ಫಾರ್ಮಾಸ್ಯುಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (PMBI) ಸಂಸ್ಥೆಯಲ್ಲಿ ಖಾಲಿ ಇರುವ 34 ಡಿಪ್ಯೂಟಿಯ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್, ಅಸಿಸ್ಟಂಟ್ ಮ್ಯಾನೇಜರ್, ಎಕ್ಸಿಕ್ಯೂಟಿವ್ ಮತ್ತು ಮಾರ್ಕೆಟಿಂಗ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025 ಜನವರಿ 31 ರಿಂದ 2025 ಫೆಬ್ರವರಿ 28 ರವರೆಗೆ PMBI ಅಧಿಕೃತ ವೆಬ್‌ಸೈಟ್ (https://janaushadhi.gov.in/) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ : 34
- Deputy Chief Executive Officer : 1
- Assistant Manager (Sales & Marketing): 04
- Marketing Officer/Executive (Sales & Marketing) : 09
- Assistant Manager (Procurement) : 2
- Executive (Procurement) : 05
- Assistant Manager (Quality) : 03
- Executive (Finance & Accounts) : 06
- Assistant Manager (IT & MIS) : 03
- Assistant Manager (HR & Admin) : 1
ಅರ್ಹತೆ :
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ, ಬಿ.ಎಸ್ಸಿ, ಎಂ.ಎಸ್ಸಿ, ಬಿ.ಟೆಕ್, ಎಂ.ಟೆಕ್, ಬಿ.ಫಾರ್ಮಾ, ಬಿಸಿಎ, ಎಂಸಿಎ, ಎಂಬಿಎ, ಎಂ.ಫಾರ್ಮಾ ಮುಂತಾದ ವಿದ್ಯಾರ್ಹತೆಗಳನ್ನು ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯಸ್ಸು 54 ವರ್ಷವಾಗಿರಬೇಕು.
ಅರ್ಜಿಶುಲ್ಕ:
ನೇಮಕಾತಿಗೆ ಯಾವುದೇ ಅರ್ಜಿಶುಲ್ಕವಿಲ್ಲ.
ವೇತನ ಶ್ರೇಣಿ:
ಮಾಸಿಕ ವೇತನ ₹30,000 ರಿಂದ ₹1,25,000 ವರೆಗೆ ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿಸಲ್ಲಿಸುವ ಕ್ರಮ:
1. MBI ಅಧಿಕೃತ ವೆಬ್‌ಸೈಟ್ (https://janaushadhi.gov.in/) ಗೆ ಭೇಟಿ ನೀಡಿ.
2. ನೇಮಕಾತಿ ವಿಭಾಗದಲ್ಲಿ ಕಾರ್ಯನಿರ್ವಾಹಕ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳ ಅಧಿಸೂಚನೆಯನ್ನು ಪರಿಶೀಲಿಸಿ.
3. ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆಯನ್ನು ಪರಿಶೀಲಿಸಿ.
4. ಅರ್ಜಿ ನಮೂನೆಯನ್ನು ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡಿ.
5. ಅರ್ಜಿಯನ್ನು ಸಲ್ಲಿಸಿ, ಅರ್ಜಿ ಸಂಖ್ಯೆಯನ್ನು ಸುರಕ್ಷಿತವಾಗಿಡಿ.
ಪ್ರಮುಖ ದಿನಾಂಕಗಳು:
- ಅನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 31-01-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-02-2025
Comments