Life is like this loading!

We've to prepare well to perform better

ಕರ್ನಾಟಕ ಲೋಕಸೇವಾ ಅಯೋಗದಿಂದ ವಿವಿಧ ನೇಮಕಾತಿಗಳ ಕುರಿತಂತೆ ಪ್ರಮುಖ ಮಾಹಿತಿ ಪ್ರಕಟ
Author: Basavaraj Halli | Date:15 ನವೆಂಬರ್ 2021
Image not found

ಕರ್ನಾಟಕ ಲೋಕಸೇವಾ ಅಯೋಗವು ವಿವಿಧ ದಿನಾಂಕಗಳಂದು ಅಧಿಸೂಚಿಸಿದ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ಇದೀಗ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಅವುಗಳ ಕುರಿತ ಮಾಹಿತಿ ಈ ಕೆಳಗೆ ನೀಡಲಾಗಿದೆ.


* ಕರ್ನಾಟಕ ಲೋಕಸೇವಾ ಅಯೋಗದಿಂದ 2019ನೇ ಸಾಲಿನ ಸಹಾಯಕರು / ಪ್ರಥಮ ದರ್ಜೆ ಸಹಾಯಕರ ನೇಮಕಾತಿ ಸಂಬಂಧ ದಿನಾಂಕ:08-10-2021ರಂದು ನಡೆಸಲಾದ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಸಂಬಂಧಿಸಿದಂತೆ ದಿನಾಂಕ:06-11-2021ರಂದು ಪ್ರಕಟಿಸಲಾದ ಅರ್ಹತಾ ಪಟ್ಟಿಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ದಾಖಲಾತಿ  ಪರಿಶೀಲನೆಗೆ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.


* ಅರಣ್ಯ ಪರಿಸರ ಮತ್ತು ಜೀವೆಶಾಸ್ತ್ರ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಕೀ ಉತ್ತರಗಳ ಬಗ್ಗೆ ಹಾಗೂ


* ಆಯುಷ್ ಇಲಾಖೆಯ ವಿವಿಧ ಗ್ರೂಪ್ ಎ, ಬಿ, ಸಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳ ಬಗ್ಗೆ ಪತ್ರಿಕಾ ಪ್ರಕಟಣೆ ಪ್ರಕಟಿಸಲಾಗಿದೆ.

Comments