Loading..!

ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಶೀಘ್ರದಲ್ಲೇ ಐದು ಸಾವಿರ ಶಿಕ್ಷಕ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಪ್ರಕಟ!
Published by: Basavaraj Halli | Date:15 ನವೆಂಬರ್ 2021
not found
ಕರ್ನಾಟಕ ರಾಜ್ಯದ ಮಾನ್ಯ ಶಿಕ್ಷಣ ಸಚಿವರಾಗಿರುವ ಬಿ ಸಿ ನಾಗೇಶ್ ಅವರು ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಖಾತೆಯ ಮೂಲಕ ರಾಜ್ಯದಲ್ಲಿ ಖಾಲಿ ಉಳಿದಿರುವ ಸುಮಾರು 5000 ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸುವುದಾಗಿ ಮಾಹಿತಿ ನೀಡಿದ್ದಾರೆ.

ಈ ಮೂಲಕ ಕರ್ನಾಟಕ ರಾಜ್ಯದ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆದಿದ್ದು, ಸರ್ದಾತ್ಮಕತೆ ಹೆಚ್ಚಳ ಹಾಗೂ ಗುಣಮಟ್ಟ ಸುಧಾರಣೆಗೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕೆಲವು ಬದಲಾವಣೆಗಳ ಪ್ರಕ್ರಿಯೆ ಪ್ರಗತಿಯಲ್ಲಿರುವುದಾಗಿ ಇದೇ ವೇಳೆ ಅವರು ಮಾಹಿತಿ ನೀಡಿರುತ್ತಾರೆ.

* ರಾಜ್ಯದ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಈಗಿನಿಂದಲೇ ಉತ್ತಮ ತಯಾರಿ ನಡೆಸಿ ಬರುವ ಅಧಿಸೂಚನೆಯಲ್ಲಿ ಯಶಸ್ಸನ್ನು ಸಾಧಿಸಿ.

Comments

Sujatha Sujatha ನವೆಂ. 15, 2021, 12:20 ಅಪರಾಹ್ನ