Loading..!

KSRLPS ನೇಮಕಾತಿ 2026: ವಿಜಯನಗರ ಜಿಲ್ಲೆಯ 'ಸಂಜೀವಿನಿ' ಯೋಜನೆಯಲ್ಲಿ ವಿವಿಧ ಹುದ್ದೆಗಳ ಭರ್ತಿ; ಇಂದೇ ಅರ್ಜಿ ಸಲ್ಲಿಸಿ!
Published by: Yallamma G | Date:26 ಮೇ 2026
not found
KSRLPS ನೇಮಕಾತಿ 2026: ಕರ್ನಾಟಕ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM) ಅಥವಾ 'ಸಂಜೀವಿನಿ' (KSRLPS) ಯೋಜನೆಯಡಿ ಗ್ರಾಮೀಣ ಸಮುದಾಯಗಳಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈ ಅಧಿಸೂಚನೆ ಹೊರಡಿಸಲಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ.  

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ಈ ಯೋಜನೆಯಲ್ಲಿ, ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ಆಸಕ್ತಿ ಇದ್ದರೆ, ಈ ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮತ್ತು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರ (Vacancy Details)
ಒಟ್ಟು 5 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ವಿಜಯನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ನೇಮಕಾತಿ ನಡೆಯಲಿದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ:



ಶೈಕ್ಷಣಿಕ ಅರ್ಹತೆ: KSRLPS ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಸ್ನಾತಕೋತ್ತರ ಪದವಿ / ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.
  • ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು : ಸ್ನಾತಕೋತ್ತರ ಪದವಿ/ ಡಿಪ್ಲೊಮಾ
  • ಕ್ಲಸ್ಟರ್ ಮೇಲ್ವಿಚಾರಕರು : ಪದವಿ ಪ್ರದಾನ
  • ಡಿಇಒ/ ಎಂಐಎಸ್ ಸಂಯೋಜಕರು : ಪದವಿ, ಸ್ನಾತಕೋತ್ತರ ಪದವಿ
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವೇತನ ವಿವರಗಳು : 

  • ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು : ನಿಯಮಗಳ ಪ್ರಕಾರ
  • ಕ್ಲಸ್ಟರ್ ಮೇಲ್ವಿಚಾರಕರು : ರೂ. 18,000/-
  • ಡಿಇಒ/ ಎಂಐಎಸ್ ಸಂಯೋಜಕರು : ರೂ. 20,500/-
ವಯಸ್ಸಿನ ಮಿತಿ : 
  • ವಯೋಮಿತಿ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 01-06-2026 ರಂತೆ 45 ವರ್ಷಗಳು.
  • ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು : ಗರಿಷ್ಠ - 45
  • ಕ್ಲಸ್ಟರ್ ಮೇಲ್ವಿಚಾರಕರು ಮತ್ತು ಡಿಇಒ/ ಎಂಐಎಸ್ ಸಂಯೋಜಕರು : ನಿಯಮಗಳ ಪ್ರಕಾರ
  • ವಯೋಮಿತಿ ಸಡಿಲಿಕೆ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಘದ ನಿಯಮಗಳ ಪ್ರಕಾರ
ಅರ್ಜಿ ಸಲ್ಲಿಸುವುದು ಹೇಗೆ? (How to Apply?)
  1. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು NRLM ನ ಅಧಿಕೃತ ಉದ್ಯೋಗ ಪೋರ್ಟಲ್ https://jobsksrlps.karnataka.gov.in ಗೆ ಭೇಟಿ ನೀಡಬೇಕು.  
  2. ಮುಖಪುಟದಲ್ಲಿ "Register" ಅಥವಾ "Sign In" ಆಯ್ಕೆಯನ್ನು ಬಳಸಿ ನಿಮ್ಮ ಖಾತೆಯನ್ನು ಲಾಗಿನ್ ಮಾಡಿ.  
  3. "Available Job Openings" ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಹುದ್ದೆಗಳನ್ನು ಹುಡುಕಿ.  
  4. ನಿಮ್ಮ ವಿದ್ಯಾರ್ಹತೆ ಮತ್ತು ಆಸಕ್ತಿಗೆ ತಕ್ಕಂತೆ ಹುದ್ದೆಯ ಪಕ್ಕದಲ್ಲಿರುವ "Details" ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿ ಓದಿ, ನಂತರ "Apply" ಬಟನ್ ಒತ್ತಿ ನಿಮ್ಮ ಅರ್ಜಿಯನ್ನು ಸಲ್ಲಿಸಿ. 
ಪ್ರಮುಖ ದಿನಾಂಕಗಳು (Important Dates)
  • ಅರ್ಜಿ ಸಲ್ಲಿಸಲು ಕಾಲಾವಕಾಶ ಬಹಳ ಸೀಮಿತವಾಗಿದ್ದು (ಕೇವಲ 6 ದಿನಗಳು ಬಾಕಿ ಉಳಿದಿವೆ), ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಶೀಘ್ರವಾಗಿ ಅರ್ಜಿ ಸಲ್ಲಿಸುವುದು ಸೂಕ್ತ.  
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11-May-2026 (DEO ಹುದ್ದೆಗೆ) & 12-May-2026 (ಇತರೆ ಹುದ್ದೆಗಳಿಗೆ)   
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-May-2026   

    ಇಂತಹ ಮತ್ತಷ್ಟು ಉದ್ಯೋಗ ಮಾಹಿತಿಗಾಗಿ ಇಂದೇ 'KPSCVaani' ಆಪ್ ಡೌನ್‌ಲೋಡ್ ಮಾಡಿ!

Comments