ನಿಮ್ಹಾನ್ಸ್ (NIMHANS) ನಲ್ಲಿ ನೇಮಕಾತಿ 2026: ಎಂಬಿಬಿಎಸ್ (MBBS) ಪದವೀಧರರಿಗೆ ಬೆಂಗಳೂರಿನಲ್ಲಿ ಉದ್ಯೋಗಾವಕಾಶ! ತಿಂಗಳಿಗೆ ₹40,000 ವೇತನ.
Published by: Yallamma G | Date:8 ಎಪ್ರಿಲ್ 2026

ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ (MBBS) ಪದವಿ ಪಡೆದು ಉತ್ತಮ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಬೆಂಗಳೂರಿನ ಪ್ರತಿಷ್ಠಿತ 'ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ' (NIMHANS) ಸಿಹಿಸುದ್ದಿ ನೀಡಿದೆ. ನಿಮ್ಹಾನ್ಸ್‌ನಲ್ಲಿ ಖಾಲಿ ಇರುವ"ರಿಸರ್ಚ್ ಆಫೀಸರ್" (Research Officer) ಹುದ್ದೆಯನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ವಾಕ್-ಇನ್-ಸಂದರ್ಶನಕ್ಕೆ (Walk-in Interview) ಆಹ್ವಾನಿಸಲಾಗಿದೆ.
ಈ ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲಿದ್ದು, ಲಂಡನ್‌ನ ಯುಸಿಎಲ್ (UCL) ಅನುದಾನಿತ "ಟಾರ್ಗೆಟ್ ಎಎಲ್ಎಸ್ ಗ್ಲೋಬಲ್ ನ್ಯಾಚುರಲ್ ಹಿಸ್ಟರಿ ಸ್ಟಡಿ" ಪ್ರಾಜೆಕ್ಟ್ ಅಡಿಯಲ್ಲಿ ಈ ನೇಮಕಾತಿ ನಡೆಯಲಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ಓದಿ, ಸಂದರ್ಶನಕ್ಕೆ ಹಾಜರಾಗಬಹುದು.
Officel ವೆಬ್‌ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
ಹುದ್ದೆಯ ಸಂಪೂರ್ಣ ವಿವರಗಳು (Job Highlights)
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (Written Test) ಹಾಗೂ ಕೌಶಲ್ಯ ಪರೀಕ್ಷೆ/ಸಂದರ್ಶನದ (Skill test/Interview) ಮೂಲಕ ಆಯ್ಕೆ ಮಾಡಲಾಗುತ್ತದೆ.
ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 50% ಅಂಕಗಳನ್ನು ಪಡೆದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ಕೌಶಲ್ಯ ಪರೀಕ್ಷೆ ಅಥವಾ ಸಂದರ್ಶನಕ್ಕೆ ಅರ್ಹತೆ ಪಡೆಯುತ್ತಾರೆ.
ವಾಕ್-ಇನ್-ಸಂದರ್ಶನದ ವಿವರಗಳು (Walk-in Interview Details)
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ (Resume), ಮೂಲ ದಾಖಲೆಗಳು ಮತ್ತು ಸ್ವಯಂ-ದೃಢೀಕರಿಸಿದ (Self-attested) ದಾಖಲೆಗಳ ಜೆರಾಕ್ಸ್ ಪ್ರತಿಯೊಂದಿಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬೇಕು.
ಅಭ್ಯರ್ಥಿಗಳ ಗಮನಕ್ಕೆ ಪ್ರಮುಖ ಸೂಚನೆಗಳು:

- ಸಂಸ್ಥೆಯ ಹೆಸರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS), ಬೆಂಗಳೂರು.
- ಹುದ್ದೆಯ ಹೆಸರು: ರಿಸರ್ಚ್ ಆಫೀಸರ್ (Research Officer).
- ಒಟ್ಟು ಹುದ್ದೆಗಳು: 1 (ಒಂದು).
- ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ MBBS ಪದವಿ ಪೂರ್ಣಗೊಳಿಸಿರಬೇಕು.
- ಮಾಸಿಕ ವೇತನ: ಆಯ್ಕೆಯಾಗುವ ಅಭ್ಯರ್ಥಿಗೆ ತಿಂಗಳಿಗೆ ರೂ. 40,000/- (Consolidated) ನಿಗದಿತ ವೇತನ ನೀಡಲಾಗುವುದು.
- ವಯೋಮಿತಿ: ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷ ಮೀರಿರಬಾರದು.
- ಉದ್ಯೋಗದ ಅವಧಿ: ಆರಂಭಿಕವಾಗಿ 6 ತಿಂಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಪ್ರಾಜೆಕ್ಟ್ ಮುಗಿಯುವವರೆಗೆ ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಪ್ರತಿ 6 ತಿಂಗಳಿಗೊಮ್ಮೆ ಅವಧಿಯನ್ನು ವಿಸ್ತರಿಸಲಾಗುತ್ತದೆ.
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (Written Test) ಹಾಗೂ ಕೌಶಲ್ಯ ಪರೀಕ್ಷೆ/ಸಂದರ್ಶನದ (Skill test/Interview) ಮೂಲಕ ಆಯ್ಕೆ ಮಾಡಲಾಗುತ್ತದೆ.
ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 50% ಅಂಕಗಳನ್ನು ಪಡೆದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ಕೌಶಲ್ಯ ಪರೀಕ್ಷೆ ಅಥವಾ ಸಂದರ್ಶನಕ್ಕೆ ಅರ್ಹತೆ ಪಡೆಯುತ್ತಾರೆ.
ವಾಕ್-ಇನ್-ಸಂದರ್ಶನದ ವಿವರಗಳು (Walk-in Interview Details)
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ (Resume), ಮೂಲ ದಾಖಲೆಗಳು ಮತ್ತು ಸ್ವಯಂ-ದೃಢೀಕರಿಸಿದ (Self-attested) ದಾಖಲೆಗಳ ಜೆರಾಕ್ಸ್ ಪ್ರತಿಯೊಂದಿಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬೇಕು.
- ಸಂದರ್ಶನದ ದಿನಾಂಕ: 21 ಏಪ್ರಿಲ್ 2026.
- ಸಮಯ: ಮಧ್ಯಾಹ್ನ 2:30 ಕ್ಕೆ. (ಸೂಚನೆ: ಲಿಖಿತ ಪರೀಕ್ಷೆ/ಸಂದರ್ಶನ ಪ್ರಾರಂಭವಾಗುವ 30 ನಿಮಿಷಗಳ ಮೊದಲು ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ).
- ಸ್ಥಳ: ಲೆಕ್ಚರ್ ಹಾಲ್-1, 1ನೇ ಮಹಡಿ, ನ್ಯೂರೋಫಿಸಿಯಾಲಜಿ ವಿಭಾಗದ ಪಕ್ಕ, ಹಳೆಯ ಆಡಳಿತ ಭವನ, ನಿಮ್ಹಾನ್ಸ್ (NIMHANS), ಬೆಂಗಳೂರು - 560029.
ಅಭ್ಯರ್ಥಿಗಳ ಗಮನಕ್ಕೆ ಪ್ರಮುಖ ಸೂಚನೆಗಳು:
- ಸಂದರ್ಶನಕ್ಕೆ ಹಾಜರಾಗಲು ಯಾವುದೇ ಪ್ರಯಾಣ ಭತ್ಯೆ (TA/DA) ನೀಡಲಾಗುವುದಿಲ್ಲ.
- ಈಗಾಗಲೇ ನಿಮ್ಹಾನ್ಸ್ ನ ಇತರ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳು ತಮ್ಮ ಪ್ರಿನ್ಸಿಪಾಲ್ ಇನ್ವೆಸ್ಟಿಗೇಟರ್ ಅವರಿಂದ 'ನಿರಾಕ್ಷೇಪಣಾ ಪ್ರಮಾಣಪತ್ರ' (NOC - No Objection Certificate) ತರುವುದು ಕಡ್ಡಾಯವಾಗಿದೆ.
- ನಿಗದಿತ ವಿದ್ಯಾರ್ಹತೆ ಹೊಂದಿದ್ದ ಮಾತ್ರಕ್ಕೆ ಆಯ್ಕೆ ಖಚಿತ ಎಂದು ಭಾವಿಸಬಾರದು; ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಪೂರ್ಣ ಹಕ್ಕು ಸಂಸ್ಥೆಗೆ ಸೇರಿದೆ.

Comments