* ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17 ರಂದು ದೆಹಲಿಯ ದ್ವಾರಕಾದಲ್ಲಿ 5,400 ಕೋಟಿ ರೂಪಾಯಿ ವೆಚ್ಚದಲ್ಲಿ 'ಯಶೋಭೂಮಿ' ಎಂದು ಕರೆಯಲ್ಪಡುವ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಸನ್ ಮತ್ತು ಎಕ್ಟೋ ಸೆಂಟರ್ (ಐಐಸಿಸಿ) ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.* ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದ್ವಾರಕಾ ಸೆಕ್ಟರ್ 21 ರಿಂದ ದೆಹಲಿ ಏರ್‌ಪೋರ್ಟ್‌ ಮೆಟ್ರೋ ಎಕ್ಸ್‌ಪ್ರೆಸ್ ಮಾರ್ಗದ ವಿಸ್ತರಣೆಯನ್ನು 'ಯಶೋಭೂಮಿ' ಬಳಿ ದ್ವಾರಕಾ ಸೆಕ್ಟರ್ 25 ರಲ್ಲಿ ಹೊಸ ಮೆಟ್ರೋ ನಿಲ್ದಾಣಕ್ಕೆ ಉದ್ಘಾಟಿಸಿದ್ದಾರೆ.* 'ಯಶೋಭೂಮಿ' ಭವ್ಯವಾದ ಕನ್ವೆನ್ಷನ್ ಸೆಂಟರ್, ಬಹು ಪ್ರದರ್ಶನ ಸಭಾಂಗಣಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿದ್ದು, ಕನ್ವೆನ್ಷನ್ ಸೆಂಟರ್, 11000 ಕ್ಕೂ ಹೆಚ್ಚು ಪ್ರತಿನಿಧಿಗಳ ಆಸನಗಳು, 15 ಕನ್ವೆನ್ಶನ್ ಕೊಠಡಿಗಳು, ಭವ್ಯವಾದ ಬಾಲ್ ರೂಂ ಮತ್ತು 13 ಸಭಾ ಕೊಠಡಿಗಳನ್ನು ಒಳಗೊಂಡಿದೆ.* G20 ಶೃಂಗಸಭೆಯಲ್ಲಿ ವಿಶ್ವ ನಾಯಕರಿಗೆ ಆತಿಥ್ಯ ವಹಿಸಿದ ಭಾರತ್ ಮಂಟಪದ ನಂತರ ಇದು ಪ್ರದರ್ಶನಗಳು ಮತ್ತು ಸಮ್ಮೇಳನಗಳಿಗೆ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಹೊಂದಿರುವ ಎರಡನೇ ಸಮಾವೇಶ ಕೇಂದ್ರವಾಗಿದೆ.