ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ಬಂಪರ್ ನೇಮಕಾತಿ 2026 – ತಕ್ಷಣ ಅರ್ಜಿ ಸಲ್ಲಿಸಿ!
ಸರ್ಕಾರಿ ವಲಯದಲ್ಲಿ ಗೌರವಾನ್ವಿತ ಹುದ್ದೆಯ ಹುಡುಕಾಟದಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಉತ್ತಮ ಅವಕಾಶ ಇಲ್ಲಿದೆ. ಕರ್ನಾಟಕ ಉಚ್ಚ ನ್ಯಾಯಾಲಯವು ದ್ವಿತೀಯ ದರ್ಜೆ ಸಹಾಯಕ (SDA)ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತವಾಗಿ ಚಾಲನೆ ನೀಡಿದೆ. ಒಟ್ಟು 20ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಪೀಠಗಳಲ್ಲಿ ಸೇವೆ ಸಲ್ಲಿಸಲು ಆಸಕ್ತಿಯಿರುವ ಪದವೀಧರರಿಗೆ ಇದೊಂದು ಅತ್ಯುತ್ತಮ ಅವಕಾಶ. ಆಯ್ಕೆಯಾದ ಅಭ್ಯರ್ಥಿಗಳಿಗೆ 25,500 ರೂ. ನಿಂದ 81,100 ರೂ. ವರೆಗಿನ ಆಕರ್ಷಕ ವೇತನ ಶ್ರೇಣಿ ಸಿಗಲಿದೆ. 13-08-2026 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, 11-09-2026ರವರೆಗೆ ಅವಕಾಶವಿರುತ್ತದೆ.
ಪರೀಕ್ಷಾ ವಿಧಾನ, ವಯೋಮಿತಿ ಸಡಲಿಕೆ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ನೀಡಲಾಗಿದೆ. ಉದ್ಯೋಗದ ಹೊಸ ಅಧಿಸೂಚನೆಗಳು ಈಗ ನಿಮ್ಮ ಮೊಬೈಲ್‌ನಲ್ಲಿ! ಇಂದೇ 'KPSCVAANI.COM' ಆಪ್ ಡೌನ್‌ಲೋಡ್ ಮಾಡಿ.
ಕರ್ನಾಟಕ ಹೈಕೋರ್ಟ್ SDA ನೇಮಕಾತಿ 2026: ಪ್ರಮುಖ ವಿವರಗಳು:
- ಸಂಸ್ಥೆಯ ಹೆಸರು: ಕರ್ನಾಟಕ ಉಚ್ಚ ನ್ಯಾಯಾಲಯ (High Court of Karnataka)
- ಹುದ್ದೆಯ ಹೆಸರು: ದ್ವಿತೀಯ ದರ್ಜೆ ಸಹಾಯಕರು (SDA)
- ಒಟ್ಟು ಹುದ್ದೆಗಳು: 20
- ಉದ್ಯೋಗ ಸ್ಥಳ: ಬೆಂಗಳೂರು, ಧಾರವಾಡ ಅಥವಾ ಕಲಬುರಗಿ ಪೀಠಗಳು
- ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ ಮಾತ್ರ
- ಅಧಿಕೃತ ವೆಬ್‌ಸೈಟ್: judiciary.karnataka.gov.in
ಹುದ್ದೆಗಳ ವಿವರ ಹಾಗೂ ವರ್ಗೀಕರಣ: ಒಟ್ಟು 20 ಹುದ್ದೆಗಳಲ್ಲಿ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಹಂಚಿಕೆ ಈ ಕೆಳಗಿನಂತಿದೆ:
- ಉಳಿಕೆ ಮೂಲ ವೃಂದ (RPC): 18 ಹುದ್ದೆಗಳು
- ಕಲ್ಯಾಣ ಕರ್ನಾಟಕ ಪ್ರದೇಶ (KKR - Backlog): 02 ಹುದ್ದೆಗಳು
ವೇತನ ಶ್ರೇಣಿ:ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹಂತ-4ರ (Level-4) ಅಡಿಯಲ್ಲಿ ತಿಂಗಳಿಗೆ 25,500 ರೂ. ನಿಂದ 81,100 ರೂ. ವೇತನದ ಜೊತೆಗೆ ಸರ್ಕಾರದ ನಿಯಮಾನುಸಾರ ಸಿಗುವ ಇತರೆ ಭತ್ಯೆಗಳು ಲಭ್ಯವಿರುತ್ತವೆ.
ಶೈಕ್ಷಣಿಕ ಅರ್ಹತೆ:
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಲೆ, ವಿಜ್ಞಾನ, ವಾಣಿಜ್ಯ, BBA, BCA ಅಥವಾ BMS ವಿಷಯಗಳಲ್ಲಿ ಪದವಿ ಪೂರ್ಣಗೊಳಿಸಿರಬೇಕು.
- ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ: ಕನಿಷ್ಠ 55% ಅಂಕಗಳು
- SC ಮತ್ತು ST ಅಭ್ಯರ್ಥಿಗಳಿಗೆ: ಕನಿಷ್ಠ 50% ಅಂಕಗಳು
- ಅಭ್ಯರ್ಥಿಗಳಿಗೆ ಕಂಪ್ಯೂಟರ್ ಚಾಲನೆ ಮತ್ತು ನಿರ್ವಹಣೆಯ ಜ್ಞಾನ ಇರುವುದು ಕಡ್ಡಾಯ.
ಇದನ್ನು ಓದಿ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಬಂಪರ್ ನೇಮಕಾತಿ: DEO, ವಿಜ್ಞಾನಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!
ವಯೋಮಿತಿ:
- ಕನಿಷ್ಠ 18 ವರ್ಷ ಪೂರೈಸಿರಬೇಕು. ಸರ್ಕಾರಿ ಆದೇಶದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ವಿಶೇಷವಾಗಿ 5 ವರ್ಷಗಳ ವಯೋಮಿತಿ ಸಡಲಿಕೆ ನೀಡಲಾಗಿದೆ.
- ಸಾಮಾನ್ಯ ವರ್ಗ (GM): ಗರಿಷ್ಠ 40 ವರ್ಷ (35 + 5 ವರ್ಷ ಸಡಲಿಕೆ)
- ಪ್ರವರ್ಗ 2A, 2B, 3A, 3B: ಗರಿಷ್ಠ 43 ವರ್ಷ (38 + 5 ವರ್ಷ ಸಡಲಿಕೆ)
- SC, ST ಹಾಗೂ ಪ್ರವರ್ಗ-1: ಗರಿಷ್ಠ 45 ವರ್ಷ (40 + 5 ವರ್ಷ ಸಡಲಿಕೆ)
ಆಯ್ಕೆ ಪ್ರಕ್ರಿಯೆ ಮತ್ತು ಅಂಕಗಳ ವಿವರ:
- ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ (90 ನಿಮಿಷಗಳ ಕಾಲಾವಧಿ) ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಒಟ್ಟು 100 ಅಂಕಗಳಲ್ಲಿ ಕನಿಷ್ಠ 60 ಅಂಕಗಳನ್ನು ಪಡೆಯುವುದು ಕಡ್ಡಾಯ.
- ಇಂಗ್ಲಿಷ್ ಪ್ರಬಂಧ: 30 ಅಂಕಗಳು
- ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ: 30 ಅಂಕಗಳು
- ಸಾಮಾನ್ಯ ಜ್ಞಾನ ಪರೀಕ್ಷೆ: 20 ಅಂಕಗಳು
- ಸಂದರ್ಶನ: 20 ಅಂಕಗಳು
- ಪರೀಕ್ಷೆಗೆ 1:10 ಅನುಪಾತದಲ್ಲಿ ಹಾಗೂ ಸಂದರ್ಶನಕ್ಕೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಕರೆಯಲಾಗುತ್ತದೆ.
ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ:
- ಸಾಮಾನ್ಯ ವರ್ಗ, 2A, 2B, 3A, 3B ಅಭ್ಯರ್ಥಿಗಳಿಗೆ: 350 ರೂ.
- SC, ST, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: 200 ರೂ.
- ಪಾವತಿ ವಿಧಾನ: SBI Payment Gateway ಮೂಲಕ Net Banking, Credit Card, Debit Card ಅಥವಾ UPI ಬಳಸಿ ಶುಲ್ಕ ಪಾವತಿಸಬಹುದು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 13-08-2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-09-2026 (ರಾತ್ರಿ 11:59 ರವರೆಗೆ)
ಅರ್ಜಿ ಸಲ್ಲಿಸುವ ವಿಧಾನ:
- ಕರ್ನಾಟಕ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ (judiciary.karnataka.gov.in) ಭೇಟಿ ನೀಡಿ.
- 'Recruitment' ವಿಭಾಗದಲ್ಲಿ 'Second Division Assistant (SDA) Recruitment 2026' ಲಿಂಕ್ ಆಯ್ಕೆ ಮಾಡಿ.
- ನಿಮ್ಮ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ನಿಯಮದಂತೆ 50KB ಗಿಂತ ಕಡಿಮೆ ಇರುವ ಫೋಟೋ ಹಾಗೂ 25KB ಗಿಂತ ಕಡಿಮೆ ಇರುವ ಸಹಿಯನ್ನು ಅಪ್‌ಲೋಡ್ ಮಾಡಿ.
- ಶುಲ್ಕ ಪಾವತಿಸಿ, ಅರ್ಜಿಯನ್ನು ಸಬ್ಮಿಟ್ ಮಾಡಿ.


Comments