Loading..!

ಬ್ಯಾಂಕ್ ಆಫ್ ಬರೋಡಾದಲ್ಲಿ ಬೃಹತ್ ನೇಮಕಾತಿ: 418 ಹುದ್ದೆಗಳಿಗೆ ಅರ್ಜಿ ಆಹ್ವಾನ! ಕೂಡಲೇ ಅರ್ಜಿ ಸಲ್ಲಿಸಿ
Published by: Heena Sheregar | Date:28 ಫೆಬ್ರುವರಿ 2026
not found

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ನಿರ್ಮಿಸಿಕೊಳ್ಳಲು ಬಯಸುವ ಐಟಿ ಪದವೀಧರರಿಗೆ ಬ್ಯಾಂಕ್ ಆಫ್ ಬರೋಡಾ (BOB) ಉತ್ತಮ ಅವಕಾಶ ನೀಡಿದೆ. 2026ನೇ ಸಾಲಿನಲ್ಲಿ ಐಟಿ ವೃತ್ತಿಪರರಿಗಾಗಿ ಬೃಹತ್ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.

ಈ ನೇಮಕಾತಿಯಡಿ ಒಟ್ಟು 418 ಐಟಿ ಸ್ಪೆಷಲಿಸ್ಟ್ ಹುದ್ದೆಗಳು ಭರ್ತಿಯಾಗಲಿವೆ. ಮ್ಯಾನೇಜರ್, ಆಫೀಸರ್ ಮತ್ತು ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಡಿಜಿಟಲ್ ಬ್ಯಾಂಕಿಂಗ್, ಸೈಬರ್ ಸೆಕ್ಯೂರಿಟಿ, ಡೇಟಾ ಅನಾಲಿಟಿಕ್ಸ್, ಸಾಫ್ಟ್‌ವೇರ್ ಅಭಿವೃದ್ಧಿ ಮುಂತಾದ ಐಟಿ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವವರಿಗೆ ಇದು ಉತ್ತಮ ಅವಕಾಶವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ಸಂಬಳ, ಉದ್ಯೋಗ ಭದ್ರತೆ ಹಾಗೂ ಬ್ಯಾಂಕ್ ಉದ್ಯೋಗಿಗಳಿಗೆ ಲಭ್ಯವಿರುವ ವಿವಿಧ ಸೌಲಭ್ಯಗಳು ದೊರೆಯಲಿವೆ. 

ಈ ಹುದ್ದೆಗಳ ಅರ್ಹತೆ, ವಯೋಮಿತಿ, ವೇತನ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ. 

ಬ್ಯಾಂಕ್ ಆಫ್ ಬರೋಡಾದ (Bank of Baroda) ವಿವಿಧ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು 19 ಫೆಬ್ರವರಿ 2026 ರಿಂದ 08.03.2026 ರ ರಾತ್ರಿ 23:59 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

📌ಬ್ಯಾಂಕ್ ಆಫ್ ಬರೋಡಾ (BOB)ಹುದ್ದೆಗಳ ಅಧಿಸೂಚನೆ 
ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ (BOB)
ಹುದ್ದೆಯ ಹೆಸರು: ಐಟಿ ಮ್ಯಾನೇಜರ್, ಆಫೀಸರ್ ಮತ್ತು ಸೀನಿಯರ್ ಮ್ಯಾನೇಜರ್
ಒಟ್ಟು ಹುದ್ದೆಗಳು: 418
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-03-2026

📚ಹುದ್ದೆಯ ವಿವರಗಳು : 
ಡೆವಲಪರ್ಸ್ (Java, MERN Stack, Mobile App) - 140+
ಇಂಜಿನಿಯರ್ಸ್ (AI, Cloud, Data, Finacle) - 110+
ಅಡ್ಮಿನಿಸ್ಟ್ರೇಟರ್ಸ್ (Network, Server, Database) - 120+
ಇತರ ತಾಂತ್ರಿಕ ಹುದ್ದೆಗಳು (Architect, ETL, Data Scientist) - 40+

🎓ಶೈಕ್ಷಣಿಕ ಅರ್ಹತೆ (Educational Qualification) : 
ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಕಡ್ಡಾಯವಾಗಿ B.E / B.Tech / M.E / M.Tech ಅಥವಾ MCA ಪದವಿಯನ್ನು (Computer Science / IT / Electronics & Communication ವಿಭಾಗದಲ್ಲಿ) ಹೊಂದಿರಬೇಕು.
ಸಂಬಂಧಿತ ತಾಂತ್ರಿಕ ಪ್ರಮಾಣಪತ್ರಗಳು (Certifications) ಇದ್ದಲ್ಲಿ ಆದ್ಯತೆ ನೀಡಲಾಗುವುದು.

🎂 ವಯೋಮಿತಿ(01.01.2026 ಕ್ಕೆ ಅನ್ವಯ):
ಆಫೀಸರ್ (Scale-I): 22 ರಿಂದ 32 ವರ್ಷ.
ಮ್ಯಾನೇಜರ್ (Scale-II): 24 ರಿಂದ 34 ವರ್ಷ.
ಸೀನಿಯರ್ ಮ್ಯಾನೇಜರ್ (Scale-III): 27 ರಿಂದ 37 ವರ್ಷ.(SC/ST ಗೆ 5 ವರ್ಷ, OBC ಗೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10-15 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ).

💼 ಅನುಭವದ ಅಗತ್ಯತೆ:
ಆಫೀಸರ್: ಕನಿಷ್ಠ 1 ವರ್ಷದ ಐಟಿ ಅನುಭವ.
ಮ್ಯಾನೇಜರ್: ಕನಿಷ್ಠ 3 ವರ್ಷಗಳ ಅನುಭವ.
ಸೀನಿಯರ್ ಮ್ಯಾನೇಜರ್: ಕನಿಷ್ಠ 5 ವರ್ಷಗಳ ಅನುಭವ (ಅದರಲ್ಲಿ 2 ವರ್ಷ ಸಂಬಂಧಿತ ಕ್ಷೇತ್ರದಲ್ಲಿರಬೇಕು).

💰 ವೇತನ ಶ್ರೇಣಿ (Salary Details) : ಬ್ಯಾಂಕ್ ನಿಯಮಗಳ ಪ್ರಕಾರ ಆಕರ್ಷಕ ವೇತನ ಶ್ರೇಣಿ ಇಲ್ಲಿದೆ:
Scale-I (Officer): ₹48,480 ರಿಂದ ₹85,920 ವರೆಗೆ.
Scale-II (Manager): ₹64,820 ರಿಂದ ₹93,960 ವರೆಗೆ.
Scale-III (Senior Manager): ₹85,920 ರಿಂದ ₹1,05,280 ವರೆಗೆ.(ಮೂಲ ವೇತನದ ಜೊತೆಗೆ ಡಿ.ಎ, ಹೆಚ್.ಆರ್.ಎ ಮತ್ತು ಇತರ ಬ್ಯಾಂಕಿಂಗ್ ಸೌಲಭ್ಯಗಳು ಲಭ್ಯವಿರುತ್ತವೆ).

💸ಅರ್ಜಿ ಶುಲ್ಕ : 
ಸಾಮಾನ್ಯ / OBC / EWS: ₹850/-
SC / ST / PWD / ಮಹಿಳೆಯರು: ₹175/-
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ ಮಾತ್ರ (ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/UPI ಮೂಲಕ ಶುಲ್ಕ ಪಾವತಿಸಬಹುದು).

📝 ಆಯ್ಕೆ ವಿಧಾನ (Selection Process)
1.ಆನ್‌ಲೈನ್ ಪರೀಕ್ಷೆ: ಒಟ್ಟು 150 ಪ್ರಶ್ನೆಗಳು (225 ಅಂಕಗಳು).
ಇದರಲ್ಲಿ ರೀಸನಿಂಗ್, ಇಂಗ್ಲಿಷ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಮತ್ತು ಪ್ರೊಫೆಷನಲ್ ನಾಲೆಡ್ಜ್ (ವಿಷಯ ಆಧಾರಿತ) ಪರೀಕ್ಷಿಸಲಾಗುತ್ತದೆ.
2. ಪರ್ಸನಲ್ ಇಂಟರ್ವ್ಯೂ: ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸಂದರ್ಶನಕ್ಕೆ ಕರೆಯಲಾಗುವುದು.
3. ದಾಖಲೆ ಪರಿಶೀಲನೆ: ಅಂತಿಮ ಹಂತದಲ್ಲಿ ಮೂಲ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

💻 ಆನ್‌ಲೈನ್ ಅರ್ಜಿ ಸಲ್ಲಿಸುವ ಹಂತಗಳು :
ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲಿಗೆ ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್: www.bankofbaroda.bank.in ಗೆ ಭೇಟಿ ನೀಡಿ.
ಮುಖಪುಟದಲ್ಲಿರುವ 'Careers' (ವೃತ್ತಿ) ವಿಭಾಗದ ಮೇಲೆ ಕ್ಲಿಕ್ ಮಾಡಿ. ನಂತರ 'Current Opportunities' (ಪ್ರಸ್ತುತ ಅವಕಾಶಗಳು) ಲಿಂಕ್ ಅನ್ನು ಆರಿಸಿ.
ಹಂತ 2: ಅಧಿಸೂಚನೆ ಮತ್ತು ನೋಂದಣಿ:"Recruitment of professionals on Regular Basis for Information Technology Department" (Advt. No. BOB/HRM/REC/ADVT/2026/04) ಎಂಬ ಅಧಿಸೂಚನೆಯನ್ನು ಹುಡುಕಿ. ಅಲ್ಲಿರುವ 'Apply Online' ಬಟನ್ ಮೇಲೆ ಕ್ಲಿಕ್ ಮಾಡಿ. ಹೊಸ ಬಳಕೆದಾರರಾಗಿದ್ದರೆ (New Registration), ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನೀಡಿ ನೋಂದಾಯಿಸಿಕೊಳ್ಳಿ.
ಹಂತ 3: ಮಾಹಿತಿ ಭರ್ತಿ ಮತ್ತು ದಾಖಲೆ ಅಪ್‌ಲೋಡ್:ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ:
- ಅಪ್‌ಡೇಟ್ ಆದ ರೆಸ್ಯೂಮ್ (Resume).
- ವಯಸ್ಸಿನ ಪುರಾವೆ (SSLC ಅಂಕಪಟ್ಟಿ ಅಥವಾ ಜನ್ಮ ಪ್ರಮಾಣಪತ್ರ).
- ಶೈಕ್ಷಣಿಕ ದಾಖಲೆಗಳು (ಬಿ.ಇ/ಬಿ.ಟೆಕ್/ಎಂಸಿಎ ಅಂಕಪಟ್ಟಿಗಳು).
- ಅನುಭವದ ಪ್ರಮಾಣಪತ್ರಗಳು (Experience Certificates).
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಹಿ.
ಹಂತ 4: ಅರ್ಜಿ ಶುಲ್ಕ ಪಾವತಿ :ಪಾವತಿಗಾಗಿ ನೀವು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ UPI (GPay/PhonePe) ಬಳಸಬಹುದು.
ಹಂತ 5: ಅಂತಿಮ ಸಲ್ಲಿಕೆ (Final Submission):ಎಲ್ಲಾ ವಿವರಗಳನ್ನು ಒಮ್ಮೆ ಮರುಪರಿಶೀಲಿಸಿ (Preview) ಅಂತಿಮವಾಗಿ 'Submit' ಬಟನ್ ಒತ್ತಿ.
ಸಲ್ಲಿಕೆಯಾದ ಅರ್ಜಿಯ ಪ್ರತಿಯನ್ನು (Application Printout) ಭವಿಷ್ಯದ ಉಲ್ಲೇಖಕ್ಕಾಗಿ ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.

📅 ಪ್ರಮಖ ದಿನಾಂಕಗಳು : 
ಅರ್ಜಿ ಸಲ್ಲಿಕೆ ಆರಂಭ: 30 ಜನವರಿ 2026

ಅರ್ಜಿ ಸಲ್ಲಿಸಲು ಕೊನೆಯ ದಿನ: 08 ಮಾರ್ಚ್ 2026


👉 ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿಕೊಳ್ಳಿ. ಇಂತಹ ಇನ್ನಷ್ಟು ಉದ್ಯೋಗ ಮಾಹಿತಿಗಾಗಿ ಪ್ರತಿದಿನ KPSCVaani.com ಫಾಲೋ ಮಾಡಿ.

Application End Date:  8 ಮಾರ್ಚ್ 2026
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To download official notification
To download Date Extended official notification
Related Tags: Engineering M.Tech

Comments