Loading..!

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:18 ಜುಲೈ 2025
Image not found

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ಬೆಂಗಳೂರು,  ಔಟ್ರೀಚ್ ಸಂಯೋಜಕ ಮತ್ತು ಪ್ರಾಜೆಕ್ಟ್ ಟೆಕ್ನಿಕಲ್ ಸಪೋರ್ಟ್ - III ಹುದ್ದೆಗಳಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಯು ಕರ್ನಾಟಕದ ಬೆಂಗಳೂರುಯಲ್ಲಿ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ್ದು, ಶೈಕ್ಷಣಿಕ ಅರ್ಹತೆ, ವೇತನ, ಆಯ್ಕೆ ವಿಧಾನ ಹಾಗೂ ಅರ್ಜಿ ಸಲ್ಲಿಕೆಯ ಎಲ್ಲಾ ಮಾಹಿತಿಯನ್ನು ನಿಮಗಾಗಿ ನೀಡಲಾಗಿದೆ.


ಹುದ್ದೆಯ ವಿವರ :
ಸಂಸ್ಥೆಯ ಹೆಸರು : ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ( ನಿಮ್ಹಾನ್ಸ್ )
ಹುದ್ದೆಗಳ ಸಂಖ್ಯೆ: 02
ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
ಹುದ್ದೆ ಹೆಸರು: ಔಟ್ರೀಚ್ ಸಂಯೋಜಕ , ಪ್ರಾಜೆಕ್ಟ್ ತಾಂತ್ರಿಕ ಬೆಂಬಲ - III
ಸಂಬಳ: ತಿಂಗಳಿಗೆ ರೂ.28000/-


ಅರ್ಹತೆಗಳು :
* ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಹುದ್ದೆಗಳಿಗೆ ಅನುಗುಣವಾಗಿ ಪದವಿ, ಸ್ನಾತಕೋತ್ತರ ಪದವಿ ಹೊಂದಿರಬೇಕು.
* ಗರಿಷ್ಠ ವಯೋಮಿತಿ 35 ವರ್ಷ


ಆಯ್ಕೆ ವಿಧಾನ :
ಲಿಖಿತ/ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಅಡಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.


ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಗಳು ಈ ಹುದ್ದೆಗೆ ಇಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದುವುದು ಅಗತ್ಯ.


ಅಗತ್ಯ ದಾಖಲೆಗಳು : ರೆಸ್ಯೂಮ್, ವಯೋಮಿತಿ ದಾಖಲೆ, ಶೈಕ್ಷಣಿಕ ಪ್ರಮಾಣ ಪತ್ರಗಳ ಪ್ರತಿಗಳು ಅರ್ಜಿಯನ್ನು ಅಂಚೆ ಕಚೇರಿಯ ಮೂಲಕ ಕಳುಹಿಸಬೇಕು. 


ಅರ್ಜಿ ಸಲ್ಲಿಸುವ ವಿಳಾಸ : 
ಉಪನ್ಯಾಸ ಸಭಾಂಗಣ, 1 ನೇ ಮಹಡಿ, ಹಳೆಯ ಆಡಳಿತ ಬ್ಲಾಕ್, ನಿಮ್ಹಾನ್ಸ್, ಬೆಂಗಳೂರು-29 


ಪ್ರಮುಖ ದಿನಾಂಕಗಳು :
ಔಟ್ರೀಚ್ ಸಂಯೋಜಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 31-ಜುಲೈ-2025 

ಪ್ರಾಜೆಕ್ಟ್ ಟೆಕ್ನಿಕಲ್ ಸಪೋರ್ಟ್ - III ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 02-ಆಗಸ್ಟ್-2025 


- ಸರ್ಕಾರಿ ನೌಕರಿಯ ಆಸೆ ಇರುವ ಬಿ.ಎಸ್ಸಿ ಪದವಿದಾರರು ಈ ಅವಕಾಶವನ್ನು ಬಳಸಿಕೊಳ್ಳಿ!


ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದುವುದು ಅವಶ್ಯಕ.

Comments