Loading..!

BEL ನೇಮಕಾತಿ 2025: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Bhagya R K | Date:17 ಜುಲೈ 2025
Image not found

ಸರ್ಕಾರಿ ಉದ್ಯೋಗಕ್ಕೆ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಶುಭವಾರ್ತೆ! ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 2025ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಚಾಲಕ (Driver) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 10 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


BEL ನೇಮಕಾತಿಯ ಪ್ರಮುಖ ವಿವರಗಳು :
ಸಂಸ್ಥೆ ಹೆಸರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಹುದ್ದೆಯ ಹೆಸರು : ಚಾಲಕ (Driver)
ಒಟ್ಟು ಹುದ್ದೆಗಳು : 10
ಉದ್ಯೋಗ ಸ್ಥಳ : ಬೆಂಗಳೂರು, ಕರ್ನಾಟಕ
ಅಧಿಕೃತ ವೆಬ್‌ಸೈಟ್ : [http://bel-india.in](http://bel-india.in)


ಅರ್ಹತೆಗಳು :
ವಿದ್ಯಾರ್ಹತೆ : ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು.


ವಯೋಮಿತಿ : 
ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 43 ವರ್ಷ (01-07-2025 ರ ಅನ್ವಯ)ಹೊಂದಿರಬೇಕು.


ವಯೋಮಿತಿಯಲ್ಲಿ ಸಡಿಲಿಕೆ :
OBC (NCL) ಅಭ್ಯರ್ಥಿಗಳು : 3 ವರ್ಷ
SC ಅಭ್ಯರ್ಥಿಗಳು : 5 ವರ್ಷ


ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹20,500/- ರಿಂದ ₹79,000/- ವರೆಗೆ ವೇತನ ನೀಡಲಾಗುತ್ತದೆ.


ಅರ್ಜಿ ಶುಲ್ಕ :
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವಿಲ್ಲ.


ಆಯ್ಕೆ ಪ್ರಕ್ರಿಯೆ :
1. ಶಾರ್ಟ್‌ಲಿಸ್ಟಿಂಗ್
2. ಚಾಲನಾ ಪರೀಕ್ಷೆ
3. ಲಿಖಿತ ಪರೀಕ್ಷೆ


ಅರ್ಜಿ ಸಲ್ಲಿಸುವ ವಿಧಾನ :
1. BEL ಅಧಿಕೃತ ವೆಬ್‌ಸೈಟ್ [http://bel-india.in](http://bel-india.in) ಗೆ ಭೇಟಿಯಾಗಿ ಚಾಲಕ ಹುದ್ದೆಯ ಅಧಿಸೂಚನೆಯನ್ನು ಓದಿ.
2. ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ, ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
3. ಅಗತ್ಯ ದಾಖಲೆಗಳನ್ನು ಲಗತ್ತಿಸಿ.
4. ಅರ್ಜಿ ನಮೂನೆಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಿ:


📮 ವಿಳಾಸ :
DGM (HR/CSG),
Bharat Electronics Limited,
Jalahalli Post,
Bengaluru – 560013


ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 15-ಜುಲೈ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-ಆಗಸ್ಟ್-2025


-ಸಾರಾಂಶ :
ಕಡಿಮೆ ವಿದ್ಯಾರ್ಹತೆ (10ನೇ ತರಗತಿ) ಹೊಂದಿರುವವರಿಗೆ ಈ BEL ಚಾಲಕ ಹುದ್ದೆ ಸರ್ಕಾರಿ ಉದ್ಯೋಗ ಪಡೆಯುವ ಮಹತ್ತ್ವದ ಅವಕಾಶವಾಗಿದೆ. ಆಸಕ್ತರು ತಕ್ಷಣವೇ ಅರ್ಜಿ ಸಲ್ಲಿಸಿ ನಿಮ್ಮ ಅವಕಾಶವನ್ನು ಕಳೆದುಕೊಳ್ಳಬೇಡಿ!

Comments