ಕರ್ನಾಟಕ ಲೋಕಸೇವಾ ಆಯೋಗವು (KPSC) ಈ ಕೆಳಕಂಡ ಗ್ರೂಪ್ ಸಿ ವೃಂದದ ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿದೆ. ಹುದ್ದೆಗಳು : * ಪೌರಾಡಳಿತ ನಿರ್ದೇಶನಾಲಯದಲ್ಲಿನ ಮುಖ್ಯಾಧಿಕಾರಿ ಶ್ರೇಣಿ 2 * ಅಕೌಂಟೆಂಟ್ * ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು ಹಾಗೂ * ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿ ಲೆಕ್ಕ ಸಹಾಯಕರು ಮತ್ತು * ಅಲ್ಪಸಂಖ್ಯಾತ ಇಲಾಖೆಯಲ್ಲಿ ದೈಹಿಕ ಶಿಕ್ಷಕರು, ಕಚೇರಿ ಅಧೀಕ್ಷಕರು, ಸ್ಟೋರ್ ಕಂಟ್ರೋಲರ್ / ವಾರ್ಡನ್, ಪ್ರಥಮ ದರ್ಜೆ ಕಂಪ್ಯೂಟರ್ ಸಹಾಯಕರು ಸೇರಿ ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು KPSC ಯು ಪ್ರಕಟಿಸಿದೆ. ಇವುಗಳ ಜೊತೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಮತ್ತು ಎನ್ವಿರಾನ್ಮೆಂಟಲ್ (ENVIRONMENTAL) ಇಂಜಿನಿಯರ್ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು ಇಂದು ಪ್ರಕಟಿಸಿದೆ. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಆಯ್ಕೆ ಪಟ್ಟಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.






Comments