Loading..!

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಛೇರಿ ಬೆಳಗಾವಿ ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ | ಪರೀಕ್ಷೆ ಇರುವುದಿಲ್ಲ
Tags: Degree
Published by: Yallamma G | Date:6 ಸೆಪ್ಟೆಂಬರ್ 2025
not found

                       ಕರ್ನಾಟಕದಲ್ಲಿ ಉದ್ಯೋಗ ಹುಡಕುತ್ತಿರುವ ಅಭ್ಯರ್ಥಿಗಳಿಗೆ ಇದೀಗ ಸಿಹಿ ಸದ್ದಿ, ಪ್ರಧಾನ ಮಂತ್ರಿ ಜನ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM-JANMAN) ದರ್ತಿ ಅಭಾ-ಜನ ಜಾತಿಯ ಗ್ರಾಮ ಉತ್ಕರ್ಷ ಅಭಿಯಾನ (DA-JGUA) ಯೋಜನೆಯ ವ್ಯಾಪ್ತಿಯ ಮತ್ತು ದುರ್ಗಮ ಹಾಗೂ ಸಂಪರ್ಕರಹಿತ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಲು ಸಂಚಾರಿ ಆರೋಗ್ಯ ಘಟಕಗಳನ್ನು (ಎಂ.ಹೆಚ್.ಯು) ಅನುಷ್ಠಾನಗೊಳಿಸಲು ಮಾನವ ಸಂಪನ್ಮೂಲ ಆಯ್ಕೆ ಮಾಡಲು 12 ಹುದ್ದೆಗಳಿಗೆ ಸೆಪ್ಟೆಂಬರ್ 2025 ರಿಂದ ಮಾರ್ಚ 2026 ವರೆಗೆ 7 ತಿಂಗಳು ನೇರ ಗುತ್ತಿಗೆ ಆಧಾರದ ಮೇರೆಗೆ (ಹಾಗೂ ಸದರಿ ಗುತ್ತಿಗೆ ಅವಧಿಯು ಸರ್ಕಾರದ ಮಾರ್ಗಸೂಚಿ ಪರಿಶೀಲಿಸಿ ಅನುಮೋದನೆ ನೀಡಿದ ನಂತರ ಗುತ್ತಿಗೆ ಸೇವೆಯನ್ನು 2026-27 ನೇ ಸಾಲಿಗೆ ಮುಂದುವರಿಸಬಹುದಾಗಿದೆ) ಕಾರ್ಯಕ್ರಮದಡಿಯಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ರೋಷರ್ / ಮೇರಿಟ್ ಆಧಾರದ ಮೇಲೆ ನೇಮಕಾತಿ ನಿಯಮಾವಳಿಗಳನ್ವಯ ಅರ್ಜಿ ಆಹ್ವಾನಿಸಲಾಗಿದೆ.


ಹದ್ದೆಗಳ ವಿವರ : 12
ಎಂ.ಬಿಬಿಎಸ್, ವೈದ್ಯಾಧಿಕಾರಿಗಳು : 4
ಶುತ್ತೂಷಕರು : 4
ಪ್ರಯೋಗಶಾಲಾ ತಂತ್ರಜ್ಞರು : 4


ವಿದ್ಯಾರ್ಹತೆ : 
# ಎಂ.ಬಿಬಿಎಸ್, ವೈದ್ಯಾಧಿಕಾರಿಗಳು : 

- ಎಂ.ಬಿಬಿಎಸ್, ಉತ್ತೀರ್ಣರಾಗಿರಬೇಕು ಹಾಗೂ ಕಡ್ಡಾಯವಾಗಿ Internship ಪೂರೈಸಿರಬೇಕು
- ಕೆ.ಎಂ.ಸಿ.ಯ ನೊಂದಣಿ ಹೊಂದಿರತಕ್ಕದ್ದು.
- ಸಂಬಂಧ ಪಟ್ಟ ವಿಶ್ವ ವಿದ್ಯಾಲಯದಿಂದ convocation/ Degree certificate ಹೊಂದಿರಬೇಕೆ. 
- ಅನುಭವ: ಕನಿಷ್ಠ ಎರಡು ವರ್ಷಗಳ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿರಬೇಕು.
# ಶುತ್ತೂಷಕರು : 
- ಜಿ.ಎನ್.ಎಂ. ನರ್ಸಿಂಗ್ / ಬಿ.ಎಸ್.ಸಿ. ನರ್ಸಿಂಗ್
- ಕರ್ನಾಟಕ ನರ್ಸಿಂಗ್ ಕೌನ್ಸಿಲಿಂಗ್‌ ನಲ್ಲಿ ನೊಂದಣಿಯಾಗಿರಬೇಕು.
- ಅನುಭವ: ಕನಿಷ್ಠ ಎರಡು ವರ್ಷಗಳ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿರಬೇಕು.
- ಘಟಿಕೋತ್ಸವ / ಪದವಿ ಪ್ರಮಾಣಪತ್ರದ ಬಗ್ಗೆ ಮಾಹಿತಿ
# ಪ್ರಯೋಗಶಾಲಾ ತಂತ್ರಜ್ಞರು : 
- ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿರಬೇಕು ಮತ್ತು ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯ ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ ಮೂರು ವರ್ಷದ ಡಿಪ್ಲೋಮಾ ಹೊಂದಿರಬೇಕು.
ಅಥವಾ
- ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣ ಮತ್ತು ಕರ್ನಾಟಕ ರಾಜ್ಯ ಆರೆ ವೈದ್ಯಕೀಯ ಮಂಡಳಿಯ ನಡೆಸುವ ಪ್ರಯೋಗ ಶಾಲಾ ತಂತ್ರಜ್ಞತೆಯಲ್ಲಿ ಎರಡು ವರ್ಷದ ಡಿಪ್ಲೋಮಾ ಹೊಂದಿರಬೇಕು.
- ಪ್ರಯೋಗಶಾಲಾ ತಂತ್ರಜ್ಞರು ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯ ನೊಂದಣಿ ಹೊಂದಿರಬೇಕು.


ವಯೋಮಿತಿ: ಗರಿಷ್ಠ 65 ವರ್ಷಗಳ ವಯೋಮಿತಿಯನ್ನು ಮೀರಿರಬಾರದು. 


ವೇತನ : 
ಎಂ.ಬಿಬಿಎಸ್, ವೈದ್ಯಾಧಿಕಾರಿಗಳು : 75000/-
ಶುತ್ತೂಷಕರು : 22000/-
ಪ್ರಯೋಗಶಾಲಾ ತಂತ್ರಜ್ಞರು : 20000/-


ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಎಂ. ವಡಗಾವಿ ಬೆಳಗಾವಿ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸುವುದು.


ವಿಶೇಷ ಸೂಚನೆ: ಸದರಿ ನೇಮಕಾತಿ ಪ್ರಕ್ರಿಯೇಯು ಜಿಲ್ಲಾ ಆರೋಗ್ಯ & ಕು. ಕ. ಸಂಘದ ಆದೇಶಕ್ಕೆ ಅನುಗುಣವಾಗಿ ಮುಂದಿನ ಮಾರ್ಪಾಡುಗಳಿಗೆ ಒಳಪಟ್ಟಿರುತ್ತದೆ.


ನೇಮಕಾತಿ ವೇಳಾಪಟ್ಟಿ : 
1) ಅರ್ಜಿ ವಿತರಿಸುವ ದಿನಾಂಕ : 03/09/2025 ರಿಂದ 09/09/2025
2) ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ : 10/09/2025


ಅರ್ಜಿ ಸಲ್ಲಿಸುವ ವಿಳಾಸ : ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಎಂ.ವಡಗಾವಿ ಬೆಳಗಾವಿ-590005

Comments