Loading..!

ಇಸ್ರೋದಲ್ಲಿ ಡಿಗ್ರಿ ಮುಗಿಸಿದವರಿಗೆ ಬಂಪರ್ ಉದ್ಯೋಗ: 244 ಅಸಿಸ್ಟೆಂಟ್, UDC, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree
Published by: Heena Sheregar | Date:30 ಜುಲೈ 2026
not found
ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಕನಸು ಕಾಣುತ್ತಿರುವ ಯುವಜನತೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬಿಗ್ ನ್ಯೂಸ್ ನೀಡಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇಸ್ರೋ ಸಂಸ್ಥೆಯಲ್ಲಿ ಅಧಿಕೃತವಾಗಿ ನೇಮಕಾತಿ ಅಧಿಸೂಚನೆ ಹೊರಬಿದ್ದಿದ್ದು, ಆಸಕ್ತರಿಗೆ ಇದು ನಿಜಕ್ಕೂ ಸುವರ್ಣಾವಕಾಶವಾಗಿದೆ.  

ಈ ಬೃಹತ್ ನೇಮಕಾತಿ ಅಭಿಯಾನದ ಮೂಲಕ ಅಸಿಸ್ಟೆಂಟ್, ಯುಡಿಸಿ (UDC), ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ ಹಾಗೂ ಸ್ಟೆನೋಗ್ರಾಫರ್ ಸೇರಿದಂತೆ ಒಟ್ಟು 244 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಅರ್ಹ ಅಭ್ಯರ್ಥಿಗಳು16 ಆಗಸ್ಟ್ 2026 ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.  

ಈ ಹುದ್ದೆಗಳಿಗೆ ಬೇಕಾಗುವ ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಆಯ್ಕೆ ವಿಧಾನ ಹಾಗೂ ಅರ್ಜಿ ಸಲ್ಲಿಸುವ ಆನ್‌ಲೈನ್ ಲಿಂಕ್ ಸೇರಿದಂತೆ ಹೆಚ್ಚಿನ ವಿವರಗಳಿಗಾಗಿ ಈಗಲೇ KPSCVAANI.COM ಜಾಲತಾಣಕ್ಕೆ ಭೇಟಿ ನೀಡಿ. ಸ್ಪರ್ಧಾತ್ಮಕ ಪರೀಕ್ಷೆಗಳ ಇತ್ತೀಚಿನ ನೋಟಿಫಿಕೇಶನ್‌ಗಳು ಹಾಗೂ ಉದ್ಯೋಗ ಸುದ್ದಿಗಳಿಗಾಗಿ KPSCVAANI.COM ನೊಂದಿಗೆ ಸಂಪರ್ಕದಲ್ಲಿರಿ!

ISRO Recruitment 2026: ಪ್ರಮುಖ ವಿವರಗಳು:
  • ಸಂಸ್ಥೆಯ ಹೆಸರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)
  • ಹುದ್ದೆಗಳ ಹೆಸರು: ಅಸಿಸ್ಟೆಂಟ್, UDC, JPA, ಸ್ಟೆನೋಗ್ರಾಫರ್
  • ಒಟ್ಟು ಖಾಲಿ ಹುದ್ದೆಗಳು: 244
  • ಉದ್ಯೋಗ ಸ್ಥಳ: ಭಾರತದಾದ್ಯಂತ
  • ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ (Online)
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಆಗಸ್ಟ್ 2026 
ಖಾಲಿ ಹುದ್ದೆಗಳ ವಿವರ (Vacancy Details):
  • ಅಸಿಸ್ಟೆಂಟ್ (Assistant): 113 + 17 (ಸ್ವಾಯತ್ತ ಸಂಸ್ಥೆಗಳಲ್ಲಿ)
  • ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ (JPA): 81 + 1 (ಸ್ವಾಯತ್ತ ಸಂಸ್ಥೆಗಳಲ್ಲಿ)
  • ಅಪ್ಪರ್ ಡಿವಿಷನ್ ಕ್ಲರ್ಕ್ (UDC): 22
  • ಸ್ಟೆನೋಗ್ರಾಫರ್ (Stenographer): 10
  • ಒಟ್ಟು ಖಾಲಿ ಹುದ್ದೆಗಳು: 244
ಶೈಕ್ಷಣಿಕ ವಿದ್ಯಾರ್ಹತೆ (Educational Qualification):
  • ಅಸಿಸ್ಟೆಂಟ್ & UDC: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 60% ಅಂಕಗಳೊಂದಿಗೆ (ಅಥವಾ 6.32 CGPA) ಯಾವುದೇ ವಿಷಯದಲ್ಲಿ ಪದವಿ (Graduation) ಪೂರ್ಣಗೊಳಿಸಿರಬೇಕು. ಜೊತೆಗೆ ಗಣಕಯಂತ್ರ (Computer) ಬಳಕೆಯ ಜ್ಞಾನ ಮತ್ತು 1 ವರ್ಷದ ಅನುಭವ ಹೊಂದಿರಬೇಕು.
  • JPA & ಸ್ಟೆನೋಗ್ರಾಫರ್: 60% ಅಂಕಗಳೊಂದಿಗೆ ಪದವಿ ಅಥವಾ ಕಮರ್ಷಿಯಲ್/ಸೆಕ್ರೆಟರಿಯಲ್ ಪ್ರಾಕ್ಟೀಸ್‌ನಲ್ಲಿ ಡಿಪ್ಲೊಮಾ. ಇಂಗ್ಲಿಷ್ ಸ್ಟೆನೋಗ್ರಫಿಯಲ್ಲಿ ನಿಮಿಷಕ್ಕೆ 60 ಪದಗಳ ವೇಗ ಮತ್ತು ಕಂಪ್ಯೂಟರ್ ಜ್ಞಾನ ಇರಬೇಕು.
ವಯೋಮಿತಿ (Age Limit):
  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು: 28 ವರ್ಷಗಳು (16 ಆಗಸ್ಟ್ 2026 ರಂತೆ)
ವಯೋಮಿತಿ ಸಡಿಲಿಕೆ (Age Relaxation):
  • OBC ಅಭ್ಯರ್ಥಿಗಳಿಗೆ: 31 ವರ್ಷಗಳವರೆಗೆ
  • SC / ST ಅಭ್ಯರ್ಥಿಗಳಿಗೆ: 33 ವರ್ಷಗಳವರೆಗೆ
  • ಮಾಜಿ ಸೈನಿಕರು, ಅಂಗವಿಕಲರು (PwBD) ಹಾಗೂ ಸರ್ಕಾರಿ ನೌಕರರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
ವೇತನ ಶ್ರೇಣಿ (Salary Details):
ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ Pay Matrix Level 4 ರಂತೆ ಆರಂಭಿಕ ಮೂಲ ವೇತನ ₹25,500/— ಸಿಗಲಿದೆ. ಇದರ ಜೊತೆಗೆ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ (TA), ವೈದ್ಯಕೀಯ ಸೌಲಭ್ಯ, ಕ್ಯಾಂಟೀನ್ ಸೌಲಭ್ಯ ಹಾಗೂ ಗ್ರೂಪ್ ಇನ್ಶೂರೆನ್ಸ್ ಲಭ್ಯವಿರುತ್ತದೆ.

ಅರ್ಜಿ ಶುಲ್ಕ (Application Fee):
  • ಪ್ರಕ್ರಿಯೆ ಶುಲ್ಕ ₹500.
  • ಮಹಿಳೆಯರು, SC, ST, PwBD ಹಾಗೂ Ex-Servicemen ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ ಹಾಜರಾದ ನಂತರ ಸಂಪೂರ್ಣ ₹500 ಶುಲ್ಕ ಮರುಪಾವತಿಯಾಗಲಿದೆ (Refundable).
  • ಸಾಮಾನ್ಯ/OBC ಅಭ್ಯರ್ಥಿಗಳಿಗೆ ₹100 ಅರ್ಜಿ ಶುಲ್ಕ ಹೊರತುಪಡಿಸಿ ₹400 ಮರುಪಾವತಿಯಾಗುತ್ತದೆ.
ಆಯ್ಕೆ ವಿಧಾನ:
  • ಲಿಖಿತ ಪರೀಕ್ಷೆ (Written Test): 150 ನಿಮಿಷಗಳ ವಸ್ತುನಿಷ್ಠ (Objective) ಮಾದರಿಯ ಪರೀಕ್ಷೆ. 38 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
  • ಸ್ಕಿಲ್ ಟೆಸ್ಟ್ (Skill Test): ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ / ಸ್ಟೆನೋಗ್ರಫಿ ಪರೀಕ್ಷೆ ಇರುತ್ತದೆ (1:5 ಅನುಪಾತದಲ್ಲಿ ಆಯ್ಕೆ).

ಪ್ರಮುಖ ದಿನಾಂಕಗಳು:

  • ಅಧಿಕೃತ ಅಧಿಸೂಚನೆ ಪ್ರಕಟಣೆ (Notification Released): 27 ಜುಲೈ 2026
  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 27 ಜುಲೈ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಆಗಸ್ಟ್ 2026 (ರಾತ್ರಿ 11:59 ರವರೆಗೆ)
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 16 ಆಗಸ್ಟ್ 2026
  • ಲಿಖಿತ ಪರೀಕ್ಷೆ ದಿನಾಂಕ (Written Exam Date): ಶೀಘ್ರದಲ್ಲೇ ಪ್ರಕಟಿಸಲಾಗುವುದು 
ಅರ್ಜಿ ಸಲ್ಲಿಸುವುದು ಹೇಗೆ? (How to Apply):
  • ISRO ಅಧಿಕೃತ ವೆಬ್‌ಸೈಟ್‌ www.isro.gov.in ಗೆ ಭೇಟಿ ನೀಡಿ.
  • 'Careers' / 'Recruitment' ವಿಭಾಗದಲ್ಲಿ ISRO Recruitment 2026 ಲಿಂಕ್‌ ಆಯ್ಕೆಮಾಡಿ.
  • ನಿಮ್ಮ ಇಮೇಲ್ ಹಾಗೂ ಮೊಬೈಲ್ ಸಂಖ್ಯೆ ಬಳಸಿ ನೋಂದಣಿ (Registration) ಮಾಡಿ.
  • ಅರ್ಜಿ ನಮೂನೆಯಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಭಾವಚಿತ್ರ (Photograph), ಸಹಿ (Signature) ಹಾಗೂ ಅಗತ್ಯ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಿ.
  • 'Bharatkosh' ಗೇಟ್‌ವೇ ಮೂಲಕ ಆನ್‌ಲೈನ್ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ (Submit).
  • ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರಿಂಟ್‌ಔಟ್ ತೆಗೆದಿಟ್ಟುಕೊಳ್ಳಿ.
No. of posts:  244
Application End Date:  16 ಆಗಸ್ಟ್ 2026
Employment Type: FULL_TIME
Hiring Organization: ISRO https://www.isro.gov.in/
Work Location: Antariksh Bhavan on New BEL Road, Banglore, KA, 560094
To download official notification
Related Tags: Degree

Comments