ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ನೇಮಕಾತಿಗಳ ಆಯ್ಕೆ ಪಟ್ಟಿಗಳು ಪ್ರಕಟ
Published by: Yallamma G | Date:27 ಮೇ 2022

ಕರ್ನಾಟಕ ಲೋಕಸೇವಾ ಆಯೋಗವು ಆಯುರ್ವೇದ/ಹೋಮಿಯೋಪತಿ ಪ್ರಾಧ್ಯಾಪಕ ಹಾಗೂ ಸಹ ಪ್ರಾಧ್ಯಾಪಕ, ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಆಯುಕ್ತಾಲಯದಲ್ಲಿನ ಹುದ್ದೆಗಳು, ವಿವಿಧ ಇಲಾಖೆಗಳ ನ್ಯಾಯಾಂಗ ಘಟಕಗಳಲ್ಲಿನ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು ಹಾಗೂ ಆಯುಷ್ ಇಲಾಖೆಯಲ್ಲಿನ ಶುಶ್ರೂಷಕ ಹುದ್ದೆಗಳು ಸೇರಿದಂತೆ ವಿವಿಧ ನೇಮಕಾತಿಗಳಿಗೆ ಸಂಬಂದಿಸಿದ ತಾತ್ಕಾಲಿಕ ಆಯ್ಕೆಪಟ್ಟಿ, ಅಂತಿಮ ಆಯ್ಕೆಪಟ್ಟಿ, ಹೆಚ್ಚುವರಿ ಆಯ್ಕೆಪಟ್ಟಿ ಮತ್ತು ಕಟ್ ಆಫ್ ಅಂಕಗಳು ಹಾಗೂ ಅರ್ಹತಾ ಪಟ್ಟಿಗಳನ್ನು KPSCಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.
- ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

Comments