BMCRI Recruitment 2026: ಬೆಂಗಳೂರಿನಲ್ಲಿ ನರ್ಸಿಂಗ್ ಮುಗಿಸಿದವರಿಗೆ ಸುವರ್ಣಾವಕಾಶ; ವಾಣಿ ವಿಲಾಸ ಆಸ್ಪತ್ರೆಯಲ್ಲಿ ಭರ್ಜರಿ ನೇಮಕಾತಿ!
Published by: Heena Sheregar | Date:7 ಜುಲೈ 2026

ವೈದ್ಯಕೀಯ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ನರ್ಸಿಂಗ್ ಅಭ್ಯರ್ಥಿಗಳಿಗೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯು (BMCRI) ಭರ್ಜರಿ ಸುವರ್ಣಾವಕಾಶವನ್ನು ತಂದಿದೆ. ತನ್ನ ಅಧೀನದಲ್ಲಿರುವ ಪ್ರಸಿದ್ಧ ವಾಣಿ ವಿಲಾಸ ಆಸ್ಪತ್ರೆಗೆ ಗುತ್ತಿಗೆ ಆಧಾರದ ಮೇಲೆ ಶುಶೂಷಾಧಿಕಾರಿಗಳ (Staff Nurse) ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಇದು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಉತ್ತಮ ವೇದಿಕೆಯಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಬಿಎಸ್ಸಿ ನರ್ಸಿಂಗ್ (B.Sc Nursing) ಅಥವಾ ಜಿಎನ್ಎಂ (GNM) ಪದವಿ ಪಡೆದಿರಬೇಕು ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಣಿಯಾಗಿರಬೇಕು. ಸರ್ಕಾರಿ ನಿಯಮಾವಳಿಗಳ ಪ್ರಕಾರ ನಿಗದಿತ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ನಿಗದಿತ ಅರ್ಜಿ ನಮೂನೆ, ಅಗತ್ಯ ದಾಖಲೆಗಳ ಪರಿಶೀಲನೆ, ಪ್ರಮುಖ ದಿನಾಂಕಗಳು ಮತ್ತು ಸಂದರ್ಶನದ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳಲು ಹಾಗೂ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಲು ಇಂದೇ KPSCVAANI.COM ಜಾಲತಾಣಕ್ಕೆ ಭೇಟಿ ನೀಡಿ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಿ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಪ್ರಮುಖ ಮಾಹಿತಿ ಮತ್ತು ಅಧಿಕೃತ ವಿವರಗಳು:
ಶೈಕ್ಷಣಿಕ ಅರ್ಹತೆ (Educational Qualification): ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಬೋರ್ಡ್ನಿಂದ ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು:
ಆಯ್ಕೆ ಪ್ರಕ್ರಿಯೆ(Selection Process):
ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು ನೇರ ಸಂದರ್ಶನ (Walk-in-Interview) ಮತ್ತು ಮೂಲ ದಾಖಲಾತಿಗಳ ಪರಿಶೀಲನೆಯ (Document Verification) ಮೂಲಕ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನದ ವಿವರ (Interview Details):
ಸಂದರ್ಶನ ನಡೆಯುವ ದಿನಾಂಕ: 29.07.2026
ಸಂದರ್ಶನದ ಸ್ಥಳ:
ನಿರ್ದೇಶಕರು ಹಾಗೂ ಡೀನ್ ರವರ ಸಭಾ ಕೊಠಡಿ,
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (BMCRI),
ಕೆ.ಆರ್. ರಸ್ತೆ, ಕೋಟೆ, ಬೆಂಗಳೂರು - 560002.
ಸಂದರ್ಶನಕ್ಕೆ ತರಬೇಕಾದ ಪ್ರಮುಖ ದಾಖಲೆಗಳು:
ಅರ್ಜಿ ಸಲ್ಲಿಸುವುದು ಹೇಗೆ? (How to Apply):
ಪ್ರಮುಖ ದಿನಾಂಕಗಳು (Important Dates to Remember):

- ಕೆಲಸದ ಸ್ಥಳ: ವಾಣಿ ವಿಲಾಸ ಆಸ್ಪತ್ರೆ, ಬೆಂಗಳೂರು
- ಹುದ್ದೆಯ ಹೆಸರು: ಶುಶೂಷಾಧಿಕಾರಿಗಳು (Staff Nurse / Nursing Officer)
- ಅಧಿಸೂಚನೆ ಸಂಖ್ಯೆ: Ref No.: BMCRI/ROCB/01/2026-27(2138090)
- ದೂರವಾಣಿ ಸಂಖ್ಯೆ: 080-2670 0810
ಶೈಕ್ಷಣಿಕ ಅರ್ಹತೆ (Educational Qualification): ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಬೋರ್ಡ್ನಿಂದ ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು:
- B.Sc Nursing ಅಥವಾ GNM (Diploma in General Nursing and Midwifery) ಕೋರ್ಸ್ ಪೂರ್ಣಗೊಳಿಸಿರಬೇಕು.
- ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ನರ್ಸಿಂಗ್ ಕೌನ್ಸಿಲ್ (Karnataka Nursing Council - KNC) ನಲ್ಲಿ ಸಕ್ರಿಯ ನೋಂದಣಿಯನ್ನು ಹೊಂದಿರಬೇಕಾಗುತ್ತದೆ.
- ಕರ್ನಾಟಕ ಸರ್ಕಾರದ ನಿಯಮಾವಳಿಗಳ ಪ್ರಕಾರ ಕನಿಷ್ಠ 18 ವರ್ಷ ತುಂಬಿರಬೇಕು.
- ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ(Selection Process):
ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು ನೇರ ಸಂದರ್ಶನ (Walk-in-Interview) ಮತ್ತು ಮೂಲ ದಾಖಲಾತಿಗಳ ಪರಿಶೀಲನೆಯ (Document Verification) ಮೂಲಕ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನದ ವಿವರ (Interview Details):
ಸಂದರ್ಶನ ನಡೆಯುವ ದಿನಾಂಕ: 29.07.2026
ಸಂದರ್ಶನದ ಸ್ಥಳ:
ನಿರ್ದೇಶಕರು ಹಾಗೂ ಡೀನ್ ರವರ ಸಭಾ ಕೊಠಡಿ,
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (BMCRI),
ಕೆ.ಆರ್. ರಸ್ತೆ, ಕೋಟೆ, ಬೆಂಗಳೂರು - 560002.
ಸಂದರ್ಶನಕ್ಕೆ ತರಬೇಕಾದ ಪ್ರಮುಖ ದಾಖಲೆಗಳು:
- ವಿದ್ಯಾರ್ಹತೆ: ಬಿ.ಎಸ್ಸಿ ನರ್ಸಿಂಗ್ ಅಥವಾ ಜಿಎನ್ಎಂ ಕೋರ್ಸ್ನ ಎಲ್ಲಾ ಅಂಕಪಟ್ಟಿಗಳು ಮತ್ತು ಪದವಿ ಪ್ರಮಾಣಪತ್ರ.
- ನೊಂದಣಿ ಪತ್ರ: ಕರ್ನಾಟಕ ನರ್ಸಿಂಗ್ ಕೌನ್ಸಿಲ್ (KNC) ನೋಂದಣಿ ಪ್ರಮಾಣಪತ್ರ.
- ವಯಸ್ಸಿನ ಪುರಾವೆ: ಎಸ್ಎಸ್ಎಲ್ಸಿ (SSLC) ಅಂಕಪಟ್ಟಿ.
- ಗುರುತಿನ ಚೀಟಿ: ಆಧಾರ್ ಕಾರ್ಡ್ ಅಥವಾ ಇತರೆ ಸರ್ಕಾರಿ ಗುರುತಿನ ಚೀಟಿ.
- ಫೋಟೋಗಳು: ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು.
- ಮೀಸಲಾತಿ (ಇದ್ದಲ್ಲಿ): ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ.
- ಅನುಭವ (ಇದ್ದಲ್ಲಿ): ನರ್ಸಿಂಗ್ ಕೆಲಸದ ಅನುಭವದ ಪ್ರಮಾಣಪತ್ರ.
- ⚠️ ಸೂಚನೆ:ಜುಲೈ 29 ರ ಸಂದರ್ಶನದ ವೇಳೆ ಈ ಎಲ್ಲಾ ದಾಖಲೆಗಳ ಮೂಲ ಪ್ರತಿಗಳು (Originals) ಮತ್ತು ಜೆರಾಕ್ಸ್ ಸೆಟ್ಗಳನ್ನು ಕಡ್ಡಾಯವಾಗಿ ತರಬೇಕು.
ಅರ್ಜಿ ಸಲ್ಲಿಸುವುದು ಹೇಗೆ? (How to Apply):
- ಮೊದಲು BMCRI ನ ಅಧಿಕೃತ ವೆಬ್ಸೈಟ್ ಆದ https://bmcribengaluru.karnataka.gov.in ಗೆ ಭೇಟಿ ನೀಡಿ.
- ವೆಬ್ಸೈಟ್ನ 'Notification/Recruitment' ವಿಭಾಗದಲ್ಲಿ ನೀಡಿರುವ ಅಧಿಕೃತ ಪ್ರಕಟಣೆಯನ್ನು ಕೂಲಂಕಷವಾಗಿ ಓದಿ.
- ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಜುಲೈ 22, 2026 ರ ಒಳಗೆ ಕಚೇರಿಗೆ ತಲುಪುವಂತೆ ಸಲ್ಲಿಸಬೇಕು.
- ಯಾವುದೇ ಹೆಚ್ಚಿನ ತಾಂತ್ರಿಕ ತೊಂದರೆ ಅಥವಾ ಗೊಂದಲಗಳಿದ್ದಲ್ಲಿ ಕಚೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ 080-2670 0810 ಗೆ ಕರೆ ಮಾಡಿ ಸ್ಪಷ್ಟನೆ ಪಡೆಯಬಹುದು.
ಪ್ರಮುಖ ದಿನಾಂಕಗಳು (Important Dates to Remember):
- ಅಧಿಸೂಚನೆ ಹೊರಡಿಸಿದ ದಿನಾಂಕ: 03 ಜುಲೈ 2026
- ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ: 08 ಜುಲೈ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 ಜುಲೈ 2026
- ಮೂಲ ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ದಿನಾಂಕ: 29 ಜುಲೈ 2026
Application Start Date: 8 ಜುಲೈ 2026
Application End Date: 22 ಜುಲೈ 2026
Employment Type: FULL_TIME
Hiring Organization: BMCRI https://bmcribengaluru.karnataka.gov.in/en
Work Location: K.R. Road,, Banglore, KA, 575002
To download official notification
Related Tags: Nursng

Comments