Loading..!

KPSC ಇಂದ ಬಿಗ್ ರಿಸಲ್ಟ್ ಧಮಾಕಾ: ವಿವಿಧ ಇಲಾಖೆಯಿಂದ ಗ್ರೂಪ್-B ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಪ್ರಕಟ! ನಿಮ್ಮ ಹೆಸರು ಇಂದೇ ಚೆಕ್ ಮಾಡಿ.
Published by: Yallamma G | Date:12 ಆಗಸ್ಟ್ 2026
not found
KPSC ಬಿಗ್ ರಿಸಲ್ಟ್ ಧಮಾಕಾ: ವಿವಿಧ 8 ಇಲಾಖೆಗಳ ಹೆಚ್.ಕೆ (HK) ವೃಂದದ ಅಂತಿಮ ಆಯ್ಕೆಪಟ್ಟಿ ಪ್ರಕಟ! ಫಲಿತಾಂಶದ ಲಿಂಕ್ ಇಲ್ಲಿದೆ.

ಕರ್ನಾಟಕ ಲೋಕಸೇವಾ ಆಯೋಗದ ಹುದ್ದೆಗಳ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಕಲ್ಯಾಣ ಕರ್ನಾಟಕ ವೃಂದದ ಎಂಟು ವಿವಿಧ ಇಲಾಖೆಗಳ ತಾಂತ್ರಿಕ ಹಾಗೂ ಪತ್ರಾಂಕಿತ ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ಆಗಸ್ಟ್ 11, 2026ರಂದು ಆಯೋಗವು ಅಧಿಕೃತವಾಗಿ ಬಿಡುಗಡೆ ಮಾಡಿದೆ.ಒಟ್ಟು 68 ಹುದ್ದೆಗಳಿಗೆ ಈ ಪಟ್ಟಿ ಪ್ರಕಟವಾಗಿದೆ.

ಈ ಹಿಂದೆ ಬಿಡುಗಡೆಯಾಗಿದ್ದ ತಾತ್ಕಾಲಿಕ ಆಯ್ಕೆಪಟ್ಟಿಗೆ ಸಾರ್ವಜನಿಕರು ಹಾಗೂ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಬಂದಂತಹ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯಿಂದ ಕೂಲಂಕಷವಾಗಿ ಪರಿಶೀಲಿಸಿದ ನಂತರವೇ 2021ರ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ ಈ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಿಬಿಎಂಪಿ, ಗ್ರಾಮೀಣ ಕುಡಿಯುವ ನೀರು ಇಲಾಖೆ ಸೇರಿದಂತೆ ಹಲವು ಪ್ರಮುಖ ವಿಭಾಗಗಳ ಫಲಿತಾಂಶ ಇದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಹೆಸರನ್ನು ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಬಹುದು. ಯಾವೆಲ್ಲ ಇಲಾಖೆಯ ಫಲಿತಾಂಶ ಪ್ರಕಟವಾಗಿದೆ ಎಂಬ ವಿಸ್ತೃತ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ.

KPSC ಅಧಿಸೂಚಿಸಿದ ವಿವಿಧ ಇಲಾಖೆಗಳಲ್ಲಿನ ವಿವಿಧ ಗ್ರೂಪ್ -ಬಿ [ಹೈ.ಕ] ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.. 

KPSC ಪ್ರಕಟಿಸಿರುವ 8 ಇಲಾಖೆಗಳ ಅಂತಿಮ ಆಯ್ಕೆಪಟ್ಟಿಗಳ ಸಂಕ್ಷಿಪ್ತ ವಿವರ



KPSC ಅಧಿಸೂಚಿಸಿದ ವಿವಿಧ ಇಲಾಖೆಗಳಲ್ಲಿನ ವಿವಿಧ ಗ್ರೂಪ್ -ಬಿ [ಹೈ.ಕ] ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯ ಕಟ್-ಆಫ್ ಅಂಕಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ 

ಕಟಿತ ಅಂತಿಮ ಆಯ್ಕೆಪಟ್ಟಿಗಳ ಸಮಗ್ರ ವಿವರಣೆ 

1. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (19 ಹುದ್ದೆಗಳು):
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು / ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು (Gazetted Manager / Taluk Backward Classes Welfare Officer) ಒಟ್ಟು 19 ಹೈದ್ರಾಬಾದ್-ಕರ್ನಾಟಕ ವೃಂದದ ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬಿ.ಎ, ಬಿ.ಎಸ್ಸಿ, ಬಿ.ಇ ಮತ್ತು ಕೃಷಿ ಪದವೀಧರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

2. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (20 ಹುದ್ದೆಗಳು):
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಿರಿಯ ಇಂಜಿನಿಯರ್ (JE) 20 ಹೆಚ್.ಕೆ. ವೃಂದದ ಹುದ್ದೆಗಳಿಗೆ ಮಾರ್ಚ್ 15, 2024 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಜುಲೈ 2, 2026 ರಂದು ಪ್ರಕಟಿಸಿದ್ದ ತಾತ್ಕಾಲಿಕ ಪಟ್ಟಿಗೆ ಯಾವುದೇ ಆಕ್ಷೇಪಣೆಗಳು ಬಾರದ ಹಿನ್ನೆಲೆಯಲ್ಲಿ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.

3. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ - BBMP (08 ಹುದ್ದೆಗಳು):
ಬಿಬಿಎಂಪಿಯಲ್ಲಿನ ಸಹಾಯಕ ಇಂಜಿನಿಯರ್ (ಸಿವಿಲ್) (ವಿಭಾಗ-1) - Assistant Engineer Civil 08 ಹೆಚ್.ಕೆ. ಹುದ್ದೆಗಳಿಗೆ ಸಲ್ಲಿಕೆಯಾಗಿದ್ದ ಆಕ್ಷೇಪಣೆಗಳನ್ನು ಪುನರ್‌ಪರಿಶೀಲಿಸಿ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.  

4. ಪೌರಾಡಳಿತ ನಿರ್ದೇಶನಾಲಯ (08 ಹುದ್ದೆಗಳು):
ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿನ ಕಿರಿಯ ಇಂಜಿನಿಯರ್ (ಸಿವಿಲ್) - Junior Engineer Civil 08 ಹೆಚ್.ಕೆ. ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.  

5. ಅಂತರ್ಜಲ ನಿರ್ದೇಶನಾಲಯ (05 ಹುದ್ದೆಗಳು):
ಅಂತರ್ಜಲ ನಿರ್ದೇಶನಾಲಯದಲ್ಲಿನ 05 ಕಿರಿಯ ಇಂಜಿನಿಯರ್ (JE) ಹೆಚ್.ಕೆ. ಹುದ್ದೆಗಳಿಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗದ ಹಿನ್ನೆಲೆಯಲ್ಲಿ ಮೂಲ ತಾತ್ಕಾಲಿಕ ಪಟ್ಟಿಯನ್ನೇ ಅಂತಿಮಗೊಳಿಸಿ ಪ್ರಕಟಿಸಲಾಗಿದೆ.

6. ಭೂ ದಾಖಲೆಗಳ ಇಲಾಖೆ (03 ಹುದ್ದೆಗಳು):
ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರು (ADLR) 03 ಹೆಚ್.ಕೆ. ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಬಿಡುಗಡೆಯಾಗಿದೆ.  

7. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (03 ಹುದ್ದೆಗಳು):
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರು (Assistant Director) 03 ಹೆಚ್.ಕೆ. ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಲಾಗಿದೆ. 

8. ಕಾರ್ಖಾನೆಗಳು & ಬಾಯ್ಲರುಗಳ ಇಲಾಖೆ (02 ಹುದ್ದೆಗಳು):
ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿನ ಕಾರ್ಖಾನೆಗಳ ಸಹಾಯಕ ನಿರ್ದೇಶಕರು 02 ಹೆಚ್.ಕೆ. ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಪ್ರಕಟಗೊಂಡಿದೆ.

ಪ್ರಮುಖ ಟಿಪ್ಪಣಿ: ಈ ಎಲ್ಲಾ ಅಂತಿಮ ಆಯ್ಕೆಪಟ್ಟಿಗಳು ಮಾನ್ಯ ಉಚ್ಚ ನ್ಯಾಯಾಲಯ, ಮಾನ್ಯ ಕೆ.ಎಸ್.ಎ.ಟಿ (KSAT) ಹಾಗೂ ಇತರೆ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು KPSC ಕಾರ್ಯದರ್ಶಿ ಕೆ. ಜ್ಯೋತಿ ಅವರು ಸ್ಪಷ್ಟಪಡಿಸಿದ್ದಾರೆ.


ಅಂತಿಮ ಆಯ್ಕೆಪಟ್ಟಿಯನ್ನು ವೀಕ್ಷಿಸುವುದು ಹೇಗೆ?
1 ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ kpsc.kar.nic.in ಗೆ ಭೇಟಿ ನೀಡಿ.
2 'Results' ಅಥವಾ 'Selection List' ವಿಭಾಗದ ಮೇಲೆ ಕ್ಲಿಕ್ ಮಾಡಿ.
3 ದಿನಾಂಕ 11-08-2026 ರಂದು ಪ್ರಕಟಿಸಲಾದ ಸಂಬಂಧಿಸಿದ ಇಲಾಖೆಯ "Final Selection List" ಲಿಂಕ್ ಆಯ್ಕೆ ಮಾಡಿ.
4 ನಿಮ್ಮ ನೋಂದಣಿ ಸಂಖ್ಯೆ (Register Number) ಮತ್ತು ಹೆಸರನ್ನು ಹುಡುಕಿ ಪರಿಶೀಲಿಸಿಕೊಳ್ಳಿ.

Comments