Loading..!

ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಖಾಲಿ ಇರುವ 150 ಸಾಮಾನ್ಯ ಅಧಿಕಾರಿ (Generalist Officer) ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree
Published by: Hanamant Katteppanavar | Date:24 ಮಾರ್ಚ್ 2021
not found
ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಖಾಲಿ ಇರುವ 150 ಸಾಮಾನ್ಯ ಅಧಿಕಾರಿ (Generalist Officer) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. 

ಅರ್ಜಿ ಪ್ರಕ್ರಿಯೆಯು ಮಾರ್ಚ್ 22, 2021 ರಂದು ಪ್ರಾರಂಭಗೊಂಡು ಏಪ್ರಿಲ್ 06 2021 ರಂದು ಕೊನೆಗೊಳ್ಳುತ್ತದೆ.

- ಸಾಮಾನ್ಯ ಅಧಿಕಾರಿ (Generalist Officer) - 150 ಹುದ್ದೆಗಳು

* ಪ್ರಮುಖ ದಿನಾಂಕಗಳು :

- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 22-03-2021

- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-04-2021

- ಅಪ್ಲಿಕೇಶನ್ ವಿವರಗಳನ್ನು ಸಂಪಾದಿಸಲು ಕೊನೆಯ ದಿನಾಂಕ: 06-04-2021

- ಅರ್ಜಿಯನ್ನು ಮುದ್ರಿಸಲು ಕೊನೆಯ ದಿನಾಂಕ: 21-04-2021
No. of posts:  150
Application Start Date:  22 ಮಾರ್ಚ್ 2021
Application End Date:  6 ಎಪ್ರಿಲ್ 2021
Selection Procedure: ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification: ಹುದ್ದೆಗೆ Degree, CA, ICWA, CFA, FRM ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು, ಹಾಗೂ 03 ವರ್ಷಗಳ ಕಾರ್ಯಾನುಭವವನ್ನು ಹೊಂದಿರಬೇಕು.
Fee:
- ಹುದ್ದೆಗೆ ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು - 1,180/- ರೂ ಗಳು

- ಪ.ಜಾ ಮತ್ತು ಪ.ಪಂ ದ ಅಭ್ಯರ್ಥಿಗಳು - 118 /- ರೂ.ಗಳ ಅರ್ಜಿ ಶುಲ್ಕವನ್ನು ತುಂಬಬೇಕು. ಮತ್ತು 

- PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ - ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ.
Age Limit:

- ಹುದ್ದೆಗೆ ಕನಿಷ್ಠ 25 ವರ್ಷಗಳನ್ನು ಪೂರ್ಣಗೊಳಿಸಿರಬೇಕು ಮತ್ತು ಗರಿಷ್ಠ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದಾಗಿದೆ.

- ಹುದ್ದೆಗಳ ಅನುಸಾರವಾಗಿ ವಯೋಮಿತಿಯಲ್ಲಿ ಸಡಲಿಕೆಯನ್ನು ನೀಡಲಾಗಿದೆ.

Pay Scale:
ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 48,170/- ರೂ ಗಳಿಂದ 69,810/- ರೂ ಗಳವರೆಗೆ ವೇತನವನ್ನು ನೀಡಲಾಗುವುದು.
To Download the official notification

Comments