Loading..!

KPSC ಯಿಂದ ವಿವಿಧ ನೇಮಕಾತಿಗಳ ಆಯ್ಕೆಪಟ್ಟಿಗಳ ಪ್ರಕಟಣೆಯ ಕುರಿತು ಇತ್ತೀಚಿನ ಮಾಹಿತಿ ನಿಮಗಾಗಿ
Published by: Basavaraj Halli | Date:1 ಜೂನ್ 2022
Image not found
ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ವಿಳಂಬ ನೀತಿಯನ್ನು ಖಂಡಿಸಿ ಶಾಸಕರಾದ ಸುರೇಶ್ ಕುಮಾರ್ ಇವರು ಇತ್ತೀಚೆಗೆ ನೂರಾರು ಉದ್ಯೋಗ ಆಕಾಂಕ್ಷಿಗಳೊಂದಿಗೆ KPSC ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು, ಇದೇ ಸಮಯದಲ್ಲಿ KPSC ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತನಾಡಿ ವಿವಿಧ ನೇಮಕಾತಿಗಳು ಆಯ್ಕೆ ಪಟ್ಟಿಗಳ ಕುರಿತು ಮಾಹಿತಿಯನ್ನು ಪಡೆದರು, ಅವುಗಳ ವಿವರ ಈ ಕೆಳಗಿನಂತಿರುತ್ತದೆ. 

* 2021 ಸಾಲಿನ 106 ಕೆಎಎಸ್ ಹುದ್ದೆಗಳಿಗೆ ಸಂಬಂಧಿಸಿದಂತೆ ಮುಖ್ಯ ಪರೀಕ್ಷೆಯ 1:3 ಅನುಪಾತದ ಆಯ್ಕೆಪಟ್ಟಿಯನ್ನು ಜೂನ್ ತಿಂಗಳ ಅಂತ್ಯದೊಳಗಾಗಿ ಅಧಿಕೃತವಾಗಿ ಪ್ರಕಟಿಸಲಾಗುವುದು. 

* 150 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ ಮುಂದಿನ ಕೇವಲ ಹತ್ತು ದಿನಗಳಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇರುತ್ತದೆ. 

* 1136 ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಜೂನ್ 10 ರೊಳಗಡೆ ಪ್ರಕಟಿಸಲಾಗುವುದು. 

* ಮೊರಾರ್ಜಿ ಶಾಲೆಯ ಚಿತ್ರಕಲಾ ಶಿಕ್ಷಕರ ಹುದ್ದೆಗಳಿಗೆ 15 ದಿನಗಳಲ್ಲಿ ಅಂತಿಮ ಆಯ್ಕೆ ಪಟ್ಟಿ 

* ದ್ವಿತೀಯ ದರ್ಜೆ ಸಹಾಯಕರ 1373 ಹುದ್ದೆಗಳಿಗೆ ಬರುವ 45 ದಿನಗಳೊಳಗಾಗಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು. 

* ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರರು ಗ್ರೇಡ್-1 ಮತ್ತು ಸಹಾಯಕ ಅಭಿಯಂತರರು 990 ಹುದ್ದೆಗಳ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು ಶೀಘ್ರದಲ್ಲೇ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದೆಂದು ಆಯೋಗದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದಿರುವುದಾಗಿ ಶಾಸಕ ಸುರೇಶ್ ಕುಮಾರ್ ಅವರು ಇತ್ತೀಚೆಗೆ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡುತ್ತಾರೆ. 

ಈ ಎಲ್ಲ ನೇಮಕಾತಿಗಳಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ಕೆಲವೇ ದಿನಗಳಲ್ಲಿ ತಮ್ಮ ಆಯ್ಕೆ ಪಟ್ಟಿಗಳನ್ನು ನಿರೀಕ್ಷಿಸಬಹುದಾಗಿರುತ್ತದೆ ಈ ಕುರಿತು ಪ್ರತಿನಿತ್ಯದ ಮಾಹಿತಿಗಳಿಗಾಗಿ ಇಲಾಖೆಯ ಜಾಲತಾಣ ಅಥವಾ KPSCVaani App ಮೂಲಕ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ.

Comments

Jagadeesh Nayak ಜೂನ್ 1, 2022, 11:02 ಪೂರ್ವಾಹ್ನ
Jyoti Chincholi ಜೂನ್ 1, 2022, 7:25 ಅಪರಾಹ್ನ