Loading..!

KPSC ಜುಲೈ ನೇಮಕಾತಿ ಧಮಾಕಾ: FDA, SDA ಸೇರಿ 1000+ ಹುದ್ದೆಗಳ ಅರ್ಜಿಗೆ ಸರಣಿ ಅಧಿಸೂಚನೆ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
Published by: Yallamma G | Date:29 ಜೂನ್ 2026
not found
ಸರಕಾರಿ ಉದ್ಯೋಗದ ಕನಸು ಕಾಣುತ್ತಿರುವ ರಾಜ್ಯದ ಯುವಜನತೆಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಭರ್ಜರಿ ಸಿಹಿಸುದ್ದಿ ನೀಡಿದೆ. ಜುಲೈ ತಿಂಗಳಿನಲ್ಲಿ ಸಾವಿರಕ್ಕೂ ಅಧಿಕ ವಿವಿಧ ಹುದ್ದೆಗಳ ನೇಮಕಾತಿಗೆ ಸರಣಿ ಅಧಿಸೂಚನೆಗಳನ್ನು ಹೊರಡಿಸಲು ಆಯೋಗವು ಎಲ್ಲಾ ರೀತಿಯ ನೀಲನಕ್ಷೆ ಹಾಗೂ ಸಿದ್ಧತೆಗಳನ್ನು ಮಾಡಿಕೊಂಡಿದೆ.

ನಿಗದಿತ ವೇಳಾಪಟ್ಟಿಯಂತೆ ಕಾಲಮಿತಿಯಲ್ಲಿ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ತನ್ನ ಮೇಲಿರುವ 'ವಿಳಂಬ ನೇಮಕಾತಿ' ಎಂಬ ಕಳಂಕವನ್ನು ತೊಡೆದುಹಾಕಲು KPSC ಮುಂದಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಬಾರಿ ಅಭ್ಯರ್ಥಿಗಳಿಗೆ ಹಲವು ಪ್ರಮುಖ ಬದಲಾವಣೆಗಳು ಹಾಗೂ ಬಂಪರ್ ಅವಕಾಶಗಳು ಕಾಯುತ್ತಿವೆ.

ಪ್ರಮುಖ ಮುಖ್ಯಾಂಶಗಳು (Highlights)
  • ಒಟ್ಟು ಹುದ್ದೆಗಳು: 1000 ಕ್ಕೂ ಹೆಚ್ಚು ಹುದ್ದೆಗಳು.
  • ಪ್ರಮುಖ ಹುದ್ದೆಗಳು: 400 ಗೆಜೆಟೆಡ್ ಪ್ರೊಬೇಷನರಿ (ಗ್ರೂಪ್ ‘ಎ’ ಮತ್ತು ‘ಬಿ’), 115 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯ‌ರ್ (AEE) ಹುದ್ದೆಗಳು.
  • ಇತರ ಹುದ್ದೆಗಳು: FDA, SDA, ಗ್ರೂಪ್ 'ಸಿ' ಪದವಿ ಹುದ್ದೆಗಳು, ಲೆಕ್ಕ ಪರಿಶೋಧನಾ ಇಲಾಖೆಯ ಸಹಾಯಕ ನಿಯಂತ್ರಕರು ಮತ್ತು ಲೆಕ್ಕಪರಿಶೋಧನಾಧಿಕಾರಿ.
  • ಅಧಿಸೂಚನೆ ಸಮಯ: ಜುಲೈ ತಿಂಗಳಲ್ಲಿ ಸರಣಿ ಅಧಿಸೂಚನೆಗಳು ಪ್ರಕಟಗೊಳ್ಳಲಿವೆ.
  • ಹೊಸ ಪರೀಕ್ಷಾ ನಿಯಮ: ಡಿಸ್ಕ್ರಿಪ್ಟಿವ್ (ವಿವರಣಾತ್ಮಕ) ಪರೀಕ್ಷೆಗಳನ್ನು KPSC ಹಾಗೂ OMR ಪರೀಕ್ಷೆಗಳನ್ನು KEA ನಡೆಸಲಿದೆ.
ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಯಾವ್ಯಾವ ಇಲಾಖೆಯಲ್ಲಿ ಯಾವ ಹುದ್ದೆಗಳ ನೇಮಕಾತಿ?

ಆಯೋಗವು ವಿವಿಧ ಸಚಿವಾಲಯ ಹಾಗೂ ಸರಕಾರಿ ಇಲಾಖೆಗಳಿಂದ ಬಂದಿರುವ ಪ್ರಸ್ತಾವನೆಗಳ ಆಧಾರದ ಮೇಲೆ ಕೆಳಗಿನ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತಿದೆ:
  • ವೃಂದ / ಗ್ರೂಪ್ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳು (400 ಹದ್ದೆಗಳು) : ಗ್ರೂಪ್ 'ಎ' ಮತ್ತು 'ಬಿ'
  • ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯ‌ರ್ (115 AEE) : ತಾಂತ್ರಿಕ ವೃಂದ
  • ಪ್ರಥಮ ದರ್ಜೆ ಸಹಾಯಕರು (FDA) : ವಿವಿಧ ಇಲಾಖೆಗಳು
  • ದ್ವಿತೀಯ ದರ್ಜೆ ಸಹಾಯಕರು (SDA) : ನಾನಾ ಇಲಾಖೆಗಳು
  • ಪದವಿ ವಿದ್ಯಾರ್ಹತೆಯ ಹುದ್ದೆಗಳು : ಗ್ರೂಪ್ 'ಸಿ' ವೃಂದ
  • ಸಹಾಯಕ ನಿಯಂತ್ರಕರು / ಲೆಕ್ಕಪರಿಶೋಧನಾಧಿಕಾರಿ : ಲೆಕ್ಕ ಪರಿಶೋಧನಾ ಇಲಾಖೆ
KPSC ಕಾರ್ಯದರ್ಶಿ ಕೆ. ಜ್ಯೋತಿ ಅವರ ಹೇಳಿಕೆ:
"ಲೋಕಸೇವಾ ಆಯೋಗವು ಈಗಾಗಲೇ ಜೂನ್ 5 ರಂದೇ ಯಾವ್ಯಾವ ಇಲಾಖೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂಬ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಶೇ.50 ರಷ್ಟು ಮೀಸಲಾತಿ ಆದೇಶಕ್ಕೆ ಒಳಪಟ್ಟು ಹೊಸ ಅಧಿಸೂಚನೆ ಹೊರಡಿಸಲು ನ್ಯಾಯಾಲಯದ ಯಾವುದೇ ತಡೆ ಇಲ್ಲ. ಸರಕಾರದ ಇಲಾಖೆಗಳಿಂದ ಪ್ರಸ್ತಾವನೆಗಳು ಬಂದ ತಕ್ಷಣ ಪರೀಕ್ಷಾ ದಿನಾಂಕ ಹಾಗೂ ಸಂಪೂರ್ಣ ವೇಳಾಪಟ್ಟಿಯೊಂದಿಗೆ ಅಧಿಕೃತ ನೋಟಿಫಿಕೇಶನ್ ಹೊರಬೀಳಲಿದೆ."

ಪರೀಕ್ಷೆ ನಡೆಸಲು ಆಯೋಗದ 'ಮೂರು ವಿಧಾನಗಳ' ಸೂತ್ರ!
ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು KPSC ಈ ಬಾರಿ ಮೂರು ಹಂತದ ಪರೀಕ್ಷಾ ಪದ್ಧತಿಯನ್ನು ಅನುಸರಿಸಲು ತೀರ್ಮಾನಿಸಿದೆ:
  • ವಿಧಾನ 1 (ಸಾಂಪ್ರದಾಯಿಕ ಕ್ರಮ): ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳಿಗೆ ಎಂದಿನಂತೆ ಪೂರ್ವಭಾವಿ ಪರೀಕ್ಷೆ (Prelims), ಮುಖ್ಯ ಪರೀಕ್ಷೆ (Mains) ಹಾಗೂ ಸಂದರ್ಶನ (Interview) ಪ್ರಕ್ರಿಯೆ ನಡೆಯಲಿದೆ.
  • ವಿಧಾನ 2 (ನೇರ ಪರೀಕ್ಷೆ): ಕೆಲವು ಇಲಾಖೆಗಳ ‘ಎ’ ವೃಂದದ ಹುದ್ದೆಗಳಿಗೆ ಕೇವಲ ಲಿಖಿತ ಪರೀಕ್ಷೆಗಳನ್ನು ನಡೆಸಿ, ಯಾವುದೇ ಸಂದರ್ಶನವಿಲ್ಲದೆ ಜ್ಯೇಷ್ಠತೆ (Merit) ಆಧಾರದಲ್ಲಿ ನೇರ ಭರ್ತಿ ಮಾಡಿಕೊಳ್ಳಲಾಗುತ್ತದೆ.
  • ವಿಧಾನ 3 (ತಾಂತ್ರಿಕ ಹುದ್ದೆಗಳು): ತಾಂತ್ರಿಕ ಪರಿಣತಿ ಅಗತ್ಯವಿರುವ ಕೆಲವು ಗ್ರೂಪ್ ‘ಬಿ’ ಹುದ್ದೆಗಳಿಗೂ ಕೇವಲ ಪರೀಕ್ಷೆಗಳನ್ನು ಮಾತ್ರ ನಡೆಸಿ ಆಯ್ಕೆ ಪ್ರಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
KPSC ಮತ್ತು KEA ನಡುವೆ ಪರೀಕ್ಷೆ ಹಂಚಿಕೆ!
ರಾಜ್ಯ ಸರಕಾರದ ಹೊಸ ಸೂಚನೆಯಂತೆ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಇದರನ್ವಯ:
  • ಡಿಸ್ಕ್ರಿಪ್ಟಿವ್ (Descriptive/ವಿವರಣಾತ್ಮಕ) ಮಾದರಿಯ ಎಲ್ಲಾ ಪರೀಕ್ಷೆಗಳನ್ನು KPSC ನಡೆಸಬೇಕು.
  • OMR (Object Oriented/ವಸ್ತುನಿಷ್ಠ) ಮಾದರಿಯಲ್ಲಿ ಉತ್ತರಿಸುವ ಪರೀಕ್ಷೆಗಳನ್ನು KEA (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ನಡೆಸಬೇಕೆಂದು ಸರಕಾರ ಸ್ಪಷ್ಟ ನಿರ್ದೇಶನ ನೀಡಿದೆ.
KPSC ಹೊಸ ನೇಮಕಾತಿಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಸಿಸಲು ಇಲ್ಲಿ ಡೌನ್ಲೋಡ್ ಮಾಡಿ. 

ಹಳೆಯ ಗೆಜೆಟೆಡ್ ಪ್ರೊಬೇಷನರ್ (384 ಹುದ್ದೆಗಳು) ಫಲಿತಾಂಶದ ಸ್ಥಿತಿ ಏನು?

2024ನೇ ಸಾಲಿನ 384 ಗೆಜೆಟೆಡ್ ಪ್ರೊಬೇಷನರ್ ನೇಮಕಾತಿ ಪ್ರಕ್ರಿಯೆಯು ಸದ್ಯ ಅಂತಿಮ ಘಟ್ಟ ತಲುಪಿದೆ. ಸಂದರ್ಶನ ಮುಗಿದು ತಾತ್ಕಾಲಿಕ ಆಯ್ಕೆ ಪಟ್ಟಿ ಸಿದ್ಧವಾಗಿದ್ದರೂ, ಮೀಸಲಾತಿ ವಿವಾದದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಫಲಿತಾಂಶ ಪ್ರಕಟಣೆಗೆ ತಡೆ ನೀಡಿದೆ. ಕಳೆದ ವಾರ ಆಯೋಗವು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮನವಿ ಸಲ್ಲಿಸಿದರೂ ಅನುಮತಿ ಸಿಕ್ಕಿಲ್ಲ. ನ್ಯಾಯಾಲಯದ ಹಸಿರು ನಿಶಾನೆ ಸಿಗುವವರೆಗೂ ಹಳೇ ಫಲಿತಾಂಶ ಪ್ರಕಟಿಸಲು ಸಾಧ್ಯವಿಲ್ಲದ ಕಾರಣ, ಆಯೋಗವು ಸುಮ್ಮನೆ ಕುಳಿತುಕೊಳ್ಳದೆ ಹೊಸ ನೇಮಕಾತಿ ಪ್ರಕ್ರಿಯೆಗಳನ್ನು ಕೈಗೆತ್ತಿಕೊಂಡಿದೆ.

ಉದ್ಯೋಗಾಕಾಂಕ್ಷಿಗಳಿಗೆ KPSCVaani ಸಲಹೆ
KPSC ಈ ಬಾರಿ ಕಾಲಮಿತಿಯಲ್ಲಿ (Time Bound) ನೇಮಕಾತಿ ಮುಗಿಸಲು ಪಣ ತೊಟ್ಟಿರುವುದರಿಂದ, ನೋಟಿಫಿಕೇಶನ್ ಬಂದ ನಂತರ ಓದಲು ಸಮಯ ಕಡಿಮೆ ಸಿಗಬಹುದು. ಹಾಗಾಗಿ, ನಾಗರಿಕ ಸೇವೆ ಹಾಗೂ ಸರಕಾರಿ ಉದ್ಯೋಗದ ಕನಸು ಹೊತ್ತಿರುವ ಅಭ್ಯರ್ಥಿಗಳು ಇಂದಿನಿಂದಲೇ ತಮ್ಮ ಅಭ್ಯಾಸವನ್ನು ಚುರುಕುಗೊಳಿಸಿ.

KPSC ನೇಮಕಾತಿಯ ಪ್ರತಿ ಹಂತದ ಅಪ್ಡೇಟ್‌ಗಳು, ಪರೀಕ್ಷಾ ದಿನಾಂಕಗಳು ಮತ್ತು ಉಚಿತ ಸ್ಟಡಿ ಮೆಟೀರಿಯಲ್ಸ್‌ಗಾಗಿ KPSCVaani ವೆಬ್‌ಸೈಟ್ ಅನ್ನು ಫಾಲೋ ಮಾಡುತ್ತಿರಿ!

Comments