ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ತನ್ನ ಅಧಿಕೃತ ಅಧಿಸೂಚನೆಯ ಮೂಲಕ 08 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಭಾರತ ಸರ್ಕಾರದ ಸೇವೆಗೆ ಆಸಕ್ತರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು03 ಮಾರ್ಚ್ 2025ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
ಸಂಸ್ಥೆ : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)
ಒಟ್ಟು ಹುದ್ದೆಗಳು : 08
ಹುದ್ದೆಯ ಹೆಸರು: ಹಿರಿಯ ವೈಜ್ಞಾನಿಕ ಸಹಾಯಕ, ಖಾತೆಗಳ ಅಧಿಕಾರಿ ಮತ್ತು ಇತರ ಹುದ್ದೆಗಳು
ಹುದ್ದೆಗಳ ಸಂಖ್ಯೆ
ಕಾನೂನು ಅಧಿಕಾರಿ - 1
ಖಾತೆಗಳ ಅಧಿಕಾರಿ - 1
ಸಹಾಯಕ ಖಾತೆಗಳ ಅಧಿಕಾರಿ - 1
ಹಿರಿಯ ತಾಂತ್ರಿಕ ಮೇಲ್ವಿಚಾರಕ - 2
ಹಿರಿಯ ವೈಜ್ಞಾನಿಕ ಸಹಾಯಕ - 3
ಅರ್ಹತಾ ಮಾನದಂಡಗಳು :
- ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.
ವಯೋಮಿತಿ :
ಅರ್ಜಿದಾರರ ಗರಿಷ್ಠ ವಯಸ್ಸು 03-03-2025 ರ ವೇಳೆಗೆ 56 ವರ್ಷ ಮೀರಿರಬಾರದು.
ವಯೋಮಿತಿಗೆ ವಿನಾಯಿತಿ :
CPCB ನಿಯಮಾನುಸಾರ ಸರ್ಕಾರದ ಮಾರ್ಗದರ್ಶಿಯಂತೆ ವಯೋಮಿತಿಯಲ್ಲಿ ವಿನಾಯಿತಿ ದೊರೆಯಲಿದೆ.
ಆಯ್ಕೆ ಪ್ರಕ್ರಿಯೆ :
- ಲಿಖಿತ ಪರೀಕ್ಷೆ
- ಸಂದರ್ಶನ
ವೇತನ ವಿವರ:
ಕಾನೂನು ಅಧಿಕಾರಿ ಹುದ್ದೆಗೆ ರೂ.67,700-2,08,700/-
ಖಾತೆಗಳ ಅಧಿಕಾರಿ ಹುದ್ದೆಗೆ ರೂ.44,900-1,42,400/-
ಸಹಾಯಕ ಖಾತೆಗಳ ಅಧಿಕಾರಿ, ಹಿರಿಯ ತಾಂತ್ರಿಕ ಮೇಲ್ವಿಚಾರಕ, ಹಿರಿಯ ವೈಜ್ಞಾನಿಕ ಸಹಾಯಕ ಹುದ್ದೆಗೆ ರೂ.35,400-1,12,400/-
ಅರ್ಜಿಯ ವಿಧಾನ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
ವಿಳಾಸ :
Administrative Officer (Recruitment), Central Pollution Control Board,
“Parivesh Bhawan”, East Arjun Nagar, Shahdara, Delhi-110032
ಪ್ರಮುಖ ದಿನಾಂಕಗಳು :
- ಅರ್ಜಿಯ ಪ್ರಾರಂಭ ದಿನಾಂಕ : 03-02-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-03-2025
ಹೆಚ್ಚಿನ ಮಾಹಿತಿಗಾಗಿ CPCB ಅಧಿಕೃತ ವೆಬ್‌ಸೈಟ್‌ನಲ್ಲಿ ಭೇಟಿ ನೀಡಬಹುದು.
Comments