ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL)ದಲ್ಲಿನಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳ ನೇಮಕಾತಿಗಾಗಿ 14/10/2024 ರಂದು ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಇದೀಗ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವು ಕಿರಿಯ ಸ್ಟೇಷನ್ ಪರಿಚಾರಕ (ಕೆ.ಕೆ.) ಮತ್ತು ಕಿರಿಯ ಪವರ್‌ಮ್ಯಾನ್ (ಕೆ.ಕೆ.) ಹುದ್ದೆಗಳಿಗೆ ಕಟ್-ಆಫ್ (Cut-Off) ಅಂಕಗಳೊಂದಿಗೆ ಅಂತಿಮ ಆಯ್ಕೆ ಪಟ್ಟಿಗಳನ್ನು ಹಾಗೂ ಕಿರಿಯ ಸ್ಟೇಷನ್ ಪರಿಚಾರಕ (ಎನ್.ಕೆ.ಕೆ.) ಮತ್ತು ಕಿರಿಯ ಪವರ್‌ಮ್ಯಾನ್ (ಎನ್.ಕೆ.ಕೆ.) ಹುದ್ದೆಗಳಿಗೆ ಕಟ್-ಆಫ್ (Cut-Off) ಅಂಕಗಳೊಂದಿಗೆ ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಇಲಾಖಾ ಜಾಲತಾಣದಲ್ಲಿ ಪ್ರಕಟಿಸಿದೆ.
🌐 ಪ್ರಕಟಣೆ ಲಭ್ಯತೆ:
ಅಭ್ಯರ್ಥಿಗಳು Cut-Off ಅಂಕಗಳ ಸಂಪೂರ್ಣ ವಿವರವನ್ನು KPTCL ನ ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ:
🔗 https://kptcl.karnataka.gov.in
Comments