* ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ ಜಾವೆಲಿನ್‌ ಥ್ರೋ ಸ್ಪರ್ಧಿ ಭಾರತದ ನೀರಜ್‌ ಚೋಪ್ರಾ ಅವರು ಡೈಮಂಡ್‌ ಲೀಗ್‌ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳಲು ವಿಫಲರಾಗಿದ್ದು, ಅಮೆರಿಕದ ಯೂಜಿನ್‌ನಲ್ಲಿ ಸೆಪ್ಟೆಂಬರ್ 16 ರಂದು ನಡೆದ ಸ್ಪರ್ಧೆಯಲ್ಲಿ 83.80 ಮೀ. ಜಾವಲಿನ್ ಎಸೆಯುವ ಸಾಧನೆಯೊಂದಿಗೆ ಎರಡನೇ ಸ್ಥಾನ ಪಡೆದರು.* 84.24 ಮೀ ದೂರ ಜಾವಲಿನ್ ಎಸೆದ ಜೆಕ್ ಗಣರಾಜ್ಯದ ಜಾಕುಬ್ ವದ್ಲೇಚ್ ಅವರು ಅಗ್ರಸ್ಥಾನದಲ್ಲಿದ್ದು,ಫಿನ್ಲೆಂಡ್‍ನ ಒಲಿವರ್ ಹೆಲಂಡರ್ ಅವರು 83.74 ಮೀಟರ್‍ ಜಾವಲಿನ್ ಎಸೆಯುವ ಸಾಧನೆಯೊಂದಿಗೆ ಮೂರನೇ ಸ್ಥಾನ ಪಡೆದರು.* ಆಂಡ್ರಿಯನ್ ಮರ್ಡೇರ್ (81.79 ಮೀ), ಕರ್ಟಿಸ್ ಥಾಂಪ್ಸನ್ (77.01 ಮೀ) ಮತ್ತು ಆಂಡರ್ಸನ್ ಪೀಟರ್ಸ್ (74.71 ಮೀ) ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನ ಪಡೆದರು.* 89.94 ಮೀ. ರಾಷ್ಟ್ರೀಯ ದಾಖಲೆ ಹೊಂದಿರುವ ನೀರಜ್ ಚೋಪ್ರಾ ಅವರು 2023ರ ಡೈಮಂಡ್ ಲೀಗ್ ಫೈನಲ್‌ನಲ್ಲಿ ಸ್ಪರ್ಧಿಸುವ ಏಕೈಕ ಭಾರತೀಯ ಅಥ್ಲೀಟ್ ಆಗಿದ್ದಾರೆ.