Loading..!

ಬಾಗಲಕೋಟ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನ
Tags: Diploma
Published by: Surekha Halli | Date:7 ಎಪ್ರಿಲ್ 2020
not found
ಬಾಗಲಕೋಟ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಇ -ಮೇಲ್ ಮುಖಾಂತರ ಈ ಕೂಡಲೇ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸಲು 08-04-2020 ಕೊನೆಯ ದಿನಾಂಕವಾಗಿದೆ. ಸರ್ಕಾರಿ ಆದೇಶ ಸಂಖ್ಯೆ : ಆಕುಕ / 01 /ಸಿ & ಆರ್/2020 ಬೆಂಗಳೂರು ದಿನಾಂಕ : ಕರೋನಾ ವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಬಲಪಡಿಸಿ ಸಮರ್ಪಕ ವೈದ್ಯಕೀಯ ಸೇವೆಯನ್ನು ಒದಗಿಸಲು ಅಗತ್ಯವಿರುವ ಈ ಕೆಳಕಾಣಿಸಿದ ಹುದ್ದೆಗಳನ್ನು ತಾತ್ಕಾಲಿಕವಾಗಿ ಗರಿಷ್ಠ 06 ತಿಂಗಳ ಮಟ್ಟಿಗೆ ಗುತ್ತಿಗೆ ಆಧಾರದ ಮೇಲೆ ಮೆರಿಟ್ ವಾರು ಕೆಳಕಾಣಿಸಿದ ಷರತ್ತಿಗೊಳಪಟ್ಟು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ವಿವರ : ವೈದ್ಯರು /ತಜ್ಞರು : 10 ಶೂಶ್ರುಷಕಿ : 20 ಆಸಕ್ತಿ ಹೊಂದಿದ 40 ವರ್ಷ ಒಳಗಿನ ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲ ಶೈಕ್ಷಣಿಕ ದಾಖಲಾತಿ ಹಾಗೂ ಹುದ್ದೆಗೆ ನಿಗದಿಪಡಿಸಿದ ಕೆ.ಎಮ್.ಸಿ /ಕೆ.ಎನ್.ಸಿ ನೊಂದಣಿ ಪ್ರಮಾಣ ಪತ್ರದೊಂದಿಗೆ ದಿನಾಂಕ :08-04-2020 ರ ಸಾಯಂಕಾಲ 5:30 ಗಂಟೆಯೊಳಗೆ ಈ ಕಚೇರಿಯ ಇ-ಮೇಲ್ ವಿಳಾಸಕ್ಕೆ ಮೇಲ್ ಮಾಡುವುದು ಅಥವಾ ಜಿಲ್ಲೆಯ ಎಲ್ಲ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಖುದ್ದಾಗಿ ಭೇಟಿ ನೀಡಿ ನಿಗಧಿತ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಬೇಕಾದ e mail ವಿಳಾಸ: dhobagalkote@gmail.com
No. of posts:  30
Application Start Date:  7 ಎಪ್ರಿಲ್ 2020
Application End Date:  8 ಎಪ್ರಿಲ್ 2020
Work Location:  ಬಾಗಲಕೋಟ ಜಿಲ್ಲೆ
Qualification: ಹುದ್ದೆಗಳಿಗನುಗುಣವಾಗಿ MBBS, Diploma Nursing, ಹಾಗೂ BSc ನರ್ಸಿಂಗ್ ವಿದ್ಯಾರ್ಹತೆಯನ್ನು ಹೊಂದಿರಬೇಕು
Pay Scale: ವೈದ್ಯರು /ತಜ್ಞರು : 60,000 /-
ಶೂಶ್ರುಷಕಿ : 20,000 /-
Employment Type: FULL_TIME
Hiring Organization: KPSC Vaani https://www.kpscvaani.com
Job Location: ಬಾಗಲಕೋಟ ಜಿಲ್ಲೆ, KA,
To View Official Press Notification
Related Tags: Diploma

Comments