ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಇರುವ 511 ವಿವಿಧ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Hanamant Katteppanavar | Date:12 ಎಪ್ರಿಲ್ 2021

ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಇರುವ 511 ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್, ಇ-ವೆಲ್ತ್ ರಿಲೇಶನ್‌ಶಿಪ್ ಮ್ಯಾನೇಜರ್, ಪ್ರಾಂತ್ಯದ ಮುಖ್ಯಸ್ಥ, ಗುಂಪು ಮುಖ್ಯಸ್ಥ, ಉತ್ಪನ್ನ ಮುಖ್ಯಸ್ಥ (ಹೂಡಿಕೆ ಮತ್ತು ಸಂಶೋಧನೆ), ಮುಖ್ಯಸ್ಥ (ಕಾರ್ಯಾಚರಣೆ ಮತ್ತು ತಂತ್ರಜ್ಞಾನ), ಡಿಜಿಟಲ್ ಸೇಲ್ಸ್ ಮ್ಯಾನೇಜರ್ ಮತ್ತು ಐಟಿ ಕ್ರಿಯಾತ್ಮಕ ವಿಶ್ಲೇಷಕ - ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಏಪ್ರಿಲ್ 09 2021 ಪ್ರಾರಂಭಗೊಂಡು ಮತ್ತು ಏಪ್ರಿಲ್ 29 2021 ರಂದು ಕೊನೆಗೊಳ್ಳುತ್ತದೆ.
* ಖಾಲಿ ಹುದ್ದೆಗಳ ವಿವರ:
- ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್- 407 ಹುದ್ದೆಗಳು
- ಇ- ವೆಲ್ತ್ ರಿಲೇಶನ್‌ಶಿಪ್ ಮ್ಯಾನೇಜರ್- 50 ಹುದ್ದೆಗಳು
- ಪ್ರಾಂತ್ಯದ ಮುಖ್ಯಸ್ಥ- 44 ಹುದ್ದೆಗಳು
- ಗುಂಪು ಮುಖ್ಯಸ್ಥ- 06 ಹುದ್ದೆಗಳು
- ಉತ್ಪನ್ನ ಮುಖ್ಯಸ್ಥ (ಹೂಡಿಕೆ ಮತ್ತು ಸಂಶೋಧನೆ) - 01 ಹುದ್ದೆ
- ಮುಖ್ಯಸ್ಥ (ಕಾರ್ಯಾಚರಣೆ ಮತ್ತು ತಂತ್ರಜ್ಞಾನ) - 01 ಹುದ್ದೆ
- ಡಿಜಿಟಲ್ ಸೇಲ್ಸ್ ಮ್ಯಾನೇಜರ್- 01 ಹುದ್ದೆ
- ಐಟಿ ಕ್ರಿಯಾತ್ಮಕ ವಿಶ್ಲೇಷಕ - ವ್ಯವಸ್ಥಾಪಕ- 01 ಹುದ್ದೆ
No. of posts: 511
Application Start Date: 9 ಎಪ್ರಿಲ್ 2021
Application End Date: 29 ಎಪ್ರಿಲ್ 2021
Work Location: Across India
Selection Procedure: ಹುದ್ದೆಗೆ ಅಭ್ಯರ್ಥಿಗಳನ್ನುಆಯ್ಕೆ ಪಟ್ಟಿಯ, ವೈಯಕ್ತಿಕ ಸಂದರ್ಶನ ಅಥವಾ ಗುಂಪು ಚರ್ಚೆ ಮೂಲಕ ಆಯ್ಕೆ ಮಾಡಲಾಗುವುದು.
Qualification: ಹುದ್ದೆಗೆ ಅನುಗುಣವಾಗಿ ಯಾವುದೇ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಮತ್ತು ಆಯಾ ಹುದ್ದೆಗಳ ಅನುಸಾರವಾಗಿ 2 ರಿಂದ 10 ವರ್ಷಗಳಷ್ಟು ಕೆಲಸದ ಅನುಭವವನ್ನು ಹೊಂದಿರಬೇಕು.
Fee:
ಹುದ್ದೆಗೆ ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು- 600/- ರೂ ಗಳ ಮತ್ತು
ಪ.ಜಾ ಮತ್ತು ಪ.ಪಂ ದ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳು- 100/- ಗಳ ಅರ್ಜಿ ಶುಲ್ಕವನ್ನು ತುಂಬಬೇಕು.
Age Limit: - ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ದಿನಾಂಕ 01-04-2021 ಅನ್ವಯಿಸುವಂತೆ ಕನಿಷ್ಠ- 23 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ - 45 ವರ್ಷಗಳ ವಯೋಮಿತಿಯೊಳಗಿನವರಾಗಿರಬೇಕು.





Comments