ಕೇಂದ್ರ ಸರ್ಕಾರದ ಕರೆನ್ಸಿ ನೋಟ್ ಪ್ರೆಸ್ನಲ್ಲಿ ಭರ್ಜರಿ ಉದ್ಯೋಗಾವಕಾಶ: ಒಟ್ಟು 534 ಹುದ್ದೆಗಳು ಖಾಲಿ, ಇಂದೇ ಅರ್ಜಿ ಸಲ್ಲಿಸಿ
Published by: Yallamma G | Date:8 ಎಪ್ರಿಲ್ 2026

ನಮಸ್ಕಾರ ಸ್ನೇಹಿತರೆ, KPSCVaani ಗೆ ಸ್ವಾಗತ. ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದೀಗ ಬೃಹತ್ ಸಿಹಿಸುದ್ದಿ. ಭಾರತೀಯ ಕರೆನ್ಸಿ ನೋಟುಗಳು ಮತ್ತು ಭದ್ರತಾ ಮುದ್ರಣಗಳನ್ನು ತಯಾರಿಸುವ ಪ್ರತಿಷ್ಠಿತ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ 500 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ (Advt. No. CNPN/HR/Rect/01/2026) ಪ್ರಕಟವಾಗಿದೆ.
ಕರೆನ್ಸಿ ನೋಟ್ ಪ್ರೆಸ್, ನಾಸಿಕ್ (CNPN) ಇದು 'ಸೆಕ್ಯುರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್' (SPMCIL) ನ ಅಡಿಯಲ್ಲಿ ಬರುವ ಒಂದು ಪ್ರಮುಖ ಘಟಕವಾಗಿದೆ. ಇದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಲ್ಲಿದೆ. ಈ ಸಂಸ್ಥೆಯು ಮಿನಿರತ್ನ (ವರ್ಗ-1) ಸ್ಥಾನಮಾನವನ್ನು ಹೊಂದಿದ್ದು, ಸಂಪೂರ್ಣವಾಗಿ ಭಾರತ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ.
ಕರೆನ್ಸಿ ನೋಟ್ ಪ್ರೆಸ್, ನಾಸಿಕ್ (CNPN) ನೇಮಕಾತಿಯಡಿಯಲ್ಲಿ ಖಾಲಿ ಇರುವ ಒಟ್ಟು 534 ವೆಲ್ಫೇರ್ ಆಫೀಸರ್, ಸೇಫ್ಟಿ ಆಫೀಸರ್, ಟೆಕ್ನಿಕಲ್ ಕಂಟ್ರೋಲ್, ಪ್ರಿಂಟಿಂಗ್, ಇಟ್, ಸಿ (AC), ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಇಂಕ್ ಫ್ಯಾಕ್ಟರಿ, ಸಿವಿಲ್, ಇನ್ಸ್ಟ್ರುಮೆಂಟೇಶನ್ ಮತ್ತು ಅಧಿಕೃತ ಭಾಷಾ (Official Language) ಮತ್ತು ಸೆಕ್ರೆಟರಿಯಲ್ ಅಸಿಸ್ಟೆಂಟ್ ಸೇರಿದಂತ್ತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 19.05.2026.
ಈ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ನಾಸಿಕ್ನ ಕರೆನ್ಸಿ ನೋಟ್ ಪ್ರೆಸ್ (CNPN) ಕೇಂದ್ರೀಕೃತವಾಗಿ ನಡೆಸುತ್ತಿದ್ದು, ಕೆಳಕಂಡ 4 ಪ್ರಮುಖ ಘಟಕಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ:
ಇದನ್ನು ಓದಿ : ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ 'ಸೂಪರ್ವೈಸರ್' ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಪೂರ್ಣ ವಿವರ ಇಲ್ಲಿದೆ
ಹುದ್ದೆಗಳ ವಿವರಣೆ (Vacancy Breakdown)
ಒಟ್ಟು 534 ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಮುಖ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:
ಶೈಕ್ಷಣಿಕ ಅರ್ಹತೆ : ಕರೆನ್ಸಿ ನೋಟ್ ಪ್ರೆಸ್ ನಾಸಿಕ್ ಅಧಿಕೃತ ಅಧಿಸೂಚನೆಯ ಪ್ರಕಾರ
ವಯೋಮಿತಿ ಅರ್ಹತೆ (Age Limit)
ಅಭ್ಯರ್ಥಿಗಳಿಗೆ ಹುದ್ದೆಯ ಮಟ್ಟಕ್ಕೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದೆ:
ಅರ್ಜಿ ಸಲ್ಲಿಸುವ ವಿಧಾನ (How to Apply)
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
ಪ್ರಮುಖ ದಿನಾಂಕಗಳು (Important Dates)
ಅಭ್ಯರ್ಥಿಗಳು ಈ ಕೆಳಗಿನ ಪ್ರಮುಖ ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:
ಹೆಚ್ಚಿನ ಸರ್ಕಾರಿ ಉದ್ಯೋಗದ ಮಾಹಿತಿಗಾಗಿ ನಿರಂತರವಾಗಿ KPSCVaani ವೆಬ್ಸೈಟ್ ಅನ್ನು ಭೇಟಿ ಮಾಡುತ್ತಿರಿ. ನಿಮ್ಮ ಸ್ನೇಹಿತರಿಗೂ ಈ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ!

1. ಕರೆನ್ಸಿ ನೋಟ್ ಪ್ರೆಸ್, ನಾಸಿಕ್ (CNPN): ಭಾರತ ಸರ್ಕಾರದ ಉತ್ತಮ ಗುಣಮಟ್ಟದ ಬ್ಯಾಂಕ್ ನೋಟುಗಳು ಮತ್ತು ಕರೆನ್ಸಿ ನೋಟುಗಳ ಉತ್ಪಾದನೆ.
2. ಇಂಡಿಯಾ ಸೆಕ್ಯುರಿಟಿ ಪ್ರೆಸ್, ನಾಸಿಕ್ (ISPN): ಪಾಸ್ಪೋರ್ಟ್, ವೀಸಾ ಸ್ಟಿಕ್ಕರ್ಗಳು, ಅಂಚೆ ಚೀಟಿಗಳು, ನ್ಯಾಯಾಂಗ ಮತ್ತು ನ್ಯಾಯಾಂಗೇತರ ಸ್ಟ್ಯಾಂಪ್ ಪೇಪರ್ಗಳ ಮುದ್ರಣ.
3. ಬ್ಯಾಂಕ್ ನೋಟ್ ಪ್ರೆಸ್, ದೇವಾಸ್ (BNPD): ಭಾರತ ಸರ್ಕಾರದ ಬ್ಯಾಂಕ್ ನೋಟುಗಳ ಮುದ್ರಣ.
4. ಸೆಕ್ಯುರಿಟಿ ಪ್ರಿಂಟಿಂಗ್ ಪ್ರೆಸ್, ಹೈದರಾಬಾದ್ (SPPH): ಪೋಸ್ಟಲ್ ಸ್ಟೇಷನರಿ, ಅಂಚೆ ಚೀಟಿಗಳು, ಕೋರ್ಟ್ ಶುಲ್ಕದ ಸ್ಟ್ಯಾಂಪ್ಗಳು ಇತ್ಯಾದಿಗಳ ಮುದ್ರಣ.
ಇದನ್ನು ಓದಿ : ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ 'ಸೂಪರ್ವೈಸರ್' ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಪೂರ್ಣ ವಿವರ ಇಲ್ಲಿದೆ
ಹುದ್ದೆಗಳ ವಿವರಣೆ (Vacancy Breakdown)
ಒಟ್ಟು 534 ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಮುಖ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:
- ಅಧಿಕಾರಿ ಹುದ್ದೆಗಳು (Officers): ವೆಲ್ಫೇರ್ ಆಫೀಸರ್ (2 ಹುದ್ದೆಗಳು), ಸೇಫ್ಟಿ ಆಫೀಸರ್ (1 ಹುದ್ದೆ).
- ಸೂಪರ್ವೈಸರ್ ಹುದ್ದೆಗಳು (Supervisors): ಟೆಕ್ನಿಕಲ್ ಕಂಟ್ರೋಲ್, ಪ್ರಿಂಟಿಂಗ್, IT, ಮೆಕ್ಯಾನಿಕಲ್, ಎಸಿ (AC), ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಇಂಕ್ ಫ್ಯಾಕ್ಟರಿ, ಸಿವಿಲ್, ಇನ್ಸ್ಟ್ರುಮೆಂಟೇಶನ್ ಮತ್ತು ಅಧಿಕೃತ ಭಾಷಾ (Official Language) ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ.
- ಅಸಿಸ್ಟೆಂಟ್ ಹುದ್ದೆಗಳು (Assistants): ಸೆಕ್ರೆಟರಿಯಲ್ ಅಸಿಸ್ಟೆಂಟ್ (2 ಹುದ್ದೆಗಳು), ಜೂನಿಯರ್ ಆಫೀಸ್ ಅಸಿಸ್ಟೆಂಟ್ (18 ಹುದ್ದೆಗಳು) ಮತ್ತು ಆರ್ಟಿಸ್ಟ್ ಗ್ರಾಫಿಕ್ ಡಿಸೈನ್ (1 ಹುದ್ದೆ).
- ಜೂನಿಯರ್ ಟೆಕ್ನಿಷಿಯನ್ (Junior Technicians): ಪ್ರಿಂಟಿಂಗ್, ಕಂಟ್ರೋಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮಶಿನಿಸ್ಟ್, ಫಿಟ್ಟರ್, ಸ್ಟೋರ್, ಏರ್ ಕಂಡೀಷನಿಂಗ್ (AC), ಮತ್ತು ಇಂಕ್ ಫ್ಯಾಕ್ಟರಿ ಟ್ರೇಡ್ಗಳಲ್ಲಿ ಅತಿ ಹೆಚ್ಚು ಹುದ್ದೆಗಳು ಖಾಲಿ ಇವೆ.
ಶೈಕ್ಷಣಿಕ ಅರ್ಹತೆ : ಕರೆನ್ಸಿ ನೋಟ್ ಪ್ರೆಸ್ ನಾಸಿಕ್ ಅಧಿಕೃತ ಅಧಿಸೂಚನೆಯ ಪ್ರಕಾರ
ವಯೋಮಿತಿ ಅರ್ಹತೆ (Age Limit)
ಅಭ್ಯರ್ಥಿಗಳಿಗೆ ಹುದ್ದೆಯ ಮಟ್ಟಕ್ಕೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದೆ:
- ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳಿಗೆ: 18 ರಿಂದ 25 ವರ್ಷಗಳು.
- ಅಸಿಸ್ಟೆಂಟ್ ಹುದ್ದೆಗಳಿಗೆ (ಸೆಕ್ರೆಟರಿಯಲ್/ಜೂನಿಯರ್ ಆಫೀಸ್/ಆರ್ಟಿಸ್ಟ್): 18 ರಿಂದ 28 ವರ್ಷಗಳು.
- ಸೂಪರ್ವೈಸರ್ ಮತ್ತು ಅಧಿಕಾರಿ ಹುದ್ದೆಗಳಿಗೆ: 18 ರಿಂದ 30 ವರ್ಷಗಳು.
ಅರ್ಜಿ ಸಲ್ಲಿಸುವ ವಿಧಾನ (How to Apply)
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕಂಪನಿಯ ಅಧಿಕೃತ ವೆಬ್ಸೈಟ್ https://cnpnashik.spmcil.com ಗೆ ಭೇಟಿ ನೀಡಿ "Careers" ಪೇಜ್ ಮೂಲಕ ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
- ಅರ್ಜಿ ಸಲ್ಲಿಸಲು ಬೇರೆ ಯಾವುದೇ ವಿಧಾನವನ್ನು (ಆಫ್ಲೈನ್/ಅಂಚೆ) ಸ್ವೀಕರಿಸಲಾಗುವುದಿಲ್ಲ.
- ಶೈಕ್ಷಣಿಕ ಅರ್ಹತೆ, ಮೀಸಲಾತಿ, ವಯೋಮಿತಿ ಸಡಿಲಿಕೆ, ಪರೀಕ್ಷಾ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆಯ (Selection Process) ಸಂಪೂರ್ಣ ಮಾಹಿತಿಗಾಗಿ ಏಪ್ರಿಲ್ 20, 2026 ರಂದು ವೆಬ್ಸೈಟ್ನಲ್ಲಿ ಲಭ್ಯವಾಗುವ ಪೂರ್ಣ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಿಕೊಳ್ಳಬೇಕು.
- ಯಾವುದೇ ತಿದ್ದುಪಡಿ (Corrigendum), ಪರೀಕ್ಷಾ ದಿನಾಂಕ ಮತ್ತು ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಲು ಅಭ್ಯರ್ಥಿಗಳು ನಿರಂತರವಾಗಿ ವೆಬ್ಸೈಟ್ ಅನ್ನು ಪರಿಶೀಲಿಸುತ್ತಿರಬೇಕು.
- ಆನ್ಲೈನ್ ನೋಂದಣಿಯ ಕೊನೆಯ ದಿನಾಂಕದ ಮೊದಲು ಅಭ್ಯರ್ಥಿಗಳು ತಮಗೆ ಸಂಬಂಧಿಸಿದ ಹುದ್ದೆಯ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂಬುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಬೇಕು.
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
ಪ್ರಮುಖ ದಿನಾಂಕಗಳು (Important Dates)
ಅಭ್ಯರ್ಥಿಗಳು ಈ ಕೆಳಗಿನ ಪ್ರಮುಖ ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:
- ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 20.04.2026.
- ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 19.05.2026.
- ಅರ್ಜಿ ಶುಲ್ಕ ಪಾವತಿಸಲು ಅವಕಾಶ: 20.04.2026 ರಿಂದ 19.05.2026 ರವರೆಗೆ.
ಹೆಚ್ಚಿನ ಸರ್ಕಾರಿ ಉದ್ಯೋಗದ ಮಾಹಿತಿಗಾಗಿ ನಿರಂತರವಾಗಿ KPSCVaani ವೆಬ್ಸೈಟ್ ಅನ್ನು ಭೇಟಿ ಮಾಡುತ್ತಿರಿ. ನಿಮ್ಮ ಸ್ನೇಹಿತರಿಗೂ ಈ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ!
Application End Date: 19 ಮೇ 2026

Comments