* ರಾಜ್ಯದ ಗ್ರಾಮೀಣ ಯುವಜನತೆಗೆ ವಿಶೇಷವಾಗಿ ಮಹಿಳೆಯರಿಗೆ ಡಿಜಿಟಲ್ ಕೌಶಲ ಕಲ್ಪಿಸುವ ದೃಷ್ಟಿಯಿಂದ ಉದ್ಯೋಗ ಪಡೆಯಲು ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವರಾದ ಧರ್ಮೇಂದ್ರ ಪ್ರದಾನ್ ಅವರು  'ಸ್ಕಿಲ್ಸ್ ಆನ್ ವೀಲ್' ಯೋಜನೆಗೆ ಚಾಲನೆ ನೀಡಿದ್ದಾರೆ.* ಯುವಜನರಿಗೆ ಕೌಶಲ ತರಬೇತಿಯನ್ನು ನೀಡುವ ಮೂಲಕ ಗ್ರಾಮೀಣ ಕುಟುಂಬಗಳ ಜೀವನೋಪಾಯವನ್ನು ಸುಧಾರಿಸುವ ಉದ್ದೇಶದಿಂದ ಐದು ವರ್ಷಗಳಲ್ಲಿ 60 ಸಾವಿರ ಯುವಜನತೆಗೆ ತರಬೇತಿ ನೀಡುವುದು ಈ ಉಪಕ್ರಮದ ಉದ್ದೇಶವಾಗಿದೆ.* ಭಾರತದ ಗ್ರಾಮೀಣ ಯುವಕರನ್ನು ಕೌಶಲ, ಪುನರ ಕೌಶಲ ಹಾಗೂ ಉನ್ನತೀಕರಣದ ಪರಿವರ್ತಕ ಶಕ್ತಿಯೊಂದಿಗೆ ಸಬಲೀಕರಣಗೊಳಿಸುವುದು ಪ್ರಮುಖ ಧೈಯವಾಗಿದೆ ಎಂದು ಎಸ್ ಡಿ ಸಿ ಯ CEO ವೇದ್ ಮಣಿ ತಿವಾರಿ ಅವರು ತಿಳಿಸಿದ್ದಾರೆ.* ಲೋಕಸಭಾ ಸ್ಪೀಕರ್ ಓಂ ಬಿರ್ಲ್ ಮತ್ತು ಧರ್ಮೇಂದ್ರ ಪ್ರದಾನ್ ಅವರು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮವು ಮತ್ತು ಇಂಡಸ್ ಬ್ಯಾಂಕ್ ಸಹಯೋಗದೊಂದಿಗೆ ಈ ಉಪಕ್ರಮಕ್ಕೆ ಚಾಲನೆ ನೀಡಿದ್ದಾರೆ.