Loading..!

ಕರ್ನಾಟಕ ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ (ESIS) ಭರ್ಜರಿ ನೇಮಕಾತಿ; ಪರೀಕ್ಷೆಯಿಲ್ಲದೆ ನೇರ ಆಯ್ಕೆ, ₹75,000 ವರೆಗೆ ಸಂಬಳ!
Tags: B.Tech B.E
Published by: Heena Sheregar | Date:15 ಜುಲೈ 2026
not found
ಇಂಜಿನಿಯರಿಂಗ್ ಹಾಗೂ ಐಟಿ ಪದವೀಧರರಿಗೆ ಇಲ್ಲಿದೆ ಒಂದು ಭರ್ಜರಿ ಸಿಹಿ ಸುದ್ದಿ! ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ (ESIS) ಖಾಲಿ ಇರುವ ವಿವಿಧ ಪ್ರಮುಖ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಜಾಜಿನಗರ, ಬೆಂಗಳೂರಿನಲ್ಲಿ ನಡೆಯಲಿರುವ ಈ ನೇಮಕಾತಿ ಪ್ರಕ್ರಿಯೆಯು ಉದ್ಯೋಗಾಕಾಂಕ್ಷಿಗಳಿಗೆ ಅತ್ಯುತ್ತಮ ವೇದಿಕೆಯಾಗಿದ್ದು, ಆಕರ್ಷಕ ಸಂಬಳದೊಂದಿಗೆ ಸರ್ಕಾರಿ ವಲಯದಲ್ಲಿ ಕಾರ್ಯನಿರ್ವಹಿಸಲು ಸುವರ್ಣಾವಕಾಶ ದೊರೆತಿದೆ. 

ಈ ನೇಮಕಾತಿಯ ಅತ್ಯಂತ ಆಕರ್ಷಕ ವಿಷಯವೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ! ಕೇವಲ ನೇರ ಸಂದರ್ಶನದ (Walk-in Interview) ಮೂಲಕವೇ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ಬರೋಬ್ಬರಿ ₹75,000 ರವರೆಗೆ ಅತ್ಯುತ್ತಮ ಮಾಸಿಕ ವೇತನ ಸಿಗಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವ ಐಟಿ ಹಾಗೂ ಇಂಜಿನಿಯರಿಂಗ್ ಪದವೀಧರರಿಗೆ ಇದೊಂದು ಅತ್ಯುತ್ತಮ ಮತ್ತು ಸುಲಭವಾದ ಅವಕಾಶವಾಗಿದೆ. ನಿಖರವಾದ ಉದ್ಯೋಗ ಅಪ್ಡೇಟ್‌ಗಳನ್ನು ಪಡೆಯಲು ದಿನಾಲೂ KPSCVAANI.COM ಫಾಲೋ ಮಾಡಿ.

ಈ ಅದ್ಭುತ ಹುದ್ದೆಗಳಿಗೆ ಬೇಕಾಗುವ ನಿಖರವಾದ ವಿದ್ಯಾಹರ್ಹತೆ, ವಯೋಮಿತಿ ಸಡಿಲಿಕೆ, ಅಗತ್ಯವಿರುವ ದಾಖಲೆಗಳು ಹಾಗೂ ಸಂದರ್ಶನ ನಡೆಯುವ ನಿಖರ ದಿನಾಂಕ ಮತ್ತು ವಿಳಾಸದ ಸಂಪೂರ್ಣ ಅಧಿಕೃತ ಮಾಹಿತಿಯನ್ನು ತಿಳಿಯಲು ಇಂದೇ ಭೇಟಿ ನೀಡಿ. ನಿಮ್ಮ ಕನಸಿನ ಉದ್ಯೋಗದ ಪೂರ್ಣ ವಿವರಗಳು ಮತ್ತು ಅಧಿಕೃತ ನೋಟಿಫಿಕೇಶನ್ ಪಿಡಿಎಫ್ ಡೌನ್‌ಲೋಡ್ ಮಾಡಲು ಈಗಲೇ ಗೂಗಲ್‌ನಲ್ಲಿ KPSCVAANI.COM ಎಂದು ಸರ್ಚ್ ಮಾಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ!

ಹುದ್ದೆಗಳ ಸಂಕ್ಷಿಪ್ತ ವಿವರ:
  • ಇಲಾಖೆಯ ಹೆಸರು: ಆಯುಕ್ತಾಲಯ, ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು (ESIS), ಬೆಂಗಳೂರು  
  • ಒಟ್ಟು ಹುದ್ದೆಗಳು: 04 ಹುದ್ದೆಗಳು  
  • ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ (Walk-in Interview)  
  • ಸಂದರ್ಶನದ ದಿನಾಂಕ: 27 ಜುಲೈ 2026 
ಹುದ್ದೆಗಳ ವಿವರ:
  • ಐಟಿ ಮ್ಯಾನೇಜರ್ (IT Manager): 01 ಹುದ್ದೆ
  • ಎಲೆಕ್ಟ್ರಿಕಲ್ ಇಂಜಿನಿಯರ್ (Electrical Engineer): 01 ಹುದ್ದೆ 
  • ಸಿವಿಲ್ ಇಂಜಿನಿಯರ್ (Civil Engineer): 01 ಹುದ್ದೆ  
  • ಬಯೋಮೆಡಿಕಲ್ ಇಂಜಿನಿಯರ್ (Bio Medical Engineer): 01 ಹುದ್ದೆ  
  • ಒಟ್ಟು ಹುದ್ದೆಗಳು: 04 ಹುದ್ದೆಗಳು  
ಮಾಸಿಕ ವೇತನ (Salary Details):
  • ಐಟಿ ಮ್ಯಾನೇಜರ್ (IT Manager):  ₹65,000/-  
  • ಎಲೆಕ್ಟ್ರಿಕಲ್ ಇಂಜಿನಿಯರ್ (Electrical Engineer):  ₹75,000/-  
  • ಸಿವಿಲ್ ಇಂಜಿನಿಯರ್ (Civil Engineer):  ₹75,000/-  
  • ಬಯೋಮೆಡಿಕಲ್ ಇಂಜಿನಿಯರ್ (Bio Medical Engineer):  ₹75,000/-  

ವಿದ್ಯಾಹರ್ಹತೆ ಮತ್ತು ಅನುಭವ (Educational Qualification):
  • ಐಟಿ ಮ್ಯಾನೇಜರ್: BE (CS / AI / ML / DS / E&C / IS) ಪದವಿಯೊಂದಿಗೆ ಕನಿಷ್ಠ 3 ವರ್ಷಗಳ ವೃತ್ತಿಪರ ಅನುಭವ ಹೊಂದಿರಬೇಕು.  
  • ಎಲೆಕ್ಟ್ರಿಕಲ್ ಇಂಜಿನಿಯರ್: BE (Electrical) / ME / M.Tech (ಸಂಬಂಧಿತ ವಿಷಯ) ಜೊತೆಗೆ ಕನಿಷ್ಠ 5 ವರ್ಷಗಳ ವೃತ್ತಿಪರ ಅನುಭವ ಇರಬೇಕು.  
  • ಸಿವಿಲ್ ಇಂಜಿನಿಯರ್: BE (Civil) / ME / M.Tech (ಸಂಬಂಧಿತ ವಿಷಯ) ಜೊತೆಗೆ ಕನಿಷ್ಠ 5 ವರ್ಷಗಳ ವೃತ್ತಿಪರ ಅನುಭವ ಹೊಂದಿರಬೇಕು.  
  • ಬಯೋಮೆಡಿಕಲ್ ಇಂಜಿನಿಯರ್: BE / B.Tech (ಬಯೋಮೆಡಿಕಲ್ ಇಂಜಿನಿಯರಿಂಗ್) ಜೊತೆಗೆ ಕನಿಷ್ಠ 5 ವರ್ಷಗಳ ವೃತ್ತಿಪರ ಅನುಭವ ಕಡ್ಡಾಯ.  
ವಯೋಮಿತಿ (Age Limit): ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಾಮಾನ್ಯ ನೇಮಕಾತಿ ನಿಯಮಗಳ ಅನ್ವಯ ಕೆಳಗಿನಂತೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ:  
ಕನಿಷ್ಠ ವಯೋಮಿತಿ: 18 ವರ್ಷಗಳು ತುಂಬಿರಬೇಕು.  

ಗರಿಷ್ಠ ವಯೋಮಿತಿ:

  • ಸಾಮಾನ್ಯ ಅರ್ಹತೆ (GM) ಅಭ್ಯರ್ಥಿಗಳಿಗೆ: 40 ವರ್ಷಗಳು
  • ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: 43 ವರ್ಷಗಳು
  • ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ: 45 ವರ್ಷಗಳು
ನೇರ ಸಂದರ್ಶನ ನಡೆಯುವ ಸ್ಥಳ ಮತ್ತು ಸಮಯ (Walk-in Interview Details): ಅರ್ಹ ಅಭ್ಯರ್ಥಿಗಳು ತಮ್ಮ ಅಗತ್ಯ ಮೂಲ ದಾಖಲಾತಿಗಳು ಹಾಗೂ ಸ್ವಯಂ ದೃಢೀಕೃತ ನಕಲು ಪ್ರತಿಗಳೊಂದಿಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.  
  • ಸಂದರ್ಶನದ ದಿನಾಂಕ: 27-07-2026  
  • ಸಂದರ್ಶನದ ಸಮಯ: ಬೆಳಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ  
ಸಂದರ್ಶನ ನಡೆಯುವ ಸ್ಥಳ:
ಇಎಸ್ಐಎಸ್ (ESIS) ವೈದ್ಯಕೀಯ ಸೇವೆಗಳ ಆಯುಕ್ತಾಲಯ, 
ರಾಜಾಜಿನಗರ್,ಬೆಂಗಳೂರು.

ಸಂದರ್ಶನಕ್ಕೆ ತರಬೇಕಾದ ಅಗತ್ಯ ದಾಖಲೆಗಳು (Required Documents):
  • ಎಸ್‌ಎಸ್‌ಎಲ್‌ಸಿ (SSLC) ಅಂಕಪಟ್ಟಿ (ವಯಸ್ಸಿನ ದೃಢೀಕರಣಕ್ಕಾಗಿ).  
  • ಶೈಕ್ಷಣಿಕ ವಿದ್ಯಾಹರ್ಹತೆಯ ಎಲ್ಲಾ ವರ್ಷಗಳ ಅಂಕಪಟ್ಟಿಗಳು ಮತ್ತು ಪದವಿ ಪ್ರಮಾಣಪತ್ರ (Degree Certificate).  
  • ಚಾಲ್ತಿಯಲ್ಲಿರುವ ಜಾತಿ ಪ್ರಮಾಣಪತ್ರ (ಅನ್ವಯಿಸುವ ಅಭ್ಯರ್ಥಿಗಳಿಗೆ).  
  • ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.  
  • ಆಧಾರ್ ಕಾರ್ಡ್ ನಕಲು ಪ್ರತಿ.  
  • ಸಂಬಂಧಪಟ್ಟ ಹುದ್ದೆಯ ವೃತ್ತಿಪರ ಅನುಭವದ ಪ್ರಮಾಣಪತ್ರಗಳು (Experience Certificates).  
  • ನಡತೆ ಪ್ರಮಾಣಪತ್ರ (Character Certificate).  
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಯಾವುದೇ ಸ್ಪಷ್ಟೀಕರಣ ಅಥವಾ ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು: 080-23324216 / 23324218.  

KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ
No. of posts:  4
Application End Date:  27 ಜುಲೈ 2026
Pay Scale: 65000 - 75000 INR
Employment Type: FULL_TIME
Hiring Organization: ESIS Bengaluru https://mcbengaluru.esic.gov.in/
Work Location: RAJAJINAGAR, Banglore, KA, 560010
To download official notification
Related Tags: B.Tech B.E

Comments