಮಕಾತಿ ಅಡಿಯಲ್ಲಿ ಒಟ್ಟು 388 ಶಿಶುಕ್ಷು (Apprentice) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಾಗುತ್ತಿದೆ. ಹುಬ್ಬಳ್ಳಿ - ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 09-ಮಾರ್ಚ್-2026 ರಂದು ಅಥವಾ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ಲೇಖನದಲ್ಲಿ ನಾವು ಹುದ್ದೆಗಳ ಸಂಪೂರ್ಣ ವಿವರ, ವಿದ್ಯಾರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ವಿವರವಾಗಿ ನೀಡಲಾಗಿದೆ.

KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನೇಮಕಾತಿಯ ಪ್ರಮುಖ ಮುಖ್ಯಾಂಶಗಳು


  • ಒಟ್ಟು ಹುದ್ದೆಗಳು: 388 ಐಟಿಐ ಇಲೆಕ್ಟಿಶಿಯನ್ ಶಿಶುಕ್ಷು (Apprentice) ಹುದ್ದೆಗಳು.

  • ಮಾಸಿಕ ಸ್ಟೈಫಂಡ್ (Stipend): ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 9,600/- ಸ್ಟೈಫಂಡ್ ನೀಡಲಾಗುತ್ತದೆ.

  • ತರಬೇತಿ ಅವಧಿ: 1 ವರ್ಷದ ಅವಧಿಯ ಶಿಶಿಕ್ಷು ತರಬೇತಿ ನೀಡಲಾಗುತ್ತದೆ.

  • ಕಾರ್ಯಸ್ಥಳ: ಹೆಸ್ಕಾಂನ ಕಾರ್ಯ ಮತ್ತು ಪಾಲನಾ ವಿಭಾಗ, ಮಾಪಕ ತಪಾಸಣಾ ವಿಭಾಗ, 33 ಕೆವಿ ಉಪ-ಕೇಂದ್ರ ಮತ್ತು ಲೈನ್ ಗಳ ವಿಭಾಗಗಳ ಕಛೇರಿಗಳು.


ಯಾರು ಅರ್ಜಿ ಸಲ್ಲಿಸಬಹುದು? (ವಿದ್ಯಾರ್ಹತೆ)


  • ಅಭ್ಯರ್ಥಿಗಳು ಯಾವುದಾದರು ಸರ್ಕಾರಿ ಅಥವಾ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 2 ವರ್ಷದ ಐ.ಟಿ.ಐ (ಇಲೆಕ್ಟಿಶಿಯನ್) ವೃತ್ತಿಯಲ್ಲಿ ಉತ್ತೀರ್ಣರಾಗಿರಬೇಕು.

  • NCVT ಅಥವಾ SCVT ಯಿಂದ ನೀಡಲಾದ ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ (Provisional National Trade Certificate) ಅಂಕ ಪಟ್ಟಿಯನ್ನು ಹೊಂದಿರಬೇಕು.

  • ಎಸ್.ಎಸ್.ಎಲ್.ಸಿ. (SSLC) ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ತೆಗೆದುಕೊಂಡಿರಬೇಕು ಹಾಗೂ ಕನ್ನಡದಲ್ಲಿ ಓದಲು ಮತ್ತು ಬರೆಯಲು ತಿಳಿದಿರಬೇಕು.

  • ಗಮನಿಸಿ: ಇಲೆಕ್ಟಿಶಿಯನ್ ವೃತ್ತಿ ಹೊರತುಪಡಿಸಿ ಬೇರೆ ಯಾವುದೇ ವೃತ್ತಿಯನ್ನು (Trade) ಪರಿಗಣಿಸಲಾಗುವುದಿಲ್ಲ. ಈಗಾಗಲೇ ಶಿಶುಕ್ಷು ತರಬೇತಿಯನ್ನು ಪೂರ್ಣಗೊಳಿಸಿದ ಅಥವಾ ತರಬೇತಿ ಪಡೆಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.


ವಯೋಮಿತಿ (Age Limit)
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 09.03.2026 ಕ್ಕೆ ಗರಿಷ್ಠ 25 ವರ್ಷ ಮೀರಿರಬಾರದು.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ: 09.03.2026 ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ (Application Fee)


  • ಸಾಮಾನ್ಯ ಅಭ್ಯರ್ಥಿಗಳಿಗೆ: ರೂ. 100/-.

  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ: ರೂ. 50/-.

  • ಪಾವತಿಸುವ ವಿಧಾನ: ಈ ಮೊತ್ತವನ್ನು ಇಂಡಿಯನ್ ಪೋಸ್ಟಲ್ ಆರ್ಡರ್ (Indian Postal Order) ಮೂಲಕ “ಆರ್ಥಿಕ ಸಲಹೆಗಾರರು, ಹುವಿಸಕಂನಿ, ಹುಬ್ಬಳ್ಳಿ” ಇವರ ಹೆಸರಿನಲ್ಲಿ ಖರೀದಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು. (ಬ್ಯಾಂಕ್ ಡಿಡಿ ಅಥವಾ ನಗದನ್ನು ಸ್ವೀಕರಿಸಲಾಗುವುದಿಲ್ಲ).


ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ (How to Apply) :ಅರ್ಜಿ ಸಲ್ಲಿಕೆಯು ಎರಡು ಹಂತಗಳನ್ನು ಒಳಗೊಂಡಿದೆ:

ಹಂತ 1: ಆನ್‌ಲೈನ್ ನೋಂದಣಿ (ಕಡ್ಡಾಯ)

ಅಭ್ಯರ್ಥಿಗಳು ಮೊದಲಿಗೆ ಕೇಂದ್ರ ಸರ್ಕಾರದ www.apprenticeshipindia.gov.in ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.

ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ಪ್ರಕಾರ ಆಧಾರ್ ಪರಿಶೀಲನೆ ಪೂರ್ಣಗೊಳಿಸಿ, ಪೋರ್ಟಲ್‌ನಲ್ಲಿ "Hubli Electricity Supply Company Ltd." ಅನ್ನು ಆಯ್ಕೆ ಮಾಡಬೇಕು.

ಆನ್‌ಲೈನ್‌ನಲ್ಲಿ ಈ ಪ್ರಕ್ರಿಯೆ ಮುಗಿಸಲು 02.03.2026 ಕೊನೆಯ ದಿನವಾಗಿರುತ್ತದೆ.

ಹಂತ 2: ಆಫ್‌ಲೈನ್ ಅರ್ಜಿ ಸಲ್ಲಿಕೆ

ಎ-4 ಸೈಜಿನ ಹಾಳೆಯಲ್ಲಿರುವ ನಿಗದಿತ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು.

ಅರ್ಜಿಯೊಂದಿಗೆ ಈ ಕೆಳಗಿನ ದಾಖಲೆಗಳ ಸ್ವಯಂ ದೃಢೀಕರಿಸಲ್ಪಟ್ಟ (Self-attested) ನಕಲು ಪ್ರತಿಗಳನ್ನು ಲಗತ್ತಿಸಬೇಕು:

ಎಸ್.ಎಸ್.ಎಲ್.ಸಿ. ಅಂಕಪಟ್ಟಿ.

ಎರಡು ವರ್ಷದ ಐ.ಟಿ.ಐ (ಇಲೆಕ್ಟಿಶಿಯನ್) ಅಂಕಪಟ್ಟಿ.

ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ಪಡೆದ ದೈಹಿಕ ಸಾಮರ್ಥ್ಯ ಪ್ರಮಾಣ ಪತ್ರ (Medical Fitness Certificate).

ಜಾತಿ ಪ್ರಮಾಣ ಪತ್ರ (ಅನ್ವಯಿಸಿದರೆ ಮಾತ್ರ).

ಆಧಾರ್ ಕಾರ್ಡ್.

ಒಂದು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ.

ಅಪ್ರೆಂಟಿಸ್‌ಶಿಪ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ಪ್ರಿಂಟೌಟ್ ಪ್ರತಿ.

ಭರ್ತಿ ಮಾಡಿದ ಅರ್ಜಿಗಳನ್ನು ಲಗತ್ತುಗಳೊಂದಿಗೆ 09.03.2026 ರ ಸಂಜೆ 4.00 ಘಂಟೆಯ ಒಳಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಕಳುಹಿಸಬೇಕಾದ ವಿಳಾಸ:
ಕಾರ್ಯನಿರ್ವಾಹಕ ಇಂಜಿನಿಯರರು(ವಿ), ಕೈಗಾರಿಕಾ ತರಬೇತಿ ಕೇಂದ್ರ (ಐ.ಟಿ.ಸಿ), ಹೆಸ್ಕಾಂ, ವಿದ್ಯುತ್ ನಗರ, ಕಾರವಾರ ರಸ್ತೆ, ಹುಬ್ಬಳ್ಳಿ - 580024.

ಪ್ರಮುಖ ದಿನಾಂಕಗಳು : 
ಆನ್‌ಲೈನ್/ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 11-02-2026
ಅಪ್ರೆಂಟಿಸ್‌ಶಿಪ್ ಪೋರ್ಟಲ್‌ನಲ್ಲಿ ನೋಂದಾಯಿಸಲು ಕೊನೆಯ ದಿನಾಂಕ: 02.03.2026.
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09.03.2026 (ಸಂಜೆ 4 ಗಂಟೆಯೊಳಗೆ).

ವಿಶೇಷ ಸೂಚನೆ:
1. ಅಭ್ಯರ್ಥಿಗಳು ಸಲ್ಲಿಸಿದ ವಿವರಗಳಲ್ಲಿ (ಹೆಸರು, ಜನ್ಮ ದಿನಾಂಕ, ಜಾತಿ ಇತ್ಯಾದಿ) ಯಾವುದೇ ವ್ಯತ್ಯಾಸವಿರಬಾರದು.

2. ಅಭ್ಯರ್ಥಿಗಳೊಂದಿಗೆ ಆಯ್ಕೆ ಪ್ರಕ್ರಿಯೆಯ ವಿಚಾರವಾಗಿ ಯಾವುದೇ ಪತ್ರ/ಇ-ಮೇಲ್/ದೂರವಾಣಿ ಮೂಲಕ ವ್ಯವಹಾರ ಮಾಡಲಾಗುವುದಿಲ್ಲ. ಆಯ್ಕೆ ಪ್ರಕ್ರಿಯೆಯ ಪ್ರತಿಯೊಂದು ಸ್ಥರದ ವಿವರಗಳ ಬಗ್ಗೆ hescom.karnataka.gov.in → Documents → HRD & ITC Centre ಇಲ್ಲಿ ನಿಯಮಿತವಾಗಿ ನೋಡಬೇಕು.


ಎಚ್ಚರಿಕೆ:

1. ಅಭ್ಯರ್ಥಿಗಳು ಅರ್ಜಿ ತುಂಬುವಾಗ ಮೊದಲೇ ಎಲ್ಲಾ ಸೂಚನೆಗಳನ್ನು ಓದಿಕೊಂಡು ತಪ್ಪಾಗದಂತೆ, ಎಚ್ಚರವಹಿಸಿ ಮಾಹಿತಿಯನ್ನು ಅವಲೋಡ್ ಮಾಡಬೇಕು.

2. ಅರ್ಜಿಯಲ್ಲಿ ತುಂಬಿದ ಮಾಹಿತಿಯು ಪರಿಶೀಲನೆಯ ನಂತರ ಸುಳ್ಳು/ದೋಷ ಪೂರಿತ ಎಂದು ಕಂಡು ಬಂದಲ್ಲಿ ಅಭ್ಯರ್ಥಿಯ ತಾತ್ಕಾಲಿಕ ಆಯ್ಕೆಯ ನಂತರವೂ ಪ್ರವೇಶವನ್ನು ರದ್ದುಗೊಳಿಸುವ ಅಧಿಕಾರ ಹೆಸ್ಕಾಂಗೆ ಇದೆ.

3. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪತ್ರ ವ್ಯವಹಾರ ಇರುವುದಿಲ್ಲ

4. ತಪ್ಪು ದಾಖಲೆಗಳೊಂದಿಗೆ ಪ್ರವೇಶ ಪಡೆದು, ಅಭ್ಯರ್ಥಿ ಕೊಟ್ಟ ಮಾಹಿತಿ ಸುಳ್ಳು ಎಂದು ಕಂಡು ಬಂದಲ್ಲಿ ಕೇವಲ ಪ್ರವೇಶವನ್ನು ವಜಾಗೊಳಿಸುವುದಲ್ಲದೇ ಮಾಡಿಕೊಳ್ಳಲಾಗುವುದು. ಅಂತಹ ಅಭ್ಯರ್ಥಿಯ ಶಿಶುಕ್ಷು ವೇತನವನ್ನು ಮುಟ್ಟುಗೋಲು ಮಾಡಿಕೊಳ್ಳಲಾಗುವುದು. 


ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2956611 ಸಂಪರ್ಕಿಸಬಹುದು. ಕರ್ನಾಟಕದ ಯುವಕರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದ್ದು, ನಿಮ್ಮ ಸ್ನೇಹಿತರೊಂದಿಗೂ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ!


ಹೆಚ್ಚಿನ ಉದ್ಯೋಗ ಮಾಹಿತಿಗಾಗಿ www.kpscvaani.com ಗೆ ಭೇಟಿ ನೀಡಿ.

ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ. 
No. of posts:  388
Application Start Date:  13 ಫೆಬ್ರುವರಿ 2026
Application End Date:  9 ಮಾರ್ಚ್ 2026
To Download Official Notification

Comments