ಎಕ್ಸಿಮ್ ಬ್ಯಾಂಕ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಪ್ರಕಟಣೆ - ಇಂದೇ ಅರ್ಜಿ ಸಲ್ಲಿಸಿ
Published by Yallamma G
21 ಜನವರಿ 2026
Others
ಈ ಅಧಿಸೂಚನೆಯ ಅಡಿಯಲ್ಲಿ 40 ಮ್ಯಾನೇಜ್‌ಮೆಂಟ್ ಟ್ರೈನಿ ಮತ್ತು 20 ಡೆಪ್ಯೂಟಿ ಮ್ಯಾನೇಜರ್ ಸೇರಿ ಒಟ್ಟು 60 ಹುದ್ದೆಗಳ ನೇಮಕಾತಿ ನಡೆಯಲಿದೆ. ಉತ್ಸಾಹಿ ಮತ್ತು ಅರ್ಹ ಭಾರತದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 15-ಫೆಬ್ರವರಿ-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿಯ ಸಂಪೂರ್ಣ ವಿವರಗಳು, ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ನೀಡಲಾಗಿದೆ.
📌ಎಕ್ಸಿಮ್ ಬ್ಯಾಂಕ್ ಹುದ್ದೆಗಳ ಅಧಿಸೂಚನೆ
ಸಂಸ್ಥೆಯ ಹೆಸರು : ಎಕ್ಸ್‌ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ (ಎಕ್ಸಿಮ್ ಬ್ಯಾಂಕ್)
ಹುದ್ದೆಗಳ ಸಂಖ್ಯೆ: 60
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆ ಹೆಸರು: ಮ್ಯಾನೇಜ್‌ಮೆಂಟ್ ಟ್ರೈನಿ
ಸಂಬಳ: ತಿಂಗಳಿಗೆ ರೂ. 48,480 – 85,920/-
ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
👉 ಅಧಿಕೃತ ವೆಬ್‌ಸೈಟ್: https://www.eximbankindia.in/
👉 ಅಧಿಸೂಚನೆ ಲಿಂಕ್ & Apply Online: https://www.kpscvaani.com/
📌ಹುದ್ದೆಯ ವಿವರಗಳು : ಎಕ್ಸಿಮ್ ಬ್ಯಾಂಕ್ ಒಟ್ಟು 60 ಹುದ್ದೆಗಳಿಗೆ ಅಧಿಸೂಚನೆ ನೀಡಿದೆ.
* ಮ್ಯಾನೇಜ್‌ಮೆಂಟ್ ಟ್ರೈನಿ (Management Trainee - Banking Operations): 40 ಹುದ್ದೆಗಳು.
* ಡೆಪ್ಯೂಟಿ ಮ್ಯಾನೇಜರ್ (Deputy Manager - Banking Operations): 20 ಹುದ್ದೆಗಳು.
🎓ವಿದ್ಯಾರ್ಹತೆ (Education Qualification): ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆ ಹೊಂದಿರಬೇಕು:
=> ಯಾವುದೇ ವಿಷಯದಲ್ಲಿ ಪದವಿ (ಮಿನಿಮಮ್ 60% ಅಂಕಗಳೊಂದಿಗೆ).
=> ಜೊತೆಗೆ: ಎಂಬಿಎ (MBA) / ಪಿಜಿಡಿಬಿಎ (PGDBA) (Finance / International Business / Foreign Trade ಸ್ಪೆಷಲೈಸೇಶನ್) ಅಥವಾ ಚಾರ್ಟರ್ಡ್ ಅಕೌಂಟೆಂಟ್ (CA) ಪಾಸಾಗಿರಬೇಕು.
=> ಗಮನಿಸಿ: ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ಕನಿಷ್ಠ 1 ವರ್ಷದ ಕೆಲಸದ ಅನುಭವ ಕಡ್ಡಾಯ
⏳ ವಯಸ್ಸಿನ ಮಿತಿ (Age limit) : ದಿನಾಂಕ 31-12-2025 ಕ್ಕೆ ಅನ್ವಯವಾಗುವಂತೆ:
ಕನಿಷ್ಠ 21 ವರ್ಷ
ಗರಿಷ್ಠ 28 ವರ್ಷ.
ವಯೋಮಿತಿ ಸಡಿಲಿಕೆ: SC/ST ಗೆ 5 ವರ್ಷ, OBC ಗೆ 3 ವರ್ಷ ಸಡಿಲಿಕೆ ಇರುತ್ತದೆ.
ಈಗಾಗಲೇ ಅಧಿಸೂಚಿದ ಹುದ್ದೆಗಳ ಪರೀಕ್ಷೆಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ
💰 ಸ್ಟೈಪೆಂಡ್ / ವೇತನ :
Management Trainee: ತರಬೇತಿ ಅವಧಿಯಲ್ಲಿ ಮಾಸಿಕ ₹65,000/- ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿ ನಂತರ ಡೆಪ್ಯೂಟಿ ಮ್ಯಾನೇಜರ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತದೆ.
Deputy Manager: ಆರಂಭಿಕ ಮೂಲ ವೇತನ ₹48,480 ಇದ್ದು, ಭತ್ಯೆಗಳೊಂದಿಗೆ ಒಟ್ಟು ವೇತನ (Gross Salary) ತಿಂಗಳಿಗೆ ಸುಮಾರು ₹85,920 ರವರೆಗೆ ಇರುತ್ತದೆ (Pay Scale: 48480-85920).
💼 ಆಯ್ಕೆ ವಿಧಾನ (Selection Process):
• ಲಿಖಿತ ಪರೀಕ್ಷೆ (Written Test)
- ಪರೀಕ್ಷೆಯ ಸ್ವರೂಪ (Exam Structure): ಇದು Subjective Type (ವಿವರಣಾತ್ಮಕ/ಬರವಣಿಗೆಯ) ಪರೀಕ್ಷೆಯಾಗಿದೆ. ಮಲ್ಟಿಪಲ್ ಚಾಯ್ಸ್ (MCQ) ಪ್ರಶ್ನೆಗಳಿರುವುದಿಲ್ಲ.
- ವಿಷಯ (Subject): ವೃತ್ತಿಪರ ಜ್ಞಾನ (Professional Knowledge)
- ಒಟ್ಟು ಸಮಯ: 2 ಗಂಟೆ 30 ನಿಮಿಷಗಳು (150 ನಿಮಿಷಗಳು)
- ಒಟ್ಟು ಅಂಕಗಳು: 100 ಅಂಕಗಳು
• ವೈಯಕ್ತಿಕ ಸಂದರ್ಶನ (Personal Interview).
• ಪರೀಕ್ಷಾ ಕೇಂದ್ರಗಳು: ಬೆಂಗಳೂರು ಕೇಂದ್ರ ಲಭ್ಯವಿಲ್ಲ (ಹತ್ತಿರದ ಕೇಂದ್ರಗಳು: ಚೆನ್ನೈ, ಮುಂಬೈ).
📍 ಗಮನಿಸಬೇಕಾದ ಅಂಶಗಳು:
- ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಯಾವುದೇ 'ಸೆಕ್ಷನಲ್ ಕಟ್-ಆಫ್' (Sectional Cut-off) ಇರುವುದಿಲ್ಲ. ಆದರೆ, ಒಟ್ಟಾರೆ ಗಳಿಸಿದ ಅಂಕಗಳ ಆಧಾರದ ಮೇಲೆ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ.
- ಅಂತಿಮ ಆಯ್ಕೆಗೆ ಲಿಖಿತ ಪರೀಕ್ಷೆಗೆ 70% ವೇಟೇಜ್ (Weightage) ಮತ್ತು ಸಂದರ್ಶನಕ್ಕೆ 30% ವೇಟೇಜ್ ನೀಡಲಾಗುತ್ತದೆ.
💰 ಅರ್ಜಿ ಶುಲ್ಕ :
ಸಾಮಾನ್ಯ/OBC ಅಭ್ಯರ್ಥಿಗಳಿಗೆ: ₹600/-
SC/ST/PwBD/EWS/ಮಹಿಳಾ ಅಭ್ಯರ್ಥಿಗಳಿಗೆ: ₹100/- (Intimation Charges only).
ಪಾವತಿ ವಿಧಾನ: ಆನ್‌ಲೈನ್
📝ಅರ್ಜಿ ಸಲ್ಲಿಕೆಗೂ ಮುನ್ನ ಸಿದ್ಧವಿಟ್ಟುಕೊಳ್ಳಬೇಕಾದ ದಾಖಲೆಗಳು (ಸ್ಕ್ಯಾನ್ ಮಾಡಿಟ್ಟುಕೊಳ್ಳಿ): ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಬೇಕು :
* ಭಾವಚಿತ್ರ (Photograph): ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಬಣ್ಣದ ಫೋಟೋ (4.5cm \times 3.5cm)
* ಸಹಿ (Signature): ಬಿಳಿ ಹಾಳೆಯ ಮೇಲೆ ಕಪ್ಪು ಶಾಯಿಯ ಪೆನ್‌ನಲ್ಲಿ (Black Ink) ಸಹಿ ಮಾಡಿರಬೇಕು. (ಗಮನಿಸಿ: CAPITAL LETTERS ನಲ್ಲಿ ಸಹಿ ಮಾಡಿದ್ದರೆ ಅದನ್ನು ತಿರಸ್ಕರಿಸಲಾಗುತ್ತದೆ)
* ಎಡಗೈ ಹೆಬ್ಬೆರಳಿನ ಗುರುತು (Left Thumb Impression): ಬಿಳಿ ಹಾಳೆಯ ಮೇಲೆ ಕಪ್ಪು ಅಥವಾ ನೀಲಿ ಶಾಯಿಯಲ್ಲಿ ಒತ್ತಿರಬೇಕು.
* ಕೈಬರಹದ ಘೋಷಣೆ (Handwritten Declaration): ಬಿಳಿ ಹಾಳೆಯ ಮೇಲೆ ಕಪ್ಪು ಶಾಯಿಯಲ್ಲಿ ಅಭ್ಯರ್ಥಿಯೇ ಸ್ವತಃ ಇಂಗ್ಲಿಷ್‌ನಲ್ಲಿ ಬರೆದಿರಬೇಕು.
* ಇತರೆ ದಾಖಲೆಗಳು: ಪದವಿ ಮತ್ತು ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳು ಹಾಗೂ ಜಾತಿ ಪ್ರಮಾಣಪತ್ರ (PDF ಮಾದರಿಯಲ್ಲಿ)
🧾 ಆನ್‌ಲೈನ್ ಅರ್ಜಿ ಸಲ್ಲಿಸುವ ಹಂತಗಳು (Step-by-Step Process):
1.ನೋಂದಣಿ (Registration): ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, "APPLY ONLINE" ಲಿಂಕ್ ಕ್ಲಿಕ್ ಮಾಡಿ. ನಂತರ "Click here for New Registration" ಆಯ್ಕೆ ಮಾಡಿ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನೀಡಿ ನೋಂದಾಯಿಸಿ.
2. ಐಡಿ ಮತ್ತು ಪಾಸ್‌ವರ್ಡ್: ನೋಂದಣಿ ಆದ ತಕ್ಷಣ 'Provisional Registration Number' ಮತ್ತು 'Password' ನಿಮ್ಮ ಸ್ಕ್ರೀನ್ ಮೇಲೆ ಬರುತ್ತದೆ ಹಾಗೂ ಇಮೇಲ್/ಎಸ್‌ಎಂಎಸ್ ಮೂಲಕವೂ ಬರುತ್ತದೆ
3. ಮಾಹಿತಿ ಭರ್ತಿ: ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ. ಪ್ರತಿ ಹಂತದಲ್ಲೂ "SAVE AND NEXT" ಕ್ಲಿಕ್ ಮಾಡುವ ಮೂಲಕ ಮಾಹಿತಿಯನ್ನು ಸೇವ್ ಮಾಡಿಕೊಳ್ಳಿ.
4. ಅಪ್‌ಲೋಡ್: ಸ್ಕ್ಯಾನ್ ಮಾಡಿದ ಫೋಟೋ, ಸಹಿ, ಹೆಬ್ಬೆರಳಿನ ಗುರುತು ಮತ್ತು ಕೈಬರಹದ ಘೋಷಣೆಯನ್ನು ನಿಗದಿತ ಜಾಗದಲ್ಲಿ ಅಪ್‌ಲೋಡ್ ಮಾಡಿ.
5.ಪರಿಶೀಲನೆ (Preview): 'Payment' ಮಾಡುವ ಮೊದಲು 'Preview' ಟ್ಯಾಬ್ ಕ್ಲಿಕ್ ಮಾಡಿ ನೀವು ನೀಡಿರುವ ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಒಮ್ಮೆ ಸಬ್ಮಿಟ್ ಮಾಡಿದರೆ ಬದಲಾವಣೆ ಸಾಧ್ಯವಿಲ್ಲ
6. ಶುಲ್ಕ ಪಾವತಿ (Payment): ಅರ್ಜಿ ಶುಲ್ಕವನ್ನು ಆನ್‌ಲೈನ್ (ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಇತ್ಯಾದಿ) ಮೂಲಕ ಪಾವತಿಸಿ 'Submit' ಮಾಡಿ.
7. ಪ್ರಿಂಟ್: ಪ್ರಕ್ರಿಯೆ ಮುಗಿದ ನಂತರ ಇ-ರಶೀದಿ (e-Receipt) ಮತ್ತು ಭರ್ತಿ ಮಾಡಿದ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.
📅 ಪ್ರಮುಖ ದಿನಾಂಕಗಳು : ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕಗಳು ಬೇರೆ ಬೇರೆಯಾಗಿವೆ, ಗಮನಿಸಿ:
ಮ್ಯಾನೇಜ್‌ಮೆಂಟ್ ಟ್ರೈನಿ (MT):
ಅರ್ಜಿ ಸಲ್ಲಿಕೆ ಆರಂಭ: 17 ಜನವರಿ 2026
ಕೊನೆಯ ದಿನಾಂಕ: 01 ಫೆಬ್ರವರಿ 2026
ಡೆಪ್ಯೂಟಿ ಮ್ಯಾನೇಜರ್ (DM):
ಅರ್ಜಿ ಸಲ್ಲಿಕೆ ಆರಂಭ: 26 ಜನವರಿ 2026
ಕೊನೆಯ ದಿನಾಂಕ: 15 ಫೆಬ್ರವರಿ 2026
Job Overview
- End Date
- 15 ಫೆಬ್ರುವರಿ 2026
- Employment Type
- FULL_TIME
- Organization
- KPSC Vaani (Website)
- Location
- KA,
Apply online Exim Bank Recruitment 2026
To Buy: ನಿಮ್ಮ ಸ್ಪರ್ಧಾತ್ಮಕ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಖರೀದಿಸಿ
Related Tags:
Degree
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.