Loading..!

ಕೇಂದ್ರ ಸರ್ಕಾರಿ ಸಂಸ್ಥೆಯಾದ ಸಿ-ಡಾಕ್‌ ಬೆಂಗಳೂರಿನಲ್ಲಿ 805 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ; ಪರೀಕ್ಷೆ ಇಲ್ಲದೆ ನೇರ ಸಂದರ್ಶನ
Tags: B.Tech B.E
Published by: Heena Sheregar | Date:6 ಫೆಬ್ರುವರಿ 2026
not found

ಬೆಂಗಳೂರಿನ ಪ್ರತಿಷ್ಠಿತ ಕೇಂದ್ರ ಸರ್ಕಾರಿ ಸಂಸ್ಥೆಯಾದ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ (C-DAC) ನಲ್ಲಿ ಉದ್ಯೋಗ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಸುವರ್ಣಾವಕಾಶ ದೊರೆತಿದೆ. 2026ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ದೇಶದ ವಿವಿಧ ಕೇಂದ್ರಗಳಲ್ಲಿ ಒಟ್ಟು 805 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಪೈಕಿ ಬೆಂಗಳೂರು ಕೇಂದ್ರದಲ್ಲೇ 93 ಹುದ್ದೆಗಳು ಲಭ್ಯವಿವೆ, ಇದು ಕರ್ನಾಟಕದ ಅಭ್ಯರ್ಥಿಗಳಿಗೆ ವಿಶೇಷ ಅವಕಾಶವಾಗಿದೆ.

ಈ ನೇಮಕಾತಿಯಲ್ಲಿ ಪ್ರಾಜೆಕ್ಟ್ ಎಂಜಿನಿಯರ್, ಮ್ಯಾನೇಜರ್ ಹಾಗೂ ಸಪೋರ್ಟ್ ಸ್ಟಾಫ್ ಸೇರಿದಂತೆ ವಿವಿಧ ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಐಟಿ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಡೇಟಾ ಸೈನ್ಸ್, ಸೈಬರ್ ಸೆಕ್ಯುರಿಟಿ ಸೇರಿದಂತೆ ವಿವಿಧ ವಿಭಾಗಗಳ ಪದವೀಧರರಿಗೆ ಇಲ್ಲಿ ಉತ್ತಮ ವೃತ್ತಿ ಅವಕಾಶ ಲಭ್ಯವಾಗಲಿದೆ.

ಈ ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರಿತವಾಗಿದ್ದು (Contractual), ಆಯ್ಕೆಯಾದ ಅಭ್ಯರ್ಥಿಗಳನ್ನು ಆರಂಭದಲ್ಲಿ 3 ವರ್ಷಗಳ ಅವಧಿಗೆ ಅಥವಾ ಯೋಜನೆಯು ಮುಕ್ತಾಯಗೊಳ್ಳುವವರೆಗೆ ನಿಯೋಜಿಸಲಾಗುವುದು. ಅಭ್ಯರ್ಥಿಯ ಕಾರ್ಯಕ್ಷಮತೆ ಮತ್ತು ಸಂಸ್ಥೆಯ ಅಗತ್ಯಕ್ಕೆ ಅನುಗುಣವಾಗಿ ಈ ಅವಧಿಯನ್ನು ಮುಂದಕ್ಕೆ ವಿಸ್ತರಿಸುವ ಅವಕಾಶವಿರುತ್ತದೆ.

ಈ ಹುದ್ದೆಗಳ ಅರ್ಹತೆ, ವಯೋಮಿತಿ, ವೇತನ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ. 


C-DAC ನೇಮಕಾತಿ  ಅಧಿಸೂಚನೆಯ ವಿವರ : 

ಸಂಸ್ಥೆಯ ಹೆಸರು : ಸಿ-ಡಾಕ್ (C-DAC)
ಒಟ್ಟು ಹುದ್ದೆಗಳು : 805 
ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳು: 93 (ಬೆಂಗಳೂರಿನಲ್ಲಿ)
ಹುದ್ದೆಯ ಹೆಸರು : ಪ್ರಾಜೆಕ್ಟ್ ಎಂಜಿನಿಯರ್, ಸೀನಿಯರ್ ಎಂಜಿನಿಯರ್, ಪ್ರಾಜೆಕ್ಟ್ ಮ್ಯಾನೇಜರ್, ಸಪೋರ್ಟ್ ಸ್ಟಾಫ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 20, 2026
ಹುದ್ದೆಯ ವಿವರಗಳು (ಬೆಂಗಳೂರು ಕೇಂದ್ರ):
ಪ್ರಾಜೆಕ್ಟ್ ಎಂಜಿನಿಯರ್ - 50
ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್ - 25
ಪ್ರಾಜೆಕ್ಟ್ ಮ್ಯಾನೇಜರ್ - 05
ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್ - 13

🎓ಶೈಕ್ಷಣಿಕ ಅರ್ಹತೆ (Educational Qualification) : 

ತಾಂತ್ರಿಕ ಹುದ್ದೆಗಳು: BE/B.Tech , ME/M.Tech, MCA ಅಥವಾ ಸಂಬಂಧಿತ ವಿಷಯದಲ್ಲಿ PhD ಪದವಿಯನ್ನು ಕನಿಷ್ಠ 60% ಅಂಕಗಳೊಂದಿಗೆ ಹೊಂದಿರಬೇಕು.
ಸಪೋರ್ಟ್ ಸ್ಟಾಫ್: ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ (Finance/HR/Operations) ಹೊಂದಿರಬೇಕು.
ಅನುಭವ: ಹುದ್ದೆಗಳಿಗೆ ಅನುಗುಣವಾಗಿ 0 ರಿಂದ 15 ವರ್ಷಗಳವರೆಗೆ ಅನುಭವದ ಅಗತ್ಯವಿರುತ್ತದೆ (ಫ್ರೆಶರ್ಸ್‌ ಕೂಡ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು).
ವಯೋಮಿತಿ (01.01.2026 ಕ್ಕೆ ಅನ್ವಯ):
ಪ್ರಾಜೆಕ್ಟ್ ಎಂಜಿನಿಯರ್ - 30 - 45 ವರ್ಷ
ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್ - 40 ವರ್ಷ
ಪ್ರಾಜೆಕ್ಟ್ ಮ್ಯಾನೇಜರ್ - 56 ವರ್ಷ
ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್ - 35 ವರ್ಷ

💰ವೇತನ ಶ್ರೇಣಿ (Salary Details) : 
ಪ್ರಾಜೆಕ್ಟ್ ಎಂಜಿನಿಯರ್: ₹4.49 LPA ನಿಂದ ₹7.11 LPA
ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್: : ₹8.49 LPA ನಿಂದ ₹14 LPA
ಪ್ರಾಜೆಕ್ಟ್ ಮ್ಯಾನೇಜರ್: ₹12.63 LPA ನಿಂದ ₹22.9 LPA
ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್: ಆರಂಭಿಕ ₹3 LPA

📝 ಆಯ್ಕೆ ವಿಧಾನ (Selection Process)

1. ಸ್ಕ್ರೀನಿಂಗ್ (Screening): ಶೈಕ್ಷಣಿಕ ಅಂಕಗಳು ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡುವುದು.
2. ಸಂದರ್ಶನ (Personal Interview): ಬೆಂಗಳೂರು ಸಿ-ಡಾಕ್ ಕೇಂದ್ರದಲ್ಲಿ ಅಥವಾ ಆನ್‌ಲೈನ್ ಮೂಲಕ ಸಂದರ್ಶನ ನಡೆಯುತ್ತದೆ.
3. ದಾಖಲೆ ಪರಿಶೀಲನೆ: ಮೂಲ ದಾಖಲೆಗಳ ಪರಿಶೀಲನೆಯ ನಂತರ ಅಂತಿಮ ಆಯ್ಕೆ.

💻 ಆನ್‌ಲೈನ್ ಅರ್ಜಿ ಸಲ್ಲಿಸುವ ಹಂತಗಳು :

ಅಭ್ಯರ್ಥಿಗಳು ಕೇವಲ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಯಾವುದೇ ಆಫ್‌ಲೈನ್ ಅಥವಾ ಹಾರ್ಡ್ ಕಾಪಿಗಳನ್ನು ನೇರವಾಗಿ ಸ್ವೀಕರಿಸಲಾಗುವುದಿಲ್ಲ
1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ಸಿ-ಡಾಕ್‌ನ ಅಧಿಕೃತ ವೆಬ್‌ಸೈಟ್ www.cdac.in ಗೆ ಹೋಗಿ 'Careers' ಪುಟವನ್ನು ತೆರೆಯಿರಿ.
2. ಹುದ್ದೆಯ ಆಯ್ಕೆ: Current Job Opportunities ಅಲ್ಲಿ ಪ್ರಕಟಿಸಲಾದ ವಿವಿಧ ಹುದ್ದೆಗಳ ಪಟ್ಟಿಯಲ್ಲಿ ನೀವು ಅರ್ಜಿ ಸಲ್ಲಿಸಲು ಇಚ್ಛಿಸುವ ಹುದ್ದೆಯ ಎದುರಿಗಿರುವ 'Apply' ಬಟನ್ ಮೇಲೆ ಕ್ಲಿಕ್ ಮಾಡಿ.
3. ಮೊಬೈಲ್ ಸಂಖ್ಯೆ ಪರಿಶೀಲನೆ: ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಿ. ಆ ಸಂಖ್ಯೆಗೆ ಬರುವ OTP (One Time Password) ಅನ್ನು ನಮೂದಿಸುವ ಮೂಲಕ ಲಾಗಿನ್ ಆಗಿ.
4. ಅರ್ಜಿ ಭರ್ತಿ: ಒಮ್ಮೆ ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆಯುತ್ತದೆ. (ಒಂದು ವೇಳೆ ನೀವು ಹಿಂದಿನ ಅಧಿಸೂಚನೆಗಳಲ್ಲಿ ಅರ್ಜಿ ಸಲ್ಲಿಸಿದ್ದರೆ, ನಿಮ್ಮ ಹಳೆಯ ವಿವರಗಳು ಅಲ್ಲಿ ಲಭ್ಯವಿರುತ್ತವೆ, ನೀವು ಅಗತ್ಯವಿದ್ದರೆ ಅವುಗಳನ್ನು ಎಡಿಟ್ ಮಾಡಬಹುದು).
5. ಮಾಹಿತಿ ಸಲ್ಲಿಕೆ: ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಿ 'Submit' ಬಟನ್ ಕ್ಲಿಕ್ ಮಾಡಿ.
6. ಅಪ್ಲಿಕೇಶನ್ ಸಂಖ್ಯೆ: ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ನಂತರ ಸಿಸ್ಟಮ್‌ನಿಂದ ಒಂದು Unique Application Number ಜನರೇಟ್ ಆಗುತ್ತದೆ. ಇದನ್ನು ಭವಿಷ್ಯದ ಉಲ್ಲೇಖಕ್ಕಾಗಿ ಬರೆದಿಟ್ಟುಕೊಳ್ಳಿ ಅಥವಾ ಪ್ರಿಂಟ್ ತೆಗೆದುಕೊಳ್ಳಿ.

📅 ಪ್ರಮಖ ದಿನಾಂಕಗಳು : 

ಅರ್ಜಿ ಸಲ್ಲಿಕೆ ಆರಂಭ: ಫೆಬ್ರವರಿ 1, 2026 (ಬೆಳಿಗ್ಗೆ 6:00 ರಿಂದ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 20, 2026 (ರಾತ್ರಿ 11:55 ರವರೆಗೆ)
ಸಂದರ್ಶನ/ಪರೀಕ್ಷೆಯ ದಿನಾಂಕ: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಇಮೇಲ್ ಮೂಲಕ ತಿಳಿಸಲಾಗುವುದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ (400 KB ಒಳಗೆ).
ನವೀಕರಿಸಿದ ರೆಸ್ಯೂಮ್ (Resume) - PDF ರೂಪದಲ್ಲಿ (500 KB ಒಳಗೆ).
ಪದವಿ ಪ್ರಮಾಣಪತ್ರಗಳು ಮತ್ತು ಅಂಕಪಟ್ಟಿಗಳು.
ಅನುಭವದ ಪತ್ರಗಳು (ಅನ್ವಯವಾಗುವಲ್ಲಿ).

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು

- ಒಂದಕ್ಕಿಂತ ಹೆಚ್ಚು ಹುದ್ದೆಗಳು: ನೀವು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಹರಾಗಿದ್ದರೆ, ಪ್ರತಿ ಹುದ್ದೆಗೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
- ಸರ್ಕಾರಿ ನೌಕರರಿಗೆ: ಈಗಾಗಲೇ ಸರ್ಕಾರಿ/PSU ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ, ಅದರ ಪ್ರಿಂಟ್ಔಟ್ ಅನ್ನು ತಮ್ಮ ಇಲಾಖೆಯ ಮೂಲಕ (Proper Channel) ಬೆಂಗಳೂರು ಸಿ-ಡಾಕ್ ಕಚೇರಿಗೆ ಕಳುಹಿಸಬೇಕು ಅಥವಾ ಸಂದರ್ಶನದ ಸಮಯದಲ್ಲಿ NOC (No Objection Certificate) ಸಲ್ಲಿಸಬೇಕು.
- ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೆ ಚಾಲ್ತಿಯಲ್ಲಿರಬೇಕು, ಏಕೆಂದರೆ ಎಲ್ಲಾ ಸಂವಹನಗಳು ಇಮೇಲ್ ಮೂಲಕವೇ ನಡೆಯುತ್ತವೆ.
👉 ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿಕೊಳ್ಳಿ. ಇಂತಹ ಇನ್ನಷ್ಟು ಉದ್ಯೋಗ ಮಾಹಿತಿಗಾಗಿ ಪ್ರತಿದಿನ KPSCVaani.com ಫಾಲೋ ಮಾಡಿ.

Application End Date:  20 ಫೆಬ್ರುವರಿ 2026

Comments