ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಉಡುಪಿಯ ರಾಷ್ಟೀಯ ಆರೋಗ್ಯ ಯೋಜನೆಯಡಿ ಖಾಲಿ ಇರುವ 13 ವಿವಿಧ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ
Published by: Hanamant Katteppanavar | Date:6 ಎಪ್ರಿಲ್ 2021

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಉಡುಪಿಯ 2020-21 ನೇ ಸಾಲಿನ ರಾಷ್ಟೀಯ ಆರೋಗ್ಯ ಯೋಜನೆಯಡಿಯಲ್ಲಿ ಖಾಲಿ ಇರುವ 13 ಅರಿವಳಿಕೆ ತಜ್ಞರು, ಸ್ತ್ರೀರೋಗತಜ್ಞರು, ಪಂಚಕರ್ಮ ತಜ್ಞರು, ದಂತ ನೈರ್ಮಲ್ಯ ತಜ್ಞರು, ವೈದ್ಯಕೀಯ ಅಧಿಕಾರಿ ಮತ್ತು ಎ.ಎನ್.ಎಂ. ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಸಂದರ್ಶನ ನಡೆಯುವ ದಿನಾಂಕ :ಏಪ್ರಿಲ್ 07 2021 ರಂದು ನಡೆಯುವುದು.
ಹುದ್ದೆಗಳ ವಿವರ :
- ಅರಿವಳಿಕೆ ತಜ್ಞರು- 01 ಹುದ್ದೆ
- ಸ್ತ್ರೀರೋಗತಜ್ಞರು- 01 ಹುದ್ದೆ
- ಪಂಚಕರ್ಮ ತಜ್ಞರು- 01 ಹುದ್ದೆ
- ದಂತ ನೈರ್ಮಲ್ಯ ತಜ್ಞರು- 01 ಹುದ್ದೆ
- ವೈದ್ಯಕೀಯ ಅಧಿಕಾರಿ- 04 ಹುದ್ದೆಗಳು ಮತ್ತು
- ಎ.ಎನ್.ಎಂ.- 05 ಹುದ್ದೆಗಳು
No. of posts: 13
Application End Date: 7 ಎಪ್ರಿಲ್ 2021
Selection Procedure: ಹುದ್ದೆಗೆ ಅಭ್ಯರ್ಥಿಗಳನ್ನುನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification: ಹುದ್ದೆಗೆ ಅನುಗುಣವಾಗಿ 10+2, Diploma in Dental Hygienist, DA, DNB, MD, Anaesthesia, DGO, MD- panchakarma, MBBS, and ANM ನಲ್ಲಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
Age Limit: - ಹುದ್ದೆಗೆ ಅನುಗುಣವಾಗಿ ಗರಿಷ್ಠ -50 ರಿಂದ 70 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
Pay Scale:
- ಹುದ್ದೆಗಳ ಅನುಸಾರವಾಗಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 10,000/- ರೂ ಗಳಿಂದ 1,10,000 /- ರೂ ಗಳ ವರೆಗೆ ವಿವೇತನವನ್ನು ನೀಡಲಾಗುವುದು.
- ಈ ನೇಮಕಾತಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.





Comments