ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ನೇಮಕಾತಿ : ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
| Date:15 ಜೂನ್ 2019

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಟಮಕ, ಕೋಲಾರ ಹಾಗು ವಿಶ್ವವಿದ್ಯಾಲಯದ ಅಧೀನಕೊಳ್ಳಪಡುವ ಸ್ನಾತಕೋತ್ತರ ಕೇಂದ್ರ, ಕೋಲಾರದ ಸ್ನಾತಕೋತ್ತರ ವಿಭಾಗಗಳಿಗೆ ಹಾಗೂ ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜು, ಚಿಕ್ಕಬಳ್ಳಾಪುರ 2019-20 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಭೋದನಾ ಕಾರ್ಯಭಾರದ ನಿರ್ವಹಣೆಗಾಗಿ ಯುಜಿಸಿ ನಿಯಮಾನುಸಾರ ಪೂರ್ವಕಾಲಿಕ ಅಥವಾ ಅರೆಕಾಲಿಕ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ಈ ಕೆಳಕಂಡ ವಿಷಯಗಳ ಬೋಧನ ಕಾರ್ಯಕ್ಕನುಗುಣವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅತಿಥಿ ಉಪನ್ಯಾಸಕರು ಬೇಕಾಗಿರುವ ವಿಷಯಗಳು : ಕನ್ನಡ ಇಂಗ್ಲಿಷ್ ವಾಣಿಜ್ಯ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಸಮಾಜಕಾರ್ಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಶಿಕ್ಷಣ(B Ed) ಸಸ್ಯಶಾಸ್ತ್ರ ಗಣಕ ವಿಜ್ಞಾನ ಭೌತಶಾಸ್ತ್ರ ಗಣಿತಶಾಸ್ತ್ರ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅರ್ಜಿ ನಮೂನೆಗಳನ್ನು ಕೆಳಗೆ ನೀಡಿರುವ ಲಿಂಕ್ ನ ಮೂಲಕ ಡೌನ್ಲೋಡ್ ಮಾಡಿಕೊಂಡು ಬರ್ತಿಮಾಡಿಕೊಂಡು, ನಂತರ ಭರ್ತಿ ಮಾಡಿದ ಅರ್ಜಿಗಳನ್ನು ಈ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ಕಳುಹಿಸಿಕೊಡಬೇಕು ವಿಳಾಸ : ಕುಲಸಚಿವರು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ( ಆಡಳಿತ ಕಚೇರಿ ) ಟಮಕ, ಕೋಲಾರ - 5 6 3 1 0 3 ಅಥವಾ ಕುಲಸಚಿವರು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ (ನಗರ ಕಚೇರಿ) ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ ಬೆಂಗಳೂರು-560001 ಈ ಮೇಲಿನ ವಿಳಾಸಕ್ಕೆ ದಿನಾಂಕ 17 6 2019 ರ ಸಾಯಂಕಾಲ 5 ಗಂಟೆಯವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಸೂಚನೆ ವಿಶೇಷ : ಕನ್ನಡ, ವಾಣಿಜ್ಯ, ಸಮಾಜಕಾರ್ಯ ವಿಭಾಗಗಳ ಅರ್ಜಿದಾರರು ಈಗಾಗಲೇ ವಿಶ್ವವಿದ್ಯಾಲಯದ ಪ್ರಕಟಣೆ ದಿನಾಂಕ 08 03 2019ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ, ಪುನ್ಹ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ಆದರೆ ಹೆಚ್ಚಿನ ಮಾಹಿತಿ ಇದ್ದಲ್ಲಿ ದ್ವಿಪ್ರತಿಯಲ್ಲಿ ಸಲ್ಲಿಸುವುದು. ಈ ಕುರಿತ ಯಾವುದೇ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಮಾಹಿತಿ ದೂರವಾಣಿ ಸಂಖ್ಯೆ 08152 243152/53 ಗೆ ಸಂಪರ್ಕಿಸಬಹುದು ಅಥವಾ ವಿಶ್ವವಿದ್ಯಾಲಯದ ಜಾಲತಾಣ ಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಬಹುದು.
Application Start Date: 26 ಮೇ 2019
Application End Date: 17 ಜೂನ್ 2019
Work Location: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ
Employment Type: FULL_TIME
Hiring Organization: KPSC Vaani https://www.kpscvaani.com
Job Location: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, KA,

Comments