ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ

ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 8 ನರ್ಸಿಂಗ್ ಅಧಿಕಾರಿ ಮತ್ತು ಪ್ರಯೋಗ ಶಾಲಾ ತಂತ್ರಜ್ಞ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯು ಅರ್ಹ ಅಭ್ಯರ್ಥಿಗಳಿಗೆ ಸುವರ್ಣಾವಕಾಶವಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ವೃತ್ತಿಪರ ಅನುಭವ ಮತ್ತು ಸ್ಥಿರ ಉದ್ಯೋಗ ದೊರಕಿಸಿಕೊಳ್ಳಲು ಅವಕಾಶ ನೀಡುತ್ತದೆ.
ಆಸಕ್ತರು ಇಂದೇ ನಿಮ್ಮ ಅರ್ಜಿಯನ್ನು ಸಿದ್ಧಪಡಿಸಿ, ಅಗತ್ಯ ದಾಖಲೆಗಳೊಂದಿಗೆ ಸಮಯಮಿತಿಯೊಳಗೆ ಸಲ್ಲಿಸಿ. ಆರೋಗ್ಯ ಸೇವೆಯಲ್ಲಿ ಮುಂದಿನ ಹೆಜ್ಜೆ ಇಡಲು ಮತ್ತು ಸಮುದಾಯದ ಆರೋಗ್ಯ ಸುಧಾರಣೆಗೆ ಕೊಡುಗೆ ನೀಡಲು ಇದು ಉತ್ತಮ ಅವಕಾಶವಾಗಿದೆ. ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ!
ಈ ಲೇಖನದಲ್ಲಿ ನಾವು ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅರ್ಹತಾ ಮಾನದಂಡಗಳು ಮತ್ತು ಕೊನೆಯ ದಿನಾಂಕದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕೂಡಲೇ ಅರ್ಜಿ ಸಲ್ಲಿಸಿ ಈ ಉದ್ಯೋಗಾವಕಾಶವನ್ನು ಬಳಸಿಕೊಳ್ಳಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 2025/09/18 ರೊಳಗಾಗಿ ಅರ್ಜಿಸಲ್ಲಿಸಬಹುದಾಗಿದೆ.
📌 DHFWS ವಿಜಯನಗರ ಹುದ್ದೆಯ ಅಧಿಸೂಚನೆ
ಸಂಸ್ಥೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ (DHFWS)
ಹುದ್ದೆಗಳ ಸಂಖ್ಯೆ: 08
ಉದ್ಯೋಗ ಸ್ಥಳ: ವಿಜಯನಗರ – ಕರ್ನಾಟಕ
ಹುದ್ದೆ ಹೆಸರು: ನರ್ಸಿಂಗ್ ಅಧಿಕಾರಿ ಮತ್ತು ಪ್ರಯೋಗ ಶಾಲಾ ತಂತ್ರಜ್ಞ
ಸಂಬಳ: ತಿಂಗಳಿಗೆ ರೂ.22000-20000/-
📌ಹುದ್ದೆಗಳ ವಿವರ :
ನರ್ಸಿಂಗ್ ಅಧಿಕಾರಿ :04
ಪ್ರಯೋಗ ಶಾಲಾ ತಂತ್ರಜ್ಞ : 04
🎓 ಅರ್ಹತೆ :
# ನರ್ಸಿಂಗ್ ಅಧಿಕಾರಿ ಹುದ್ದೆಗಳಿಗೆ :
- ಜಿ.ಎನ್.ಎಂ ನರ್ಸಿಂಗ್/ ಬಿ.ಎಸ್.ಸಿ ನರ್ಸಿಂಗ್
- ಕರ್ನಾಟಕ ನರ್ಸಿಂಗ್ ಕೌನ್ಸಿಲಿಂಗ್‌ನಲ್ಲಿ ನೋಂದಣಿಯಾಗಿರಬೇಕು
# ಪ್ರಯೋಗ ಶಾಲಾ ತಂತ್ರಜ್ಞರು ಹುದ್ದೆಗಳಿಗೆ :
- ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿರಬೇಕು ಮತ್ತು ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗ ಶಾಲಾ ತಂತ್ರಜ್ಞತೆಯಲ್ಲಿ ಮೂರು ವರ್ಷದ ಡಿಪ್ಲೋಮಾ ಹೊಂದಿರಬೇಕು.
ಅಥವಾ
- ದ್ವೀತಿಯ ಪಿ.ಯು.ಸಿ ಯಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣ ಮತ್ತು ಕರ್ನಾಟಕ ರಾಜ್ಯ ಆರೆ ವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗ ತಂತ್ರಜ್ಞತೆಯಲ್ಲಿ ಎರಡು ವರ್ಷದ ಡಿಪ್ಲೋಮಾ ಹೊಂದಿರಬೇಕು.
- ಪ್ರಯೋಗ ಶಾಲಾ ತಂತ್ರಜ್ಞರು ಕಡ್ಡಾಯವಾಗಿ ಕರ್ನಾಟಕ ರಾಜ್ಯ ಆರೆ ವೈದ್ಯಕೀಯ ಮಂಡಳಿಯ ನೋಂದಾಣಿ ಹೊಂದಿರಬೇಕು.
=> ಕನಿಷ್ಠ ಎರಡು ವರ್ಷಗಳ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿರಬೇಕು.
🎂 ವಯೋಮಿತಿ : ಗರಿಷ್ಠ 45 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ವಿಜಯನಗರ ನಿಯಮಗಳ ಪ್ರಕಾರ.
💰 ವೇತನ ಶ್ರೇಣಿ :
ನರ್ಸಿಂಗ್ ಅಧಿಕಾರಿ : ರೂ. 22,000/-
ಪ್ರಯೋಗಾ ಶಾಲಾ ತಂತ್ರಜ್ಞ : ರೂ. 20,000/-
💼ಆಯ್ಕೆ ಪ್ರಕ್ರಿಯೆ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಅಧಿಸೂಚನೆಯ ಪ್ರಕಾರ
💼ಅರ್ಜಿ ಸಲ್ಲಿಸುವ ವಿಧಾನ :
ಅರ್ಜಿಗಳನ್ನು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಾರ್ಯಾಲಯ, ವಿಜಯನಗರ ಇಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಸೂಚಿಸಿದ ಕೊನೆಯ ದಿನಾಂಕದೊಳಗೆ ಸದರಿ ಕಛೇರಿಗೆ ನೇರವಾಗಿ ಅಥವಾ ಈ ಕಛೇರಿಯ ಇ-ಮೇಲ್ ವಿಳಾಸದ ಮೂಲಕವು ದಿ: 18.09.2025 ಸಂಜೆ 5:30 ಗಂಟೆಯೊಳಗೆ ರವಾನಿಸಬಹುದು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸುವ ವಿಳಾಸ :
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಾರ್ಯಾಲಯ ಹೊಸ ಎಂ.ಸಿ.ಹೆಚ್. ಆಸ್ಪತ್ರೆ ಆವರಣ, ಹೊಸಪೇಟೆ ತಾ॥ ವಿಜಯನಗರ ಜಿಲ್ಲೆ.
ಇ-ಮೇಲ್ ವಿಳಾಸ: diovijayanagara@gmail.com
💻 ಅರ್ಜಿ ಸಲ್ಲಿಸುವುದು ಹೇಗೆ?
1. ಕೆಳಗಿನ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.
📅 ಪ್ರಮುಖ ದಿನಾಂಕಗಳು :
1. ಅರ್ಜಿ ವಿತರಿಸುವ ದಿನಾಂಕ : 11.09.2025 ಅರ್ಜಿ ವಿತರಿಸುವ ಕೊನೆಯ ದಿನಾಂಕ :18.09.2025
2. ಅರ್ಜಿ ಸಲ್ಲಿಸುವ ಕೊನೆಯ ದಿ: 18.09.2025 ಸಂಜೆ 5:30 ಗಂಟೆಯೊಳಗೆ
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳು, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಾಲಯ, 60 ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣ, ಹೊಸಪೇಟೆ, ವಿಜಯನಗರ ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸುವುದು.
To Download the official notification
DHFWS Vijayanagara Jobs 2025
Vijayanagara Health Department Recruitment 2025
DHFWS Notification 2025 Vijayanagara
District Health and Family Welfare Society Vijayanagara Vacancy 2025
DHFWS Vijayanagara Online Application 2025
DHFWS Vijayanagara Eligibility Criteria 2025
DHFWS Vijayanagara Selection Process 2025
Vijayanagara DHFWS Salary & Job Profile 2025
DHFWS Vijayanagara Walk-in Interview 2025
DHFWS Paramedical & Medical Staff Jobs Vijayanagara 2025




Comments