ಬೆಂಗಳೂರಿನ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಬೆಂಗಳೂರಿನ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ 18 ಶಾಖಾ ವ್ಯವಸ್ಥಾಪಕರು/ ಉಪ ವ್ಯವಸ್ಥಾಪಕರು, ಲೆಕ್ಕಾಧಿಕಾರ, ಕಂಪ್ಯೂಟರ್ ಪ್ರೋಗ್ರಾಮರ್ ಹಾಗೂ ಡಿ.ಬಿ.ಸಿ, ಸಹಾಯಕ ವ್ಯವಸ್ಥಾಪಕರು/ ಸಹಾಯಕ ಲೆಕ್ಕಾಧಿಕಾರಿಗಳು/ ಕ್ಷೇತ್ರಾಧಿಕಾರಿಗಳು/ ವಸೂಲಾಧಿಕಾರಿಗಳು/ ಸಹಾಯಕ ಕಿರಿಯ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ದಿನಾಂಕ 17/07/2023 ರೊಳಗಾಗಿ ಖುದ್ದಾಗಿ ಬಂದು/ ಅಂಚೆ/ ಕೊರಿಯರ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಳಾಸ :
ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ
ನಂ.113 ಆರ್.ವಿ.ರಸ್ತೆ, ವಿ.ವಿ.ಪುರಂ.ಬೆಂಗಳೂರು-560004
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಗಿನಂತೆ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.
- 1. a) ಶಾಖಾ ವ್ಯವಸ್ಥಾಪಕರು/ ಉಪ ವ್ಯವಸ್ಥಾಪಕರು, ಲೆಕ್ಕಾಧಿಕಾರ b) ಕಂಪ್ಯೂಟರ್ ಪ್ರೋಗ್ರಾಮರ್ ಹಾಗೂ ಡಿ.ಬಿ.ಸಿ 2. ಸಹಾಯಕ ವ್ಯವಸ್ಥಾಪಕರು/ ಸಹಾಯಕ ಲೆಕ್ಕಾಧಿಕಾರಿಗಳು/ ಕ್ಷೇತ್ರಾಧಿಕಾರಿಗಳು/ ವಸೂಲಾಧಿಕಾರಿಗಳು/ ಸಹಾಯಕ ಡಿ.ಬಿ.ಎ 3. ಹಿರಿಯ ಸಹಾಯಕರು/ಹಿರಿಯ ದತ್ತಾಂಶ ನಮೂದು ಆಯೋಜಕರು 4. ಕಿರಿಯ ಸಹಾಯಕರು/ ಗುಮಾಸ್ತ/ ಬೆರಳಚ್ಚುಗಾರ/ ದತ್ತಾಂಶ ನಮೂದು ಆಯೋಜಕರು ಹುದ್ದೆಗಳಿಗೆ 354 ರೂ.
- ಸೇವಕರು/ ಜವಾನರು/ ಭದ್ರತಾ ರಕ್ಷಕರು/ ವಾಹನ ಚಾಲಕರು ಹುದ್ದೆಗಳಿಗೆ 177 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments