ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (SSC) ನಿಂದ ಸಿ ಹಾಗೂ ಡಿ ಗ್ರೇಡ್ ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ನೇಮಕಾತಿಯಡಿಯಲ್ಲಿ ಒಟ್ಟು 2,123 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 5 ರಂದು ತಿದ್ದುಪಡಿ ಅಧೀನಸ್ಥ ಪರೀಕ್ಷೆ ನಡೆದಿದ್ದು, ದೇಶದಾದ್ಯಾಂತ 9,345 ಅಭ್ಯರ್ಥಿಗಳು ಡಿ ಗ್ರೇಡ್ ಸ್ಟೆನೋಗ್ರಾಫರ್ ಹುದ್ದೆಗಳ ಖಾಲಿ ಸ್ಥಾನಗಳಿಗೆ ಅರ್ಜಿ ಸಲ್ಲಿಸಿದ್ದರು. ಡಿ ಗ್ರೇಡ್ ಹುದ್ದೆಗೆ 26,610 ಅರ್ಹ ಅಭ್ಯರ್ಥಿಗಳಿಂದ ಶಾಲಾ ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ಆರಂಭವಾಗಿತ್ತು.
ಪರೀಕ್ಷೆಯ ಮಾಹಿತಿಗಳು :
- ಈ ನೇಮಕಾತಿ ಸಂಬಂಧಿಸಿ 2024ರ ಮಾರ್ಚ್ 5ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು.
- ಡಿ ಗ್ರೇಡ್ ಸ್ಟೆನೋಗ್ರಾಫರ್ ಹುದ್ದೆಗಳಿಗೆ 9,345 ಅಭ್ಯರ್ಥಿಗಳು ಕೌಶಲ ಪರೀಕ್ಷೆಗೆ ಅರ್ಹರಾಗಿದ್ದರು.
- ಸಿ ಗ್ರೇಡ್ ಸ್ಟೆನೋಗ್ರಾಫರ್ ಹುದ್ದೆಗಾಗಿ 26,610 ಅಭ್ಯರ್ಥಿಗಳು ಪರಿಗಣಿಸಲಾಗಿದ್ದರು
ಅಂತಿಮ ಆಯ್ಕೆ ವಿವರ :
- 2025ರ ಜೂನ್ 27ರಿಂದ ಜುಲೈ 1ರ ವರೆಗೆ ಕೌಶಲ ಪರೀಕ್ಷೆ ನಡೆದಿದ್ದು, ಅದರ ಆಧಾರದಲ್ಲಿ:
- ಡಿ ಗ್ರೇಡ್ ಹುದ್ದೆಗಳಿಗೆ 215 ಅಭ್ಯರ್ಥಿಗಳನ್ನೂ ಆಯ್ಕೆ ಮಾಡಲಾಗಿದೆ.
- ಸಿ ಗ್ರೇಡ್ ಹುದ್ದೆಗಳಿಗೆ 1,908 ಅಭ್ಯರ್ಥಿಗಳು ಒಟ್ಟು 2,123 ಅಭ್ಯರ್ಥಿಗಳು ನೇಮಕಾತಿಗೆ ಶಿಫಾರಸುಗೊಂಡಿದ್ದಾರೆ.
ಇತರ ವಿವರಗಳು :
* ನಾಲ್ವರು ಅಭ್ಯರ್ಥಿಗಳ ಅರ್ಜಿ ರದ್ದುಪಡಿಸಲಾಗಿದ್ದು,
* ಇನ್ನೂ 58 ಅಭ್ಯರ್ಥಿಗಳ ಫಲಿತಾಂಶವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ಎಸ್‌ಎಸ್‌ಸಿ ಪ್ರಕಟಣೆ ತಿಳಿಸಿದೆ.
* ಆಯಾ ವಿಭಾಗಗಳಿಗೆ ನಿಗದಿಯಾದ ಕಟ್-ಆಫ್ ಅಂಕಗಳ ಮಾಹಿತಿಯನ್ನು ಕೂಡ ಎಸ್‌ಎಸ್‌ಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
- ಈ ನೇಮಕಾತಿಯಿಂದ ರಾಷ್ಟ್ರದ ವಿವಿಧ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಸ್ಪಷ್ಟ ಬರವಸೆಯೊಂದಿಗೆ ಉದ್ಯೋಗದ ಅವಕಾಶ ಪಡೆಯಲಿರುವ ಅಭ್ಯರ್ಥಿಗಳಿಗೆ ಇದು ಮಹತ್ವದ ಹೆಜ್ಜೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ವಿಭಾಗವಾರು ವಿವರಗಳಿಗಾಗಿ ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
Comments