Loading..!

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಭರ್ಜರಿ ನೇಮಕಾತಿ 2026 – ಅರ್ಹತೆ, ಸಂಬಳ ಮತ್ತು ಅರ್ಜಿ ವಿವರ ಇಲ್ಲಿದೆ, ನೇರ ಸಂದರ್ಶನ, ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Yallamma G | Date:16 ಫೆಬ್ರುವರಿ 2026
not found
ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗಿಗೆ ಇಲ್ಲಿದೆ ಸುವರ್ಣಾವಕಾಶ! ಬೆಂಗಳೂರು ವಿಶ್ವವಿದ್ಯಾಲಯವು (Bangalore University) 2026-27ನೇ ಶೈಕ್ಷಣಿಕ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.  

ಬೆಂಗಳೂರು ವಿಶ್ವವಿದ್ಯಾಲಯವು ವಿವಿಧ ಗ್ರಂಥಾಲಯಗಳಲ್ಲಿ 1 ವರ್ಷದ ಅವಧಿಗೆ "ಲೈಬ್ರರಿ ಅಪ್ರೆಂಟಿಸ್ ಟ್ರೈನಿ" (Library Apprentice Trainees) ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನವನ್ನು ಆಯೋಜಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಸಿ.  

KPSCVaani ಓದುಗರಿಗಾಗಿ ಈ ನೇಮಕಾತಿಯ ಕುರಿತಾದ ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ.

ಹುದ್ದೆಯ ಸಂಕ್ಷಿಪ್ತ ವಿವರಗಳು (Key Highlights)
ಸಂಸ್ಥೆಯ ಹೆಸರು: ಬೆಂಗಳೂರು ವಿಶ್ವವಿದ್ಯಾಲಯ

ಹುದ್ದೆಯ ಹೆಸರು: ಲೈಬ್ರರಿ ಅಪ್ರೆಂಟಿಸ್ ಟ್ರೈನಿ

ಒಟ್ಟು ಹುದ್ದೆಗಳು: 20

ಸ್ಟೈಫಂಡ್ (ವೇತನ): ತಿಂಗಳಿಗೆ ರೂ. 15,000/-

ಉದ್ಯೋಗ ಸ್ಥಳ: ಬೆಂಗಳೂರು


ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಹುದ್ದೆಗಳ ವರ್ಗವಾರು ವಿಂಗಡಣೆ (Vacancy Details)
ಒಟ್ಟು 20 ಹುದ್ದೆಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ:



ಶೈಕ್ಷಣಿಕ ಅರ್ಹತೆ (Educational Qualification)
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಲೈಬ್ರರಿ ಮತ್ತು ಇನ್ಫರ್ಮೇಷನ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ (Masters in Library & Information Science) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.


ಮಾಸಿಕ ವೇತನ : 15.000/- ರೂ ನಿಗದಿಪಡಿಸಲಾಗಿದೆ.  

ಆಯ್ಕೆ ಪ್ರಕ್ರಿಯೆ : 
ಅರ್ಹರನ್ನು ಮೆರಿಟ್ ಮತ್ತು ಮೀಸಲು ಆಶಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. 


ಅರ್ಜಿ ಸಲ್ಲಿಸುವ ವಿಧಾನ 
ಆಸಕ್ತ ಅಭ್ಯರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ https://bangaloreuniversity.karnataka.gov.in ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿ ನಮೂನೆ, ಮೂಲ ಅಂಕಪಟ್ಟಿಗಳು ಹಾಗೂ ಇತರೆ ಸಂಬಂಧಿತ ದಾಖಲೆಗಳೊಂದಿಗೆ (Original Marks Cards and other relevant documents/certificates) ನೇರ ಸಂದರ್ಶನಕ್ಕೆ ಖುದ್ದಾಗಿ ಹಾಜರಾಗಬೇಕು.


ನೇರ ಸಂದರ್ಶನದ ವಿವರಗಳು
ಸಂದರ್ಶನದ ದಿನಾಂಕ: 23.02.2026

ಸಮಯ: ಬೆಳಿಗ್ಗೆ 11.00 ಗಂಟೆಗೆ

ಸ್ಥಳ: ಬೋರ್ಡ್ ರೂಮ್ -1, ಆಡಳಿತ ಭವನ, ಜ್ಞಾನಭಾರತಿ ಕ್ಯಾಂಪಸ್, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 560056.


ಪ್ರಮುಖ ಷರತ್ತುಗಳು (Important Conditions)
=> ಆಯ್ಕೆಯನ್ನು ಸಂಪೂರ್ಣವಾಗಿ ಮೆರಿಟ್ ಮತ್ತು ಮೀಸಲಾತಿ ನೀತಿಯ ಆಧಾರದ ಮೇಲೆ ಮಾಡಲಾಗುತ್ತದೆ.

=> ಪ್ರಸ್ತುತ ತರಬೇತಿ ಪಡೆಯುತ್ತಿರುವವರು ಹಾಗೂ ಹಿಂದಿನ ವರ್ಷಗಳಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ಮತ್ತೆ ಈ ತರಬೇತಿಗೆ ಅರ್ಹರಾಗಿರುವುದಿಲ್ಲ.


👉 ಸರ್ಕಾರಿ ಉದ್ಯೋಗದ ನವೀಕರಣಗಳು, ಅಧಿಸೂಚನೆ ವಿಶ್ಲೇಷಣೆ ಮತ್ತು ಪರೀಕ್ಷಾ ಮಾರ್ಗದರ್ಶನಕ್ಕಾಗಿ KPSCVaani ನಿಮ್ಮ ವಿಶ್ವಾಸಾರ್ಹ ವೇದಿಕೆ.
Application End Date:  23 ಫೆಬ್ರುವರಿ 2026
To Download Official Notification
To Download Application Form

Comments