Loading..!

ಬ್ಯಾಂಕ್ ಉದ್ಯೋಗ ಆಕಾಂಕ್ಷಿಗಳಿಗೆ ಬಿಗ್ ನ್ಯೂಸ್: ಬೆಳಗಾವಿ DCC ಬ್ಯಾಂಕ್‌ನಲ್ಲಿ 104 ಹುದ್ದೆಗಳ ನೇಮಕಾತಿ! ವೇತನ ₹1,15,150 ವರೆಗೆ
Tags: Degree
Published by: Yallamma G | Date:24 ಜುಲೈ 2026
not found
BDCC Bank Recruitment 2026: ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ 104 ಹುದ್ದೆಗಳ ಬಂಪರ್ ನೇಮಕಾತಿ! SSLC & ಪದವಿ ಪಡೆದವರಿಗೆ ₹1,15,150 ವರೆಗೆ ವೇತನ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಹಾಗೂ ಸಹಕಾರಿ ರಂಗದ ಉದ್ಯೋಗ ಗಿಟ್ಟಿಸಿಕೊಳ್ಳಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ! ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ (BDCC Bank), ಬೆಳಗಾವಿ ಖಾಲಿ ಇರುವ ವಿವಿಧ ವೃಂದದ ಒಟ್ಟು 104 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಈ ನೇಮಕಾತಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರು (SDC), ಸಿಪಾಯಿ (Peon) ಮತ್ತು ಬಂದೂಕುಧಾರಿ (Gunman) ಹುದ್ದೆಗಳು ಖಾಲಿ ಇದ್ದು, SSLC ಹಾಗೂ ಯಾವುದೇ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ಹುದ್ದೆಗಳ ವಯೋಮಿತಿ, ಶೈಕ್ಷಣಿಕ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, ಅರ್ಜಿ ಶುಲ್ಕ ಹಾಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರವಾಗಿ ನೀಡಲಾಗಿದೆ.

visit official website

BDCC ಬ್ಯಾಂಕ್ ನೇಮಕಾತಿ 2026: ಪ್ರಮುಖ ವಿವರ
  • ನೇಮಕಾತಿ ಸಂಸ್ಥೆ : ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಬೆಳಗಾವಿ  
  • ಒಟ್ಟು ಖಾಲಿ ಹುದ್ದೆಗಳು : 104 ಹುದ್ದೆಗಳು  
  • ಹುದ್ದೆಗಳ ಹೆಸರು : ದ್ವಿತೀಯ ದರ್ಜೆ ಗುಮಾಸ್ತರು (SDC), ಸಿಪಾಯಿ (Peon), ಗನ್‌ಮ್ಯಾನ್
  • ಅಧಿಕೃತ ವೆಬ್‌ಸೈಟ್ : www.belagavidccb.bank.in  
  • ಸಹಾಯವಾಣಿ ಸಂಖ್ಯೆ (Helpline) : 9187463509 (ಬೆಳಿಗ್ಗೆ 10:30 ರಿಂದ ಸಂಜೆ 5:30)

ಹುದ್ದೆಗಳ ವಿವರ, ವೇತನ ಶ್ರೇಣಿ ಮತ್ತು ಶೈಕ್ಷಣಿಕ ಅರ್ಹತೆ

ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳ ವರ್ಗೀಕರಣ ಹಾಗೂ ಅಗತ್ಯ ಅರ್ಹತೆಗಳು ಈ ಕೆಳಗಿನಂತಿವೆ:
1. ದ್ವಿತೀಯ ದರ್ಜೆ ಗುಮಾಸ್ತರು (Second Division Clerks - SDC)
  • ಒಟ್ಟು ಹುದ್ದೆಗಳು: 83  
  • ವೇತನ ಶ್ರೇಣಿ: ₹53,150/- ರಿಂದ ₹1,15,150/-  
  • ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BA / B.Sc / B.Com ಪದವಿ ಹೊಂದಿರಬೇಕು.  
  • ಕಂಪ್ಯೂಟರ್ ಜ್ಞಾನ: ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ಸ್ ಜ್ಞಾನ ಕಡ್ಡಾಯ. (ಪದವಿಯಲ್ಲಿ ಕನಿಷ್ಠ ಒಂದು ವಿಷಯ ಕಂಪ್ಯೂಟರ್ ಅಧ್ಯಯನ ಮಾಡಿದ್ದರೆ ಸರ್ಟಿಫಿಕೇಟ್‌ನಿಂದ ವಿನಾಯಿತಿ ನೀಡಲಾಗುವುದು).
2. ಸಿಪಾಯಿ (Peons)
  • ಒಟ್ಟು ಹುದ್ದೆಗಳು: 20  
  • ವೇತನ ಶ್ರೇಣಿ: ₹42,650/- ರಿಂದ ₹96,650/-  
  • ಶೈಕ್ಷಣಿಕ ಅರ್ಹತೆ: ಎಸ್.ಎಸ್.ಎಲ್.ಸಿ (SSLC) / 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.   
3. ಬಂದೂಕುಧಾರಿ (Gunman)
  • ಒಟ್ಟು ಹುದ್ದೆಗಳು: 01  
  • ವೇತನ ಶ್ರೇಣಿ: ₹47,650/- ರಿಂದ ₹1,05,650/-  
  • ಶೈಕ್ಷಣಿಕ ಅರ್ಹತೆ: SSLC / 10ನೇ ತರಗತಿ ಪಾಸಾಗಿರಬೇಕು. ಜೊತೆಗೆ ಭಾರತೀಯ ಸಶಸ್ತ್ರ ಪಡೆಗಳಿಂದ ನಿವೃತ್ತರಾದ ಮಾಜಿ ಸೈನಿಕರಾಗಿರಬೇಕು ಹಾಗೂ ಚಾಲ್ತಿಯಲ್ಲಿರುವ ಬಂದೂಕು ಪರವಾನಗಿ (Valid Arm License) ಹೊಂದಿರಬೇಕು. 
ವಿಶೇಷ ಗಮನಿಸಿ: ಎಲ್ಲಾ ಹುದ್ದೆಗಳಿಗೂ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನ (ಓದುವುದು, ಬರೆಯುವುದು, ಅರ್ಥೈಸಿಕೊಳ್ಳುವುದು ಮತ್ತು ಸ್ಪಷ್ಟವಾಗಿ ಮಾತನಾಡುವುದು) ಕಡ್ಡಾಯವಾಗಿರುತ್ತದೆ.

ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ: 4,098 ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ವೇತನ: ₹35,400

ವಯೋಮಿತಿ ವಿವರ (Age Limit)
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ (27-08-2026) ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ವಿವರಗಳು ಹೀಗಿವೆ:  
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1: ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷಗಳು.  
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: ಕನಿಷ್ಠ 18 ವರ್ಷ, ಗರಿಷ್ಠ 38 ವರ್ಷಗಳು.  
  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ (GM): ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷಗಳು. 
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ (Selection Process)
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (Written Exam) ಮತ್ತು ಮೌಖಿಕ ಸಂದರ್ಶನದ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ.
1. ದ್ವಿತೀಯ ದರ್ಜೆ ಗುಮಾಸ್ತ (SDC) ಹುದ್ದೆಗೆ (200 ಅಂಕಗಳ ಪರೀಕ್ಷೆ):
  • ಕನ್ನಡ ಭಾಷೆ – 50 ಅಂಕಗಳು  
  • ಸಹಕಾರ ವಿಷಯಗಳು – 50 ಅಂಕಗಳು  
  • ಸಾಮಾನ್ಯ ಇಂಗ್ಲಿಷ್ – 25 ಅಂಕಗಳು  
  • ಸಾಮಾನ್ಯ ಜ್ಞಾನ – 25 ಅಂಕಗಳು  
  • ಭಾರತದ ಸಂವಿಧಾನ – 25 ಅಂಕಗಳು  
  • ಬ್ಯಾಂಕಿನ ಕಾರ್ಯಚಟುವಟಿಕೆಗಳು – 25 ಅಂಕಗಳು 
2. ಸಿಪಾಯಿ ಹಾಗೂ ಗನ್ ಮ್ಯಾನ್ ಹುದ್ದೆಗೆ (100 ಅಂಕಗಳ ಪರೀಕ್ಷೆ):
  • ಕನ್ನಡ ಭಾಷೆ – 50 ಅಂಕಗಳು  
  • ಸಾಮಾನ್ಯ ಜ್ಞಾನ – 50 ಅಂಕಗಳು
ಅಂತಿಮ ಆಯ್ಕೆ ಪಟ್ಟಿ: ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು 15 ಅಂಕಗಳ ಮೌಖಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ. ಲಿಖಿತ ಪರೀಕ್ಷೆಯ ಅಂಕಗಳನ್ನು ಶೇ. 85 ಕ್ಕೆ ಇಳಿಸಿ, ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು (ಗರಿಷ್ಠ 15) ಒಟ್ಟುಗೂಡಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಅರ್ಜಿ ಶುಲ್ಕದ ವಿವರ (Application Fee)
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.  
  • SC / ST / ಪ್ರವರ್ಗ-1 ಅಭ್ಯರ್ಥಿಗಳಿಗೆ: ₹500/- (+ ಬ್ಯಾಂಕ್ ಗೇಟ್‌ವೇ ಶುಲ್ಕ)  
  • ಸಾಮಾನ್ಯ, 2A, 2B, 3A, 3B ಅಭ್ಯರ್ಥಿಗಳಿಗೆ: ₹1,000/- (+ ಬ್ಯಾಂಕ್ ಗೇಟ್‌ವೇ ಶುಲ್ಕ) 
BCC Bank ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
  • ಬೆಳಗಾವಿ DCC ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ www.belagavidccb.bank.in ಗೆ ಭೇಟಿ ನೀಡಿ.  
  • ಮುಖಪುಟದಲ್ಲಿರುವ BDCC Bank Recruitment 2026 ಲಿಂಕ್ ಮೇಲೆ ಕ್ಲಿಕ್ ಮಾಡಿ.  
  • ನೀವು ಅರ್ಜಿ ಸಲ್ಲಿಸಲು ಇಚ್ಛಿಸುವ ಹುದ್ದೆಯನ್ನು ಆಯ್ಕೆ ಮಾಡಿ, ನಿಮ್ಮ ಹೆಸರು, ಶೈಕ್ಷಣಿಕ ಮಾಹಿತಿ ಮತ್ತು ವಿಳಾಸವನ್ನು ಭರ್ತಿ ಮಾಡಿ.  
  • ಭಾವಚಿತ್ರ ಮತ್ತು ಸಹಿ ಅಪ್‌ಲೋಡ್: ಇತ್ತೀಚಿನ ಬಿಳಿ ಹಿನ್ನೆಲೆಯುಳ್ಳ ಭಾವಚಿತ್ರ (ಗರಿಷ್ಠ 100 KB) ಹಾಗೂ ಸಹಿಯನ್ನು (ಗರಿಷ್ಠ 50 KB) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.  
  • ಅಗತ್ಯ ಶೈಕ್ಷಣಿಕ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ಹಾಗೂ ಕಂಪ್ಯೂಟರ್ ಸರ್ಟಿಫಿಕೇಟ್‌ಗೆ ಸ್ವಯಂ ದೃಢೀಕರಿಸಿ (Self-attested) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.  
  • ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ, ಅರ್ಜಿಯನ್ನು 'Submit' ಮಾಡಿ.  
  • ಅಂತಿಮವಾಗಿ ಭರ್ತಿ ಮಾಡಿದ ಅರ್ಜಿಯ ಪ್ರಿಂಟ್‌ಔಟ್ (Printout) ಪಡೆದು ಭವಿಷ್ಯದ ಉಲ್ಲೇಖಕ್ಕಾಗಿ ಕಾಯ್ದಿರಿಸಿಕೊಳ್ಳಿ.
ಪ್ರಮುಖ ದಿನಾಂಕಗಳು (Important Dates)
  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27-07-2026  
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-08-2026  
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 27-08-2026  
ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ವೀಕ್ಷಿಸಿ. ಉದ್ಯೋಗ ಸುದ್ದಿಗಳ ತಕ್ಷಣದ ಅಪ್‌ಡೇಟ್‌ಗಳಿಗಾಗಿ KPSCVaani ಜಾಲತಾಣವನ್ನು ದಿನವೂ ವೀಕ್ಷಿಸುತ್ತಿರಿ!
No. of posts:  104
Application Start Date:  27 ಜುಲೈ 2026
Application End Date:  27 ಆಗಸ್ಟ್ 2026
Last Date for Payment:  27 ಆಗಸ್ಟ್ 2026
Pay Scale: 53150 - 105650 INR
Employment Type: FULL_TIME
Hiring Organization: Belagavi DCC Bank https://belagavidccb.bank.in/
Work Location: Near Central Bus Stand, Old P B Road, Old P B Road, 2767/6/1A, Raviwar Peth, Belagavi, KA, 590001
To Download Official Notification
Related Tags: Degree

Comments