Loading..!

DHFWS ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ 2026: 55 ಶುಶೂಷಣಾಧಿಕಾರಿ (Nursing Officer) ಹುದ್ದೆಗಳಿಗೆ ನೇರ ಸಂದರ್ಶನ
Tags: Degree
Published by: Yallamma G | Date:22 ಜನವರಿ 2026
not found
🌟 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬೆಂಗಳೂರು ನಗರ (DHFWS Bangalore) ನಿಂದ ಮಹತ್ವದ ಅಧಿಸೂಚನೆ!

                                    🏥 ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 55 ಶುಶೂಷಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯು ಅರ್ಹ ಅಭ್ಯರ್ಥಿಗಳಿಗೆ ಸುವರ್ಣಾವಕಾಶವಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ವೃತ್ತಿಪರ ಅನುಭವ ಮತ್ತು ಸ್ಥಿರ ಉದ್ಯೋಗ ದೊರಕಿಸಿಕೊಳ್ಳಲು ಅವಕಾಶ ನೀಡುತ್ತದೆ.

                         🩺ಆಸಕ್ತರು ಇಂದೇ ನಿಮ್ಮ ಅರ್ಜಿಯನ್ನು ಸಿದ್ಧಪಡಿಸಿ, ಅಗತ್ಯ ದಾಖಲೆಗಳೊಂದಿಗೆ ಸಮಯಮಿತಿಯೊಳಗೆ ಸಲ್ಲಿಸಿ. ಆರೋಗ್ಯ ಸೇವೆಯಲ್ಲಿ ಮುಂದಿನ ಹೆಜ್ಜೆ ಇಡಲು ಮತ್ತು ಸಮುದಾಯದ ಆರೋಗ್ಯ ಸುಧಾರಣೆಗೆ ಕೊಡುಗೆ ನೀಡಲು ಇದು ಉತ್ತಮ ಅವಕಾಶವಾಗಿದೆ. ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ!

                            ಈ ಲೇಖನದಲ್ಲಿ ನಾವು ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅರ್ಹತಾ ಮಾನದಂಡಗಳು ಮತ್ತು ಕೊನೆಯ ದಿನಾಂಕದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕೂಡಲೇ ಅರ್ಜಿ ಸಲ್ಲಿಸಿ ಈ ಉದ್ಯೋಗಾವಕಾಶವನ್ನು ಬಳಸಿಕೊಳ್ಳಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 16-ಮಾರ್ಚ್-2026 ರೊಳಗಾಗಿ ಅರ್ಜಿಸಲ್ಲಿಸಬಹುದಾಗಿದೆ. 

📌DHFWS ಬೆಂಗಳೂರು ಹುದ್ದೆಯ ಅಧಿಸೂಚನೆ

ಸಂಸ್ಥೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬೆಂಗಳೂರು ( DHFWS ಬೆಂಗಳೂರು )
ಹುದ್ದೆಗಳ ಸಂಖ್ಯೆ: 55
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಹುದ್ದೆಯ ಹೆಸರು: ನರ್ಸಿಂಗ್ ಅಧಿಕಾರಿ
ವೇತನ: ತಿಂಗಳಿಗೆ ರೂ. 18,714/-

📌 ಹುದ್ದೆಗಳ ವಿವರ ಮತ್ತು ಸ್ಥಳ ನಿಯೋಜನೆ (Vacancy Details) : 
ಒಟ್ಟು 55 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಬೆಂಗಳೂರಿನ ವಿವಿಧ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಭರ್ತಿ ಮಾಡಲಾಗುತ್ತದೆ:
ಕೆ.ಸಿ ಜನರಲ್ ಆಸ್ಪತ್ರೆ (KC General Hospital): 21 ಹುದ್ದೆಗಳು
ಸಾರ್ವಜನಿಕ ಆಸ್ಪತ್ರೆ, ಜಯನಗರ (General Hospital Jayanagar): 19 ಹುದ್ದೆಗಳು
ಸಿ.ವಿ ರಾಮನ್ ಆಸ್ಪತ್ರೆ (CV Raman Hospital): 08 ಹುದ್ದೆಗಳು
ಸಾರ್ವಜನಿಕ ಆಸ್ಪತ್ರೆ, ಕೆ.ಆರ್ ಪುರಂ (General Hospital KR Puram): 03 ಹುದ್ದೆಗಳು
ಸಾರ್ವಜನಿಕ ಆಸ್ಪತ್ರೆ, ಆನೇಕಲ್ (General Hospital Anekal): 02 ಹುದ್ದೆಗಳು
ಸಾರ್ವಜನಿಕ ಆಸ್ಪತ್ರೆ, ಯಲಹಂಕ (General Hospital Yelahanka): 02 ಹುದ್ದೆಗಳು

🎓ಅರ್ಹತಾ ಮಾನದಂಡ : ಅಭ್ಯರ್ಥಿಗಳು ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಿಂದ ಜಿಎನ್ಎಂ (GNM) ಅಥವಾ ಬಿಎಸ್ಸಿ ನರ್ಸಿಂಗ್ (B.Sc Nursing) ಪದವಿಯನ್ನು ಹೊಂದಿರಬೇಕು. ಜೊತೆಗೆ ಕರ್ನಾಟಕ ನರ್ಸಿಂಗ್ ಕೌನ್ಸಿಲ್ (KNC) ನಲ್ಲಿ ನೋಂದಣಿ ಮಾಡಿರಬೇಕು ಮತ್ತು ಕಂಪ್ಯೂಟರ್ ಸಾಕ್ಷರತೆ ಹೊಂದಿರಬೇಕು.

⏳ ವಯಸ್ಸಿನ ಮಿತಿ:  ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷಗಳು ಮಿರಬಾರದು.

📝 ನೇರ ಸಂದರ್ಶನದ ವಿವರಗಳು (Walk-in Interview Schedule)
ಆಸಕ್ತ ಅಭ್ಯರ್ಥಿಗಳು ಕೆಳಕಂಡ ದಿನಾಂಕಗಳಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 01:00 ಗಂಟೆಯೊಳಗೆ ತಮ್ಮ ಮೂಲ ದಾಖಲೆಗಳು ಮತ್ತು ನಕಲು ಪ್ರತಿಗಳೊಂದಿಗೆ ಹಾಜರಾಗಬೇಕು.

ಸಂದರ್ಶನದ ದಿನಾಂಕಗಳು:

27-01-2026
02-02-2026
09-02-2026
16-02-2026
23-02-2026
02-03-2026
09-03-2026
16-03-2026

ಸಂದರ್ಶನ ನಡೆಯುವ ಸ್ಥಳ (Venue): ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣ, ಹಳೇ ಟಿ.ಬಿ ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು - 560038.

⭐ ಪ್ರಮುಖ ಸೂಚನೆಗಳು (Important Notes)
- ಇದು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (NHM) ಗುತ್ತಿಗೆ ಆಧಾರಿತ ಹುದ್ದೆಗಳಾಗಿವೆ.
- ಆಯ್ಕೆಯನ್ನು ಮೆರಿಟ್ ಕಮ್ ರೋಸ್ಟರ್ (Merit cum Roster) ಅನ್ವಯ ಮಾಡಲಾಗುತ್ತದೆ.
- ಅಭ್ಯರ್ಥಿಗಳು ಮಹಿಳೆಯರಿಗೆ ಮಾತ್ರ (ಕೆಲವು ನಿರ್ದಿಷ್ಟ ಮೀಸಲಾತಿ ಅನ್ವಯಿಸಬಹುದು, ದಯವಿಟ್ಟು ನೋಟಿಫಿಕೇಶನ್ ಪರಿಶೀಲಿಸಿ).

📝
Required Documents:ಅಭ್ಯರ್ಥಿಗಳು ತಮ್ಮ SSLC ಅಂಕಪಟ್ಟಿ, ನರ್ಸಿಂಗ್ ಅಂಕಪಟ್ಟಿಗಳು, ಪದವಿ ಪ್ರಮಾಣ ಪತ್ರ, KNC ನೋಂದಣಿ ಪತ್ರ, ಜಾತಿ ಪ್ರಮಾಣ ಪತ್ರ, ಮತ್ತು ಕನ್ನಡ ಮಾಧ್ಯಮ/ಗ್ರಾಮೀಣ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ತರತಕ್ಕದ್ದು.
Application End Date:  27 ಜನವರಿ 2026
To Download Official Notification

Comments