ಕಳೆದ ಜುಲೈನಲ್ಲಿ ಬರೋಬ್ಬರಿ 10 ಕೃಪಾಂಕಗಳನ್ನು ನೀಡಿ ಭಾರಿ ಸುದ್ದಿ ಯಲ್ಲಿದ್ದ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಇದೀಗ ಮತ್ತೊಂದು ಪರೀಕ್ಷೆಯಲ್ಲಿ ಆರು ಕೃಪಾಂಕಗಳನ್ನು ಘೋಷಿಸಿದೆ. ಬರೋಬ್ಬರಿ 22 ಪ್ರಶ್ನೆಗಳ ಉತ್ತರಗಳಲ್ಲಿ ಮಾರ್ಪಾಡು ಮಾಡಿದೆ.
ವಿವಿಧ ಇಲಾಖೆಯಲ್ಲಿನ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ನಡೆಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕೃತ ಸರಿಯುತ್ತರಗಳನ್ನು ಕೆಪಿಎಸ್ಸಿ ಬಿಡುಗಡೆ ಮಾಡಿದೆ. ಇದರಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆ-1ರಲ್ಲಿ (ವಿಷಯ ಸಂಕೇತ-656) ಮೂರು ಕೃಪಾಂಕಗಳನ್ನು ನೀಡಿದೆ. ಇದು ಸೇರಿ ಒಟ್ಟಾರೆ 16 ಪ್ರಶ್ನೆಗಳ ಉತ್ತರ ಗಳಲ್ಲಿ ಬದಲಾವಣೆ ಮಾಡಿದಂತಾಗಿದೆ. ಜತೆಗೆ, ಮೂರು ಪ್ರಶ್ನೆಗಳಿಗೆ ಪರ್ಯಾಯ ಉತ್ತರ ನೀಡಿದೆ.
ಇನ್ನು, ವಿಷಯಾಧಾರಿತ ನಿರ್ದಿಷ್ಟ ಪತ್ರಿಕೆ-2ರಲ್ಲಿ (ವಿಷಯ ಸಂಕೇತ-657) ಮೂರು ಕೃಪಾಂಕ ನೀಡಿದ್ದು, ಮೂರು ಉತ್ತರ ಗಳನ್ನು ಬದಲಾಯಿಸಲಾಗಿದೆ. ಎರಡೂ ಪತ್ರಿಕೆಗಳಿಂದ ಒಟ್ಟಾರೆ ಯಾಗಿ 22 ಉತ್ತರಗಳನ್ನು ಬದಲಾವಣೆ ಮಾಡಿದಂತಾಗಿದೆ.
2024ರ ಮಾ.15ರಂದು ಹೊರಡಿ ಸಲಾಗಿದ್ದ ಅಧಿಸೂಚನೆಗಾಗಿ ಕಳೆದ 2.130 ರಾಜ್ಯಾದ್ಯಂತ ಪರೀಕ್ಷೆ ನಡೆಸಲಾಗಿತ್ತು. ಆ.13ರಂದು ತಾತ್ಕಾಲಿಕ ಸರಿಯುತ್ತರಗಳನ್ನು ಬಿಡುಗಡೆ ಮಾಡಿ ಆಕ್ಷೇಪಣೆಗಳನ್ನು ಸಲ್ಲಿಸಲು ಆ.20ರವರೆಗೆ ಅವಕಾಶ ನೀಡಲಾಗಿತ್ತು. ಕಳೆದ ಬಾರಿ ಕೂಡ ಗ್ರೂಪ್ ಸಿ ಹುದ್ದೆ ಗಳ ನೇಮಕಾತಿ ಪರೀಕ್ಷೆಗೆ ಕೃಪಾಂಕಗಳನ್ನು ನೀಡಿತ್ತು.
ಪರಿಷ್ಕೃತ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಸಲ್ಲಿಸುವ ಯಾವುದೇ ಮನವಿ ಅಥವಾ ಆಕ್ಷೇಪಣೆ ಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಆಯೋಗ ದಿಂದ ಸ್ಪಷ್ಟಪಡಿಸಲಾಗಿದೆ.
Comments