ಆಯುಷ್ ಇಲಾಖೆ ಹಾಸನದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಆಯುಷ್ ಇಲಾಖೆ ಹಾಸನದಲ್ಲಿ ಖಾಲಿ ಇರುವ 18 ತಜ್ಞ ವೈದ್ಯರು, ಫಾರ್ಮಾಸಿಸ್ಟ್, ಮಸಾಜಿಸ್ಟ್, ಕ್ಷರಸೂತ್ರ ಅಟೆಂಡರ್ ಹಾಗೂ ಸ್ತ್ರೀರೋಗ ಅಟೆಂಡರ್ ಹುದ್ದೆಗಳನ್ನೊಳಗೊಂಡಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 19 ಏಪ್ರಿಲ್ 2023 ರೊಳಗಾಗಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ : ಜಿಲ್ಲಾ ಆಯುಷ್ ಕಛೇರಿ, ಹಾಸನ
ಹುದ್ದೆಗಳ ವಿವರ : 18
ತಜ್ಞ ವೈದ್ಯರು - 3
ಫಾರ್ಮಾಸಿಸ್ಟ್ - 7
ಮಸಾಜಿಸ್ಟ್ - 3
ಕ್ಷರಸೂತ್ರ ಅಟೆಂಡರ್ - 1
ಸ್ತ್ರೀರೋಗ ಅಟೆಂಡರ್ - 1
ವಿವಿಧೋದ್ದೇಶ ಕೆಲಸಗಾರ - 1
ಸಮುದಾಯ ಆರೋಗ್ಯ ಅಧಿಕಾರಿ (CHO) - 2
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗುವಂತೆ 07 ನೇ ತರಗತಿ/ 10 ನೇ ತರಗತಿ/ BNYS/ BAMS/ MD/ MS/ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹೊಂದಿರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 19-ಏಪ್ರಿಲ್-2023 ಕ್ಕೆ ಅನುಗುಣವಾಗುವಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
* ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು: 05 ವರ್ಷಗಳು
Cat-I/2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗುವಂತೆ ಮಾಸಿಕ ವೇತನ 10300/- ರೂ ಗಳಿಂದ 35000/- ರೂ ಗಳವರೆಗೆ ನೀಡಲಾಗುತ್ತದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments