Loading..!

UAS ಧಾರವಾಡ ನೇಮಕಾತಿ 2025: ಯುವ ವೃತ್ತಿಪರ ಮತ್ತು ಉಪನ್ಯಾಸಕರು ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:30 ಅಕ್ಟೋಬರ್ 2025
Image not found

              ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (UAS ಧಾರವಾಡ)  2025 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 4 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ,ಯುವ ವೃತ್ತಿಪರ ಮತ್ತು ಅರೆಕಾಲಿಕ ಉಪನ್ಯಾಸಕರು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅವಧಿ ಇರದಂತೆ ಅವಧಿಗೂ ಮುನ್ನ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.  


              ಕರ್ನಾಟಕ ಸರ್ಕಾರ ಧಾರವಾಡದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗುವ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ. 


ಧಾರವಾಡದ ಯುಎಎಸ್ ಹುದ್ದೆಯ ಅಧಿಸೂಚನೆ
ಸಂಸ್ಥೆಯ ಹೆಸರು : ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ( UAS ಧಾರವಾಡ )
ಹುದ್ದೆಗಳ ಸಂಖ್ಯೆ: 04
ಉದ್ಯೋಗ ಸ್ಥಳ: ಧಾರವಾಡ – ಕರ್ನಾಟಕ
ಹುದ್ದೆಯ ಹೆಸರು: ಯುವ ವೃತ್ತಿಪರ ಮತ್ತು ಅರೆಕಾಲಿಕ ಉಪನ್ಯಾಸಕರು


ಹುದ್ದೆಗಳ ವಿವರ : 04
ಯುವ ವೃತ್ತಿಪರ : 03
ಅರೆಕಾಲಿಕ ಉಪನ್ಯಾಸಕರು : 01  


ವಿದ್ಯಾರ್ಹತೆ : ಅಭ್ಯರ್ಥಿಗಳು M.Sc ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು. 

ವೇತನ ವಿವರಗಳು:
ಯುವ ವೃತ್ತಿಪರ ಹುದ್ದೆಗಳಿಗೆ : ರೂ.25000/- ಪ್ರತಿ ತಿಂಗಳು
ಅರೆಕಾಲಿಕ ಉಪನ್ಯಾಸಕರು ಹುದ್ದೆಗಳಿಗೆ : ರೂ.40,000/- ಪ್ರತಿ ತಿಂಗಳು


ವಯೋಮಿತಿ :ವಯೋಮಿತಿ UAS ಧಾರವಾಡ ನಿಯಮಗಳ ಪ್ರಕಾರ.


ಆಯ್ಕೆ ವಿಧಾನ:
ದಾಖಲೆ ಪರಿಶೀಲನೆ
ಲಿಖಿತ ಪರೀಕ್ಷೆ
ಸಂದರ್ಶನ


ವಾಕ್-ಇನ್ ಸಂದರ್ಶನದ ವಿವರ : 
🔹ಯುವ ವೃತ್ತಿಪರ ಹುದ್ದೆಗಳು : 
ಸ್ಥಳ :  ಚೇಂಬರ್ ಆಫ್ ಅಸೋಕ್. ಡೈರೆಕ್ಟರ್ ಆಫ್ ರಿಸರ್ಚ್ (ಹೆಚ್ಕ್ಯು), ಕೃಷಿನಗರ, ಧಾರವಾಡ-580005, ಕರ್ನಾಟಕ
ದಿನಾಂಕ: 04-ನವೆಂಬರ್-2025 ಬೆಳಿಗ್ಗೆ 10:00 ಗಂಟೆಗೆ


🔹ಅರೆಕಾಲಿಕ ಉಪನ್ಯಾಸಕರ ಹುದ್ದೆಗಳು : 
ಸ್ಥಳ :  ಡೀನ್(ಕೃಷಿ) ರವರ ಕಛೇರಿ, ಕೃಷಿ ಮಹಾವಿದ್ಯಾಲಯ, ಧಾರವಾಡ
ದಿನಾಂಕ : 11.11.2025 ರಂದು ಬೆಳಿಗ್ಗೆ 11-00 ಗಂಟೆ


            ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಎರಡು ಪ್ರತಿಗಳನ್ನು ಸಂದರ್ಶನದ ಸಮಯದಲ್ಲಿ ತರಲು ತಿಳಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು.


                ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಹಾಜರಾಗಬೇಕು. ಸದರಿ ಸಂದರ್ಶನದಲ್ಲಿ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳು ಸಮನಾದ ಅಂಕಗಳನ್ನು ಪಡೆದಲ್ಲಿ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ತಾತ್ಕಾಲಿಕ ನೇಮಕಾತಿಯಲ್ಲಿ ಪ್ರಾಧ್ಯಾನ್ಯತೆ ನೀಡಲಾಗುವುದು. ಸದರಿ ನೇಮಕಾತಿಯು ತಾತ್ಕಾಲಿಕವಾಗಿರುವುದರಿಂದ ಯಾವುದೇ ಸಮಯದಲ್ಲಿ ಕಾರಣ ತಿಳಿಸದೇ ಕೆಲಸದಿಂದ ತೆಗೆಯಬಹುದು. ಇದು ಕೃಷಿ ವಿಶ್ವವಿದ್ಯಾಲಯದ ಯಾವುದೇ ಖಾಯಂ ನೇಮಕಾತಿ ಹಕ್ಕಿಗೆ ಒಳಪಟ್ಟಿರುವುದಿಲ್ಲ.


ಈ ಅವಕಾಶವು ಕರ್ನಾಟಕದಲ್ಲಿ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತ ಅಭ್ಯರ್ಥಿಗಳಿಗೆ ವಿಶೇಷ ಅವಕಾಶವಾಗಿದೆ. ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. 

Comments