➤ 2026 ರ ವಿಶ್ವ ದ್ವಿದಳ ಧಾನ್ಯಗಳ ದಿನದ ಧ್ಯೇಯ ವಾಕ್ಯ:- "ವಿಶ್ವದ ದ್ವಿದಳ ಧಾನ್ಯಗಳು: ನಮ್ರತೆಯಿಂದ ಶ್ರೇಷ್ಠತೆಯವರೆಗೆ" (Pulses of the World: From Modesty to Excellence) ಎಂಬುದು ಥೀಮ್ ಆಗಿದೆ.
➤ 2016ನ್ನು 'ಅಂತರಾಷ್ಟ್ರೀಯ ಬೇಳೆಕಾಳುಗಳ ವರ್ಷ' ಎಂದು ಆಚರಿಸಿದ ನಂತರ, 2018ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು (UNGA) ಪ್ರತಿ ವರ್ಷ ಫೆಬ್ರವರಿ 10ನ್ನು ವಿಶ್ವ ದ್ವಿದಳ ಧಾನ್ಯಗಳ ದಿನವನ್ನಾಗಿ ಘೋಷಿಸಿತು. ಮೊದಲ ಆಚರಣೆಯು 2019ರಲ್ಲಿ ನಡೆಯಿತು.
➤ ಬೇಳೆಕಾಳುಗಳ ಪ್ರಾಮುಖ್ಯತೆ:
- ಅಧಿಕ ಪ್ರೋಟೀನ್, ಫೈಬರ್, ಕಬ್ಬಿಣ ಮತ್ತು ಜೀವಸತ್ವಗಳನ್ನು ಹೊಂದಿರುತ್ತವೆ. ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಿಯಂತ್ರಣಕ್ಕೆ ಉತ್ತಮ.
- ಇವು ಮಣ್ಣಿನಲ್ಲಿ ಸಾರಜನಕವನ್ನು (Nitrogen Fixation) ಸ್ಥಿರಗೊಳಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ. ಇವುಗಳಿಗೆ ಕಡಿಮೆ ನೀರು ಸಾಕು.
- ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ಬೆಳೆಗಳಾಗಿದ್ದು, ಸಣ್ಣ ರೈತರ ಆದಾಯ ಹೆಚ್ಚಿಸಲು ಸಹಕಾರಿ.
➤ ಕೇಂದ್ರ ಸರ್ಕಾರವು ಬೇಳೆಕಾಳುಗಳಲ್ಲಿ ಸ್ವಯಂ ಅವಲಂಬನೆ ಸಾಧಿಸಲು 'ಆತ್ಮನಿರ್ಭರ ಬೇಳೆಕಾಳು ಮಿಷನ್' (Mission for Aatmanirbharta in Pulses)
ಅನ್ನು 2025-26 ರಿಂದ 2030-31ರವರೆಗೆ ಜಾರಿಗೆ ತಂದಿದೆ.
➤ ಭಾರತದಲ್ಲಿ ದ್ವಿದಳ ಧಾನ್ಯಗಳ ಕೃಷಿ
- ಭಾರತವು ಅತಿ ಹೆಚ್ಚು ದ್ವಿದಳ ಧಾನ್ಯಗಳನ್ನು (25%) ಉತ್ಪಾದಿಸುತ್ತದೆ, ನಂತರ ಕೆನಡಾ (9%), ಚೀನಾ (6%) ಮತ್ತು ಯುರೋಪಿಯನ್ ಒಕ್ಕೂಟ (5%).
- ಭಾರತವು ವಿಶ್ವದಲ್ಲೇ ಅತಿ ಹೆಚ್ಚು ದ್ವಿದಳ ಧಾನ್ಯಗಳ ಉತ್ಪಾದನೆ (25%), ಬಳಕೆ (27%) ಮತ್ತು ಆಮದುದಾರ (14%) ಹೊಂದಿದೆ. 75% ದ್ವಿದಳ ಧಾನ್ಯಗಳನ್ನು ಮಧ್ಯಪ್ರದೇಶ (29.67%), ಮಹಾರಾಷ್ಟ್ರ (14.66%) ಮತ್ತು ರಾಜಸ್ಥಾನ (13.75%) ರಾಜ್ಯಗಳಲ್ಲಿ ಉತ್ಪಾದಿಸಲಾಗುತ್ತದೆ.
- ಭಾರತದಲ್ಲಿ ಗರಿಷ್ಠ ಉತ್ಪಾದನೆಯಾಗುವ ದ್ವಿದಳ ಧಾನ್ಯಗಳು ಕಡಲೆ (48%), ತೊಗರಿ (14%) ಉದ್ದು (12%) ಮತ್ತು ಹೆಸರುಕಾಳು (8%) ಮತ್ತು ಬೇಳೆ (7%).