Loading..!

ಕಲಬುರಗಿ ಬೀದರ್ ಹಾಗೂ ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
| Date:7 ಡಿಸೆಂಬರ್ 2019
not found
ಕಲಬುರಗಿ ಬೀದರ್ ಹಾಗೂ ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಕಲಬುರಗಿ ಇಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್ ಮುಖಾಂತರ ಆಹ್ವಾನಿಸಲಾಗಿದ್ದು, ಖುದ್ದಾಗಿ ಅಂಚೆ ಅಥವಾ ಪ್ರತ್ಯೇಕವಾಗಿ ಅರ್ಜಿ ಕಳಿಸಲು ಅವಕಾಶವಿರುವುದಿಲ್ಲ.
ಒಟ್ಟು 37 ಹುದ್ದೆಗಳ ನೇಮಕಾತಿಗಾಗಿ ಈ ಪ್ರಕ್ರಿಯೆಯು ನೀಡುತ್ತಿದ್ದು ಅರ್ಜಿ ಸಲ್ಲಿಸಲು ಜನವರಿ 06, 2020 ಕೊನೆಯ ದಿನವಾಗಿರುತ್ತದೆ.
No. of posts:  37
Application Start Date:  7 ಡಿಸೆಂಬರ್ 2019
Application End Date:  6 ಜನವರಿ 2020
Work Location:  ಕಲಬುರಗಿ ಬೀದರ್ ಹಾಗೂ ಯಾದಗಿರಿ ಜಿಲ್ಲೆ
Selection Procedure: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವದು
Qualification: 1 ಸಹಾಯಕ ವ್ಯವಸ್ಥಾಪಕರು (ಎ.ಹೆಚ್./ಎ.ಐ.) /Assistant Manager (A.H / A.I) : ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್.ಸಿ. ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು

2 ಸಹಾಯಕ ವ್ಯವಸ್ಥಾಪಕರು (F&F) /Assistant Manager (F &F) : ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ.(ಕೃಷಿ) ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.

3 ತಾಂತ್ರಿಕ ಅಧಿಕಾರಿ(ಡಿ.ಟಿ.) /Technical Officer (DT) ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಟೆಕ್.(ಡಿ.ಟಿ) / ಬಿ.ಎಸ್.ಸಿ(ಡಿಟಿ) ಪದವಿ ಪಡೆದಿರಬೇಕು. ಜೊತೆಗೆ ಬೃಹತ ಕೈಗಾರಿಕೊದ್ಯಮ / ಡೇರಿ ಅಥವಾ ಆಹಾರ ಉದ್ಯಮ / ಇತರೆ ಹಾಲು ಒಕ್ಕೂಟದಲ್ಲಿ ಕನಿಷ್ಟ ಎರಡು ವರ್ಷ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.

4 ತಾಂತ್ರಿಕ ಅಧಿಕಾರಿ(ಇಂಜಿ) / Technical Officer (Engg) : ಅಂಗೀಕೃತ ವಿಶ್ವವಿದ್ಯಾಲಯದಿಂದ ಇಂಜೀನಿಯರಿಂಗ್‍ನಲ್ಲಿ ಎಲಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಪದವಿಯೊಂದಿಗೆ ಬೃಹತ ಕೈಗಾರಿಕೊದ್ಯಮ / ಡೇರಿ ಅಥವಾ ಆಹಾರ ಉದ್ಯಮ / ಇತರೆ ಹಾಲು ಒಕ್ಕೂಟದಲ್ಲಿ ಕನಿಷ್ಟ ಎರಡು ವರ್ಷ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.

5 Technical Officer(Q.C) / ತಾಂತ್ರಿಕ ಅಧಿಕಾರಿ (ಗು.ನಿ): ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಟೆಕ್.(ಡಿ.ಟಿ) / ಬಿ.ಎಸ್.ಸಿ(ಡಿಟಿ) ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.

6 Marketing officer/ಮಾರುಕಟ್ಟೆ ಅಧಿಕಾರಿ: ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ(ಪ್ರಥಮ) ದರ್ಜೆಯಲ್ಲಿ ಬಿ.ಎ/ ಬಿ.ಕಾಂ/ಬಿ.ಎಸ್.ಸಿ/ ಬಿ.ಬಿ.ಎಂ ಪದವಿದೊಂದಿಗೆ ಎಂ.ಬಿ.ಎ(ಮಾರ್ಕೆಟಿಂಗ್) ಹೊಂದಿರಬೇಕು. ಮತ್ತು ಬೃಹತ ವ್ಯವಹಾರೊದ್ಯಮ / ಡೇರಿ ಅಥವಾ ಆಹಾರ ಉದ್ಯಮ / ಇತರೆ ಹಾಲು ಒಕ್ಕೂಟದಲ್ಲಿ ಕನಿಷ್ಟ ಒಂದು ವರ್ಷ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.

7 Store and purchase officer/ಖರೀದಿ/ಉಗ್ರಾಣ ಅಧಿಕಾರಿ: ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ(ಪ್ರಥಮ) ದರ್ಜೆಯಲ್ಲಿ ಬಿ.ಕಾಂ/ಬಿ.ಬಿ.ಎಂ ಪದವಿದೊಂದಿಗೆ ಒಂದು ವರ್ಷದ ಪಿ.ಜಿ.ಡಿ.ಎಂ.ಎಂ ಅಥವಾ ಎಂ.ಬಿ.ಎ(ಮೆಟೆರಿಯಲ್ಸ್ ಮ್ಯಾನೆಜಮೆಂಟ) ಜೊತೆಗೆ ಬೃಹತ ವ್ಯವಹಾರೊದ್ಯಮ / ಡೇರಿ ಅಥವಾ ಆಹಾರ ಉದ್ಯಮ / ಇತರೆ ಹಾಲು ಒಕ್ಕೂಟದಲ್ಲಿ ಕನಿಷ್ಟ ಎರಡು ವರ್ಷ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.

8 Senior Chemist/ಹಿರಿಯ ಕೆಮಿಸ್ಟ್: ಅಂಗೀಕೃತ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಬಿ.ಎಸ್.ಸಿ(ಕೆಮಿಸ್ಟ್ರಿ/ ಮೆಕ್ರೋಬಾಯಲಜಿ) ಪದವಿದೊಂದಿಗೆ ಲ್ಯಾಬ ಅಸಿಸ್ಟಂಟ್ / ಅನಾಲೆಸಿಸ್ಟ್/ ಕೆಮಿಸ್ಟಾಗಿ ಬೃಹತ ಕೈಗಾರಿಕೊದ್ಯಮ ಪ್ರಯೋಗ ಶಾಲೆ / ಪಬ್ಲಿಕ್ ಸೆಕ್ಟರ್ ಅಂಡರಟೆಕಿಂಗ್ / ಸರ್ಕಾರಿ ಸ್ವಾಮ್ಯ/ ಡೇರಿ ಅಥವಾ ಆಹಾರ ಉದ್ಯಮ ಅಥವಾ ಇತರೆ ಹಾಲು ಒಕ್ಕೂಟದಲ್ಲಿ ಕನಿಷ್ಟ ಎರಡು ವರ್ಷ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ನಿರ್ವಹಣಾ /ಆಫಿಸ್ ಪ್ಯಾಕೆಜ್‍ನಲ್ಲಿ ಜ್ಞಾನ ಹೊಂದಿರಬೇಕು.

9 Marketing superintendent/ಮಾರುಕಟ್ಟೆ ಅಧೀಕ್ಷಕರು: ಅಂಗೀಕೃತ ವಿಶ್ವವಿದ್ಯಾಲಯದಿಂದ 2ನೇ(ದ್ವಿತಿಯ) ದರ್ಜೆಯಲ್ಲಿ ಬಿ.ಕಾಂ/ಬಿ.ಬಿ.ಎಂ ಪದವಿದೊಂದಿಗೆ ಎಂ.ಬಿ.ಎ(ಮಾರ್ಕೆಟಿಂಗ್) ಜೊತೆಗೆ ಬೃಹತ ವ್ಯವಹಾರೊದ್ಯಮ / ಇತರೆ ಹಾಲು ಒಕ್ಕೂಟದ / ಡೇರಿ ಇಂಡಸ್ಟ್ರಿ / ಆಹಾರ ಉದ್ಯಮದಲ್ಲಿ ಒಂದು ವರ್ಷ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.

10 Superintendent(protection)/ಅಧೀಕ್ಷಕರು(ಪ್ರೋಟೆಕ್ಷನ್): ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಎ/ಬಿ.ಕಾಂ/ಬಿ.ಎಸ್.ಸಿ/ ಪದವಿಯೊಂದಿಗೆ ಡಿಪ್ಲೋಮ್ ಇನ್ ಫೈರ್ & ಸೇಫ್ಟಿ ಕೋರ್ಸ್ ಜೊತೆಗೆ ಕನಿಷ್ಟ ಎರಡು ವರ್ಷಗಳ ಸೇವಾ ಅನುಭವದೊಂದಿಗೆ ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು. ಅಥವಾ ಮಾಜಿ ಸೈನಿಕರಾಗಿ ಆರ್ಮಿ/ಏರ್‍ಫೋರ್ಸ್/ನೇವಿನಲ್ಲಿ ಸೇವೆಸಲ್ಲಿಸಿ ಜೊತೆಗೆ ಪದವಿಧರರಾಗಿ ಮತ್ತು ಕನಿಷ್ಟ ಐದು ವರ್ಷಗಳ ಡಿಫೆನ್ಸ್‍ನಲ್ಲಿ ಸೇವೆಸಲ್ಲಿಸಿದವರಿಗೆÉ ಆದ್ಯತೆ ನೀಡಲಾಗುವದು.

11 Extension officer Grade-3/ವಿಸ್ತರಣಾಧಿಕಾರಿ ದರ್ಜೆ-3: ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ(ಪ್ರಥಮ) ದರ್ಜೆಯಲ್ಲಿ ಬಿ.ಎ/ಬಿ.ಕಾಂ/ ಬಿ.ಎಸ್.ಸಿ/ ಬಿ.ಬಿ.ಎಂ/ಬಿ.ಬಿ.ಎ ಪದವಿದೊಂದಿಗೆ ಕಂಪ್ಯೂಟರ್ ಆಫಿಸ್ ಪ್ಯಾಕೆಜ್‍ನಲ್ಲಿ ನಿರ್ವಹಣಾ ಜ್ಞಾನ ಹೊಂದಿರಬೇಕು.

12 Chemistry Grade-1/ಕೆಮಿಸ್ಟ್ ದರ್ಜೆ-1: ಅಂಗೀಕೃತ ವಿಶ್ವವಿದ್ಯಾಲಯದಿಂದ ದ್ವೀತಿಯ ದರ್ಜೆಯಲ್ಲಿ ಬಿ.ಎಸ್.ಸಿ(ಕೆಮಿಸ್ಟ್ರಿ/ ಮೆಕ್ರೋಬಾಯಲಜಿ) ಪದವಿದೊಂದಿಗೆ ಲ್ಯಾಬ ಅಸಿಸ್ಟಂಟ್‍ಆಗಿ / ಅನಾಲೆಸಿಸ್ಟ್/ ಕೆಮಿಸ್ಟ್‍ಆಗಿ ಬೃಹತ ಕೈಗಾರಿಕೆ ಪ್ರಯೋಗ ಶಾಲೆ / ಪಬ್ಲಿಕ್ ಸೆಕ್ಟರ್ ಅಂಡರ್‍ಟೆಕಿಂಗ/ ಸರ್ಕಾರಿ ಸ್ವಾಮ್ಯ / ಡೇರಿ ಅಥವಾ ಆಹಾರ ಉದ್ಯಮ ಅಥವಾ ಇತರೆ ಹಾಲು ಒಕ್ಕೂಟದಲ್ಲಿ ಎರಡು ವರ್ಷ ಸೇವಾ ಅನುಭವದೊಂದಿಗೆ, ಕಂಪ್ಯೂಟರ್ ನಿರ್ವಹಣಾ /ಆಫಿಸ್ ಪ್ಯಾಕೆಜ್‍ನಲ್ಲಿ ಜ್ಞಾನ ಹೊಂದಿರಬೇಕು.

13 Juniour Techinician/ಕಿರಿಯ ತಾಂತ್ರಿಕರು: ಕನಿಷ್ಟ್ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯೊಂದಿಗೆ ಕರ್ನಾಟಕ ಸರ್ಕಾರದಿಂದ ಅಂಗೀಕೃತಗೊಂಡ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಎಂ.ಆರ್.ಎ.ಸಿ / ಎಲೆಕ್ಟ್ರಿಕಲ್ / ಫಿಟರ್‍ನಲ್ಲಿ ವಿಷಯದಲ್ಲಿ ಐ.ಟಿ.ಐ ಕೋರ್ಸ್‍ನಲ್ಲಿ ಉತ್ತೀರ್ಣರಾಗಿ ಅಪ್ರೆಂಟಿಸ್ ಸರ್ಟಿಫಿಕೆಟ್ ಹೊಂದಿರಬೇಕು. ಜೊತೆಗೆ ಇಂಡ್ರಸ್ಟ್ರೀಯಲ್ ಕನಸರ್ನ/ ಪಬ್ಲಿಕ್ ಸೆಕ್ಟರ್ / ಸರ್ಕಾರಿ ಸ್ವಾಮ್ಯ / ಡೇರಿ ಅಥವಾ ಆಹಾರ ಉದ್ಯಮೆಯಲ್ಲಿ ಸೇವಾ ಅನುಭವ ಹೊಂದಿರಬೇಕು (ಬಾಯ್ಲರ್ ಹುದ್ದೆಗೆ ಅರ್ಜಿಸಲ್ಲಿಸುವವರು) ಕನಿಷ್ಟ್ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯೊಂದಿಗೆ ತಾಂತ್ರಿಕ ವಿದ್ಯಾ ಸಂಸ್ಥೆ / ನಿರ್ದೇಶಕರು ಬಾಯ್ಲರ್ & ಕಾರ್ಖಾನೆ ರವರಿಂದ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೆಟ ಪಡೆದಿರಬೇಕು. ಜೊತೆಗೆ ಇಂಡ್ರಸ್ಟ್ರೀಯಲ್ ಕನಸರ್ನ/ ಪಬ್ಲಿಕ್ ಸೆಕ್ಟರ್ / ಸರ್ಕಾರಿ ಸ್ವಾಮ್ಯ / ಡೇರಿ ಅಥವಾ ಆಹಾರ ಉದ್ಯಮೆಯಲ್ಲಿ ಸೇವಾ ಅನುಭವ ಹೊಂದಿರಬೇಕು

14 ಬಾಯ್ಲರ್ ಅಟೆಂಡೆಂಟ್/Boiler Attendant: (ಬಾಯ್ಲರ್ ಹುದ್ದೆಗೆ ಅರ್ಜಿಸಲ್ಲಿಸುವವರು) ಕನಿಷ್ಟ್ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯೊಂದಿಗೆ ತಾಂತ್ರಿಕ ವಿದ್ಯಾ ಸಂಸ್ಥೆ / ನಿರ್ದೇಶಕರು ಬಾಯ್ಲರ್ & ಕಾರ್ಖಾನೆ ರವರಿಂದ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೆಟ ಪಡೆದಿರಬೇಕು. ಜೊತೆಗೆ ಇಂಡ್ರಸ್ಟ್ರೀಯಲ್ ಕನಸರ್ನ/ ಪಬ್ಲಿಕ್ ಸೆಕ್ಟರ್ / ಸರ್ಕಾರಿ ಸ್ವಾಮ್ಯ / ಡೇರಿ ಅಥವಾ ಆಹಾರ ಉದ್ಯಮೆಯಲ್ಲಿ ಸೇವಾ ಅನುಭವ ಹೊಂದಿರಬೇಕು
Fee: * ಸಾಮಾನ್ಯ ಅರ್ಹತೆಯ ಹಾಗೂ ಇತರ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ ರೂಪಾಯಿ 800 ಮತ್ತು ಬ್ಯಾಂಕ್ ವೆಚ್ಚ ಪ್ರತ್ಯೇಕ
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ ರೂಪಾಯಿ 400 ಮತ್ತು ಬ್ಯಾಂಕ್ ವೆಚ್ಚ ಪ್ರತ್ಯೇಕ
Age Limit: -ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಪೂರೈಸಿರಬೇಕು ಹಾಗೂ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
* ಮೀಸಲಾತಿಗನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದ್ದು ಈ ಕುರಿತ ಮಾಹಿತಿಗೆ ಅಧಿಸೂಚನೆಯನ್ನು ಗಮನಿಸಬೇಕು.
Pay Scale: ಈ ಕುರಿತ ಮಾಹಿತಿಗೆ ಅಧಿಸೂಚನೆಯನ್ನು ಗಮನಿಸಬೇಕು.
to download official notification for GUMUL Recruitment

Comments