ಭಾರತೀಯ ನೌಕಾಪಡೆಯು (Indian Navy) 2025ರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯಂತೆ, ಎಸ್‌ಎಸ್‌ಸಿ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗಾಗಿ ಒಟ್ಟು 15 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಖಿಲ ಭಾರತೀಯ ಮಟ್ಟದಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಆಸಕ್ತರು 2025ರ ಆಗಸ್ಟ್ 17ರೊಳಗೆ ನೌಕಾಪಡೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಭಾರತೀಯ ನೌಕಾಪಡೆ ಹುದ್ದೆ ವಿವರಗಳು :
ಸಂಸ್ಥೆ ಹೆಸರು : ಭಾರತೀಯ ನೌಕಾಪಡೆ (Indian Navy)
ಹುದ್ದೆಯ ಹೆಸರು : ಎಸ್‌ಎಸ್‌ಸಿ ಎಕ್ಸಿಕ್ಯೂಟಿವ್ (SSC Executive)
ಒಟ್ಟು ಹುದ್ದೆಗಳ ಸಂಖ್ಯೆ : 15
ಉದ್ಯೋಗ ಸ್ಥಳ : ಅಖಿಲ ಭಾರತ
ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ 56,100/- ರೂ ಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಹತೆಗಳು :
ಅಭ್ಯರ್ಥಿಗಳು 10ನೇ ತರಗತಿ, 12ನೇ ತರಗತಿ, ಅಥವಾ BCA, B.Sc, MCA, M.Sc, B.E/B.Tech, M.Tech ಪದವಿಗಳನ್ನು ಮಾನ್ಯತೆ ಪಡೆದ ಮಂಡಳಿಗಳಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಪಡೆದಿರಬೇಕು.
ವಯೋಮಿತಿ :
ಅಭ್ಯರ್ಥಿಗಳು 02-ಜನವರಿ-2001 ರಿಂದ 01-ಜುಲೈ-2006 ರೊಳಗಿನ ದಿನಾಂಕದಲ್ಲಿ ಹುಟ್ಟಿದವರಾಗಿರಬೇಕು (ಎರಡೂ ದಿನಾಂಕ ಸೇರಿದಂತೆ).
ವಯೋಮಿತಿ ಸಡಿಲಿಕೆ :
ಭಾರತೀಯ ನೌಕಾಪಡೆಯ ನಿಯಮಗಳ ಪ್ರಕಾರ ನೀಡಲಾಗುತ್ತದೆ.
ಅರ್ಜಿ ಶುಲ್ಕ :
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಆಯ್ಕೆ ವಿಧಾನ :
1. Merit List (ಅಕಾಡೆಮಿಕ್ ಫಲಿತಾಂಶಗಳ ಆಧಾರಿತ ಶ್ರೇಣಿಪಟ್ಟಿ)
2. SSB ಸಂದರ್ಶನ (Services Selection Board Interview)
ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ
2. ಅರ್ಜಿ ಸಲ್ಲಿಸುವ ಮೊದಲು ಇಮೇಲ್ ಐಡಿ, ಮೊಬೈಲ್ ನಂಬರ್, ವಿದ್ಯಾರ್ಹತೆ ಪ್ರಮಾಣಪತ್ರ, ಗುರುತಿನ ದಾಖಲೆಗಳು ಮತ್ತು ಪೋಟೋಗಳನ್ನು ಸಿದ್ಧಪಡಿಸಿಕೊಳ್ಳಿ
3. ಅಧಿಕೃತ ಲಿಂಕ್ ಮೂಲಕ ಆನ್‌ಲೈನ್ ಅರ್ಜಿ ಭರ್ತಿ ಮಾಡಿ
4. ಅಗತ್ಯ ದಾಖಲೆಗಳು ಹಾಗೂ ಪೋಟೋ ಅಟ್ಯಾಚ್ ಮಾಡಿ
5. ಅರ್ಜಿ ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ
ಪ್ರಮುಖ ದಿನಾಂಕಗಳು :
ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : 02-ಆಗಸ್ಟ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-ಆಗಸ್ಟ್-2025
- ಅಧಿಕೃತ ವೆಬ್‌ಸೈಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ ಮತ್ತು ಭಾರತೀಯ ನೌಕಾಪಡೆಯು ನೀಡುತ್ತಿರುವ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಇದು ಭಾರತ ಸೇವೆ ಮಾಡಲು ಆಸಕ್ತರಾದ ಯುವಕರಿಗೆ ಅತ್ಯುತ್ತಮ ಅವಕಾಶವಾಗಿದೆ.
To Download Official Announcement
ನೌಕಾಪಡೆ ಅರ್ಜಿ ಪ್ರಕ್ರಿಯೆ,
ನೌಕಾಪಡೆ ಉದ್ಯೋಗ ಅವಕಾಶಗಳು,
ಭಾರತೀಯ ನೌಕಾಪಡೆ ಟೆಕ್ನಿಷಿಯನ್ ನೇಮಕಾತಿ,
ನೌಕಾಪಡೆ ಆಯ್ಕೆ ಪ್ರಕ್ರಿಯೆ,
ನೌಕಾಪಡೆ ಉದ್ಯೋಗ 2025
Comments